ಪ್ರತಿವರ್ಷದಂತೆ ಈ ಬಾರಿಯೂ ವಿಶ್ವವಿಖ್ಯಾತ ಭವಿಷ್ಯವಾಣಿ ನುಡಿಯುವ ಬಾಬಾ ವಂಗಾ ಅವರ ಮುನ್ಸೂಚನೆಗಳು ಜಗತ್ತನ್ನು ಬೆಚ್ಚಿಬೀಳಿಸಿವೆ. 2026ರ ಯುಗಾದಿ ಹಬ್ಬದ ನಂತರ ಪ್ರಕೃತಿಯು ಮನುಷ್ಯನ ಹತೋಟಿ ಮೀರಿ ವಿಕೋಪಕ್ಕೆ ಸಾಕ್ಷಿಯಾಗಲಿದ್ದು, ಭೀಕರ ಭೂಕಂಪ, ಪ್ರವಾಹ ಹಾಗೂ ಮನುಕುಲಕ್ಕೆ ಕೃತಕ ಬುದ್ಧಿಮತ್ತೆಯಿಂದ (AI) ಅಪಾಯ ಕಾದಿದೆ ಎಂಬ ಆಘಾತಕಾರಿ ಭವಿಷ್ಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಹೌದು. 2026ನೇ ವರ್ಷ ಆರಂಭವಾಗಿ ಎರಡು ತಿಂಗಳು ಕಳೆದಿವೆ. ಈ ಬೆನ್ನಲ್ಲೇ ವಿಶ್ವವಿಖ್ಯಾತ ಭವಿಷ್ಯವಾಣಿ ನುಡಿಯುವ ಬಾಬಾ ವಂಗಾ ಅವರ ಹೆಸರು ಮತ್ತೆ ಸುದ್ದಿಯಲ್ಲಿದೆ. ಅವರು ಈ ಹಿಂದೆ ನುಡಿದಿದ್ದ ಅನೇಕ ಭವಿಷ್ಯಗಳು ನಿಜವಾಗಿರುವುದರಿಂದ, ಯುಗಾದಿ ನಂತರ ಅವರು ಹೇಳಿರುವ ವಿಷಯಗಳು ನಿಜವಾಗುತ್ತವೆಯೇ ಎಂದು ಅನೇಕರು ಆತಂಕಗೊಂಡಿದ್ದಾರೆ. ಕರೋನಾದಂತಹ ಮಹಾಮಾರಿಯ ಬಗ್ಗೆ ಮೊದಲೇ ನುಡಿದಿದ್ದ ಬಾಬಾ ವಂಗಾ ಅವರ ಈ ಭವಿಷ್ಯವಾಣಿ ನಿಜವಾಗುತ್ತದೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿದೆ.
- ಯುಗಾದಿ ನಂತರ ಬದಲಾಗಲಿದೆ ಪರಿಸ್ಥಿತಿ: 2026ರ ಯುಗಾದಿ ಹಬ್ಬದ ನಂತರ ಜಗತ್ತಿನ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಹಿಂದೆ ಕರೋನಾದಂತಹ ಮಹಾಮಾರಿಯ ಬಗ್ಗೆಯೂ ಇವರು ಮುನ್ಸೂಚನೆ ನೀಡಿದ್ದರು ಎನ್ನಲಾಗುತ್ತಿದೆ.
- ಪ್ರಕೃತಿ ವಿಕೋಪದ ಎಚ್ಚರಿಕೆ: ಯುಗಾದಿ ನಂತರ ಪ್ರಕೃತಿಯು ಮನುಷ್ಯನ ಹತೋಟಿ ಮೀರಿ ವರ್ತಿಸಲಿದೆ. ಭಯಂಕರ ಭೂಕಂಪಗಳು, ಭೀಕರ ಪ್ರವಾಹ ಮತ್ತು ಅತಿ ಭಾರಿ ಮಳೆಗಳು ಸಂಭವಿಸಿ ಜನಜೀವನ ಅಸ್ತವ್ಯಸ್ತವಾಗಲಿದೆ ಎಂದು ಅವರು ಅಂದಾಜಿಸಿದ್ದಾರೆ.
- ಕೃತಕ ಬುದ್ಧಿಮತ್ತೆ (AI) ಭೀತಿ: ಮನುಷ್ಯರನ್ನು ಹಿಂದಿಕ್ಕಿ ಕೃತಕ ಬುದ್ಧಿಮತ್ತೆ (AI) ಹೆಚ್ಚು ಜನಪ್ರಿಯವಾಗಲಿದ್ದು, ಇದು ಮಾನವಕುಲಕ್ಕೆ ಹೊಡೆತ ನೀಡುವ ಸಾಧ್ಯತೆಯಿದೆ ಎಂದು ಅವರು ಮುನ್ಸೂಚನೆ ನೀಡಿದ್ದಾರೆ.
- ಸಮುದ್ರದ ವಿಚಿತ್ರ ವಿದ್ಯಮಾನ: ಸಮುದ್ರದ ತಳಭಾಗದಲ್ಲಿರುವ ಜೀವಿಗಳು ಮೇಲ್ಭಾಗಕ್ಕೆ ಬಂದಾಗ ಭೂಮಿಯ ಮೇಲೆ ದೊಡ್ಡ ಗೊಂದಲ ಉಂಟಾಗಲಿದೆ. ಇಂತಹ ಒಂದಲ್ಲ ಎರಡಲ್ಲ ಅನೇಕ ವಿಪತ್ತುಗಳು ಭೂಮಿಯ ಮೇಲೆ ಭಾರಿ ನಷ್ಟವನ್ನು ಉಂಟುಮಾಡಲಿವೆ ಎಂದು ಬಾಬಾ ವಂಗಾ ಮೊದಲೇ ಭವಿಷ್ಯ ನುಡಿದಿದ್ದಾರೆ.

