HomeKarnatakaSHOCKING NEWS: ಮಗನನ್ನೇ ಕೊಚ್ಚಿ ಕೊಲೆಗೈದ ತಂದೆ ಅರೆಸ್ಟ್

SHOCKING NEWS: ಮಗನನ್ನೇ ಕೊಚ್ಚಿ ಕೊಲೆಗೈದ ತಂದೆ ಅರೆಸ್ಟ್

ಬಳ್ಳಾರಿ: ತಂದೆಯೇ ಮಗನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯಲ್ಲಿ ನಡೆದಿದೆ.

ಹೂವಿನಹಡಗಲಿಯ ಬೀರಬ್ಬಿಯಲ್ಲಿ ಪ್ಲಾಸ್ಟೀಕ್ ಚೀಲದಲ್ಲಿ ವ್ಯಕ್ತಿಯೋರ್ವರ ಶವ ತುಂಡರಿಸಿದ ರೀತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ತಂದೆಯೇ ಮಗನನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೀರೇಶ್ (25) ಕೊಲೆಯಾದ ಯುವಕ. ಲಕ್ಷ್ಮಪ್ಪ (55) ಮಗನನ್ನೇ ಕೊಂದ ತಂದೆ. ಪತ್ನಿಯ ಅನೈತಿಕ ಸಂಬಂಧಕ್ಕೆ ಮಗ ಕುಮ್ಮಕ್ಕು ಕೊಡುತ್ತಿದ್ದಾನೆ ಎಂಬ ಕಾರಣಕ್ಕೆ ಲಕ್ಷ್ಮಪ್ಪ, ಮಗನನ್ನೇ ಕೊಲೆಗೈದಿದ್ದಾನೆ.

15 ದಿನಗಳ ಹಿಂದೆಯೇ ಆರೋಪಿ ಮಗನನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಬೀರಬ್ಬಿ ಬಳಿ ಎಸೆದು ಹೋಗಿದ್ದ. ಎರಡು ದಿನಗಳ ಹಿಂದೆ ಸ್ಥಳೀಯರಿಗೆ ಈ ಪ್ರವೇಶದಲ್ಲಿ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿ ಪೊಲೀಸರು ಪ್ಲಾಸ್ಟೀಕ್ ಚೀಲದಲ್ಲಿ ತುಂಡು ಟುಂಡಾಗಿ ಕತ್ತರಿಸಿದ ಶವ ಕೊಳೆತ ಸ್ಥಿತಿಯಲ್ಲಿರುವುದನ್ನು ಪರಿಶೀಲಿಸಿದ್ದಾರೆ. ವೇಳೆ ಶವದ ಗುರುತ್ ಸಿಗದಷ್ಟರಮಟ್ಟಕ್ಕೆ ಕೊಳೆತು ಹೋಗಿತ್ತು.

ತನಿಖೆ ನಡೆಸಿದ ಪೊಲೀಸರು ಈಗ ಆರೋಪಿ ಲಕ್ಷ್ಮಪ್ಪನನ್ನು ಬಂಧಿಸಿದ್ದಾರೆ. ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular