ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮವಾಗಿ ಭಾರತಕ್ಕೆ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ವಾಣಿಜ್ಯ ಸಿಲಿಂಡರ್ಗಳ ಲಭ್ಯತೆ ಕಡಿಮೆಯಾಗಿದ್ದು, ಬೆಂಗಳೂರು ಹೋಟೆಲ್ ಮಾಲೀಕರ ಸಂಘವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ.
ಮೆನುವಿನಿಂದ ಸ್ನ್ಯಾಕ್ಸ್ ಔಟ್: ಹೆಚ್ಚು ಗ್ಯಾಸ್ ಬಳಸುವ ತಿಂಡಿಗಳಾದ ಬೋಂಡಾ, ಬಜ್ಜಿ, ಉದ್ದಿನ ವಡೆ, ಪಕೋಡ, ಗೋಬಿ ಮಂಚೂರಿಯನ್ ಮತ್ತು ಎಣ್ಣೆಯಲ್ಲಿ ಕರಿಯುವ ಪದಾರ್ಥಗಳ ತಯಾರಿಕೆಗೆ ಬ್ರೇಕ್ ಹಾಕಲು ಚಿಂತಿಸಿವೆ. ತೈಲ ಕಂಪನಿಗಳು ಏಕಾಏಕಿ ವಾಣಿಜ್ಯ ಸಿಲಿಂಡರ್ ಪೂರೈಕೆಯನ್ನು ಸ್ಥಗಿತಗೊಳಿಸಿರುವುದು ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ. ಸುಮಾರು 70% ಹೋಟೆಲ್ ಗಳು ಈಗಾಗಲೇ ಈ ಸಮಸ್ಯೆಯನ್ನು ಎದುರಿಸುತ್ತಿವೆ.
ಬಂದ್ ಸಾಧ್ಯತೆ: “ಗ್ಯಾಸ್ ಇಲ್ಲದೆ ಅಡುಗೆ ಮಾಡುವುದು ಅಸಾಧ್ಯ” ಎಂದು ಹೇಳಿರುವ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್, ಪರಿಸ್ಥಿತಿ ಸುಧಾರಿಸದಿದ್ದರೆ ಹೋಟೆಲ್ಗಳನ್ನು ಸಂಪೂರ್ಣವಾಗಿ ಮುಚ್ಚಬೇಕಾದ ಅನಿವಾರ್ಯತೆ ಬರಬಹುದು ಎಂದು ಎಚ್ಚರಿಸಿದ್ದಾರೆ.ಕೆಲವು ಹೋಟೆಲ್ಗಳು ಈಗಾಗಲೇ ಗ್ಯಾಸ್ ಕೊರತೆಯಿಂದಾಗಿ ಸೌದೆ ಒಲೆಗಳ ಮೊರೆ ಹೋಗಿವೆ.
ಗ್ರಾಹಕರ ಮೇಲೆ ಪ್ರಭಾವ
ತಿಂಡಿಗಳ ಲಭ್ಯತೆ ಕಡಿಮೆ: ಸಂಜೆ ವೇಳೆ ಸಿಗುತ್ತಿದ್ದ ಬಿಸಿ ಬಿಸಿ ಸ್ನ್ಯಾಕ್ಸ್ ಸಿಗುವುದು ಕಷ್ಟವಾಗಬಹುದು. ಒಂದು ವೇಳೆ ಸಿಲಿಂಡರ್ ಲಭ್ಯವಿದ್ದರೂ, ಅದರ ಬೆಲೆಯಲ್ಲಿ ಸುಮಾರು ₹115 ರಷ್ಟು ಏರಿಕೆ ಆಗಿರುವುದರಿಂದ ಹೋಟೆಲ್ ಆಹಾರದ ದರಗಳು ಕೂಡ ಹೆಚ್ಚಾಗುವ ಸಾಧ್ಯತೆ ಇದೆ.ಬೆಂಗಳೂರಿನ ಪಿಜಿಗಳಲ್ಲೂ ಗ್ಯಾಸ್ ಸಿಲಿಂಡರ್ ಸಿಗದೆ ದೋಸೆ, ಚಪಾತಿ ಮತ್ತು ಇಡ್ಲಿ ಮೆನುವಿನಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮಧ್ಯಪ್ರಾಚ್ಯದ ಯುದ್ಧ ಪರಿಸ್ಥಿತಿಯು ಶೀಘ್ರವೇ ತಿಳಿಯಾಗದಿದ್ದರೆ ಬೆಂಗಳೂರಿನ ಹೋಟೆಲ್ ಉದ್ಯಮಕ್ಕೆ ಇದು ದೊಡ್ಡ ಸವಾಲಾಗಲಿದೆ.

