HomeLatest Newsಹೊಸ 'ಬಾಡಿಗೆ ಕಾಯ್ದೆ' ಜಾರಿ ; ಮನೆ ಮಾಲೀಕರು ಇನ್ಮುಂದೆ ಈ 7 ನಿಯಮಗಳನ್ನು...

ಹೊಸ ‘ಬಾಡಿಗೆ ಕಾಯ್ದೆ’ ಜಾರಿ ; ಮನೆ ಮಾಲೀಕರು ಇನ್ಮುಂದೆ ಈ 7 ನಿಯಮಗಳನ್ನು ಪಾಲಿಸುವುದು ಕಡ್ಡಾಯ.!

ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಮತ್ತು ಮನೆ ಮಾಲೀಕರಿಗೆ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ಬಾಡಿಗೆ ಮಾರುಕಟ್ಟೆಯಲ್ಲಿ ಪಾರದರ್ಶಕತೆ ತರಲು ‘ಹೊಸ ಬಾಡಿಗೆ ಕಾಯ್ದೆ-2026’ (New Rental Rules) ಅನ್ನು ಜಾರಿಗೆ ತಂದಿದೆ. ಇನ್ಮುಂದೆ ಮನೆ ಮಾಲೀಕರು ತಮ್ಮ ಇಚ್ಛೆಯಂತೆ ಸೆಕ್ಯೂರಿಟಿ ಡೆಪಾಸಿಟ್ ಪಡೆಯುವಂತಿಲ್ಲ ಅಥವಾ ಬಾಡಿಗೆದಾರರಿಗೆ ಕಿರುಕುಳ ನೀಡುವಂತಿಲ್ಲ. ಮುಖ್ಯವಾಗಿ ಬೆಂಗಳೂರಿನಂತಹ ನಗರಗಳಲ್ಲಿ ಬಾಡಿಗೆದಾರರು ಎದುರಿಸುತ್ತಿದ್ದ ಡೆಪಾಸಿಟ್ ಸಮಸ್ಯೆ ಮತ್ತು ಖಾಸಗಿತನದ ಉಲ್ಲಂಘನೆಗೆ ಈ ಕಾನೂನು ಬ್ರೇಕ್ ಹಾಕಲಿದೆ.

ಹೌದು. ಬಾಡಿಗೆದಾರರಿಗೆ ನೆಮ್ಮದಿ ನೀಡುವ ನಿಟ್ಟಿನಲ್ಲಿ ಹೊಸ ಬಾಡಿಗೆ ನಿಯಮಗಳು ಜಾರಿಗೆ ಬಂದಿವೆ. ಇನ್ಮುಂದೆ ಬಾಡಿಗೆ ವಿಷಯದಲ್ಲಿ ಮನೆ ಮಾಲೀಕರಿಂದ ಯಾವುದೇ ಕಿರುಕುಳ ಇರುವುದಿಲ್ಲ. ಹೊಸ ಬಾಡಿಗೆ ಕಾಯ್ದೆಯಡಿ ನೀವು ತಿಳಿದುಕೊಳ್ಳಲೇಬೇಕಾದ 7 ಪ್ರಮುಖ ನಿಯಮಗಳು ಇಲ್ಲಿವೆ.

ಹೊಸ ಬಾಡಿಗೆ ಕಾಯ್ದೆಯ 7 ಪ್ರಮುಖ ನಿಯಮಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  1. ಮನೆಗೆ ಬರುವ 24 ಗಂಟೆ ಮುಂಚಿತವಾಗಿ ಮಾಹಿತಿ ನೀಡಬೇಕು: ಮನೆ ಮಾಲೀಕರು ಬಾಡಿಗೆಗೆ ಕೊಟ್ಟಿರುವ ಮನೆಗೆ ಪ್ರವೇಶಿಸಬೇಕಾದರೆ 24 ಗಂಟೆಗಳ ಮುಂಚಿತವಾಗಿ ಬಾಡಿಗೆದಾರರಿಗೆ ಮಾಹಿತಿ ನೀಡಬೇಕು. ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಈ ನಿಯಮ ಪಾಲಿಸುವುದು ಕಡ್ಡಾಯ. ಇದು ಬಾಡಿಗೆದಾರರ ಖಾಸಗಿತನವನ್ನು ಕಾಪಾಡುತ್ತದೆ.
  2. ವರ್ಷಕ್ಕೊಮ್ಮೆ ಮಾತ್ರ ಬಾಡಿಗೆ ಹೆಚ್ಚಳ: ಮನೆ ಬಾಡಿಗೆಯನ್ನು ಪ್ರತಿ 12 ತಿಂಗಳಿಗೊಮ್ಮೆ ಮಾತ್ರ ಹೆಚ್ಚಿಸಬೇಕು. ಬಾಡಿಗೆ ಹೆಚ್ಚಿಸುವ ಮೊದಲು ಮಾಲೀಕರು 90 ದಿನಗಳ ಮುಂಚಿತವಾಗಿ ಲಿಖಿತ ನೋಟಿಸ್ ನೀಡಬೇಕು.
  3. ಸೆಕ್ಯೂರಿಟಿ ಡೆಪಾಸಿಟ್ ಮಿತಿ: ಮನೆ ಮಾಲೀಕರು ಬಾಡಿಗೆದಾರರಿಂದ ಗರಿಷ್ಠ ಎರಡು ತಿಂಗಳ ಬಾಡಿಗೆಯನ್ನು ಮಾತ್ರ ಸೆಕ್ಯೂರಿಟಿ ಡೆಪಾಸಿಟ್ ಆಗಿ ಪಡೆಯಬೇಕು. ಇದರಿಂದ ಬಾಡಿಗೆದಾರರ ಮೇಲಿನ ಆರ್ಥಿಕ ಹೊರೆ ತಗ್ಗಲಿದೆ.
  4. ಬಲವಂತವಾಗಿ ಮನೆ ಖಾಲಿ ಮಾಡಿಸುವಂತಿಲ್ಲ: ಮನೆ ಮಾಲೀಕರು ಬಾಡಿಗೆದಾರರನ್ನು ಬಲವಂತವಾಗಿ ಅಥವಾ ಬೆದರಿಕೆ ಹಾಕಿ ಮನೆ ಖಾಲಿ ಮಾಡಿಸುವಂತಿಲ್ಲ. ಮನೆ ಖಾಲಿ ಮಾಡಿಸಬೇಕೆಂದರೆ ಬಾಡಿಗೆ ಒಪ್ಪಂದ (Rent Agreement) ಮತ್ತು ಕಾನೂನಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
  5. ಬಾಡಿಗೆ ಒಪ್ಪಂದದ ನೋಂದಣಿ ಕಡ್ಡಾಯ: ಬಾಡಿಗೆ ಒಪ್ಪಂದಕ್ಕೆ ಸಹಿ ಹಾಕಿದ 60 ದಿನಗಳ ಒಳಗೆ ಡಿಜಿಟಲ್ ಸ್ಟಾಂಪ್ ಮಾಡಿ ಅಧಿಕೃತವಾಗಿ ನೋಂದಣಿ (Register) ಮಾಡಿಸಬೇಕು. ಇದು ಮಾಲೀಕ ಮತ್ತು ಬಾಡಿಗೆದಾರರ ನಡುವೆ ಪಾರದರ್ಶಕತೆ ಕಾಪಾಡುತ್ತದೆ.
  6. ಮನೆಯ ದುರಸ್ತಿ ಮತ್ತು ನಿರ್ವಹಣೆ: ಮನೆಯಲ್ಲಿ ಯಾವುದೇ ಅಗತ್ಯ ದುರಸ್ತಿಗಳಿದ್ದರೆ ಮಾಲೀಕರು 30 ದಿನಗಳೊಳಗೆ ಪೂರೈಸಬೇಕು. ಒಂದು ವೇಳೆ ಮಾಲೀಕರು ಮಾಡದಿದ್ದರೆ, ಬಾಡಿಗೆದಾರರೇ ದುರಸ್ತಿ ಮಾಡಿಸಿ ಆ ವೆಚ್ಚವನ್ನು ಮಾಸಿಕ ಬಾಡಿಗೆಯಿಂದ ಕಡಿತಗೊಳಿಸಿಕೊಳ್ಳಬಹುದು.
  7. ಕಿರುಕುಳ ನೀಡಿದರೆ ಕಾನೂನು ಕ್ರಮ: ಬಾಡಿಗೆದಾರರಿಗೆ ಕಿರುಕುಳ ನೀಡುವುದು, ಮನೆಯ ಬೀಗ ಬದಲಾಯಿಸುವುದು, ನೀರು ಅಥವಾ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು ಶಿಕ್ಷಾರ್ಹ ಅಪರಾಧ. ಇಂತಹ ಕೃತ್ಯ ಎಸಗುವ ಮಾಲೀಕರು ಕಾನೂನು ರೀತ್ಯಾ ದಂಡ ಪಾವತಿಸಬೇಕಾಗುತ್ತದೆ.

ಯಾರಿಗೆ ಲಾಭ ?
ಈ ಹೊಸ ನಿಯಮಗಳು ಹೈದರಾಬಾದ್, ಬೆಂಗಳೂರಿನಂತಹ ನಗರಗಳಲ್ಲಿ ಬಾಡಿಗೆ ಮಾರುಕಟ್ಟೆಯನ್ನು ಹೆಚ್ಚು ಪಾರದರ್ಶಕಗೊಳಿಸಲಿವೆ. ಮಾಲೀಕರು ಮತ್ತು ಬಾಡಿಗೆದಾರರ ನಡುವಿನ ವಿವಾದಗಳನ್ನು ಕಡಿಮೆ ಮಾಡಲು ಮತ್ತು ಕಾನೂನು ರಕ್ಷಣೆ ನೀಡಲು ಈ ಕಾಯ್ದೆ ಸಹಕಾರಿಯಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular