ಬೆಂಗಳೂರು: ಕರ್ನಾಟಕ ಸರ್ಕಾರವು 2025-26ನೇ ಸಾಲಿನ ವರ್ಷಾಂತ್ಯದ ಬಿಲ್‌ಗಳನ್ನು ಖಜಾನೆಗೆ ಸಲ್ಲಿಸುವ ಕಾಲಮಿತಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದೆ. HRMS-2 ತಂತ್ರಾಂಶದಲ್ಲಿ ಉಂಟಾಗಿದ್ದ ತಾಂತ್ರಿಕ ಸಮಸ್ಯೆಯಿಂದಾಗಿ ನೌಕರರ ವೇತನ, ತುಟ್ಟಿಭತ್ಯೆ ಬಾಕಿ ಮತ್ತು ಗಳಿಕೆ ರಜೆ ನಗದೀಕರಣದ ಬಿಲ್‌ಗಳು ಬಾಕಿ ಉಳಿದಿದ್ದವು. ಈ ಹಿನ್ನೆಲೆಯಲ್ಲಿ ನೌಕರರ ಹಿತದೃಷ್ಟಿಯಿಂದ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಹೊಸ ಗಡುವು: ರಾಜ್ಯ, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ವ್ಯಾಪ್ತಿಯ ವೇತನ ಮತ್ತು ಇತರ ಬಿಲ್‌ಗಳನ್ನು ಸಲ್ಲಿಸಲು ಮಾರ್ಚ್ 10, 2026ರ ಸಂಜೆ 6:00 ಗಂಟೆಯವರೆಗೆ ಸಮಯಾವಕಾಶ ನೀಡಲಾಗಿದೆ.
ಯಾವ ಬಿಲ್‌ಗಳಿಗೆ ಅನ್ವಯ ?: ವೇತನ ಬಿಲ್‌ಗಳು, ವೇತನ ಬಾಕಿ, ಹಬ್ಬದ ಮುಂಗಡ, ಅನುದಾನಿತ ವೇತನ ಬಿಲ್‌ಗಳು, ಕಚೇರಿ ವೆಚ್ಚದ ಬಿಲ್‌ಗಳು (Contingency bills), ಮತ್ತು ಪ್ರಯಾಣ ಭತ್ಯೆ (TA) ಬಿಲ್‌ಗಳಿಗೆ ಇದು ಅನ್ವಯಿಸುತ್ತದೆ.
ವಿನಾಯಿತಿ: ಕೇಂದ್ರ ಪುರಸ್ಕೃತ ಯೋಜನೆಗಳು (EAP) ಮತ್ತು ಕೇಂದ್ರ ಯೋಜನೆಗಳ ಬಿಲ್‌ಗಳಿಗೆ ಈ ವಿಸ್ತರಣೆ ಅನ್ವಯಿಸುವುದಿಲ್ಲ.
ಅಧಿಕೃತ ಮಾಹಿತಿ: ಈ ಆದೇಶದ ಹೆಚ್ಚಿನ ವಿವರಗಳನ್ನು ಆರ್ಥಿಕ ಇಲಾಖೆಯ ಅಧಿಕೃತ ವೆಬ್‌ಸೈಟ್ www.finance.karnataka.gov.in ನಲ್ಲಿ ಪಡೆಯಬಹುದು.
| ಕ್ರಮ ಸಂಖ್ಯೆ | ಬಿಲ್ಗಳ ಸ್ವರೂಪ | ವಿವರಗಳು | ನಿಗದಿಪಡಿಸಲಾಗಿದ್ದ ದಿನಾಂಕ | ವಿಸ್ತರಿಸಲಾದ ದಿನಾಂಕ |
| 01 | State / ZP / TP ವೇತನ / ಇತರೆ ಸಾದಿಲ್ವಾರು ಬಿಲ್‌ಗಳು | ವೇತನ/ವೇತನ ಬಾಕಿ ಬಿಲ್‌ಗಳು/ಹಬ್ಬದ ಮುಂಗಡ ಬಿಲ್ಲು/ಅನುದಾನಿತ ವೇತನ ಬಿಲ್ಲು/ಇತರೆ ಅನುದಾನಿತ ಬಿಲ್‌ಗಳು / ಕಛೇರಿ ವೆಚ್ಚಕ್ಕೆ ಸಂಬಂಧಿಸಿದ ಸಾದಿಲ್ವಾರು ಬಿಲ್‌ಗಳು / ಪ್ರಯಾಣ ಭತ್ಯೆ ಬಿಲ್‌ಗಳು. ZP/TP ವೇತನ / ವೇತನೇತರ ಮತ್ತು ಅನುದಾನಿತ (GIA) ಬಿಲ್‌ಗಳು (EAP ಕೇಂದ್ರ ಪುರಸ್ಕೃತ ಹಾಗೂ ಕೇಂದ್ರ ಯೋಜನೆಗಳನ್ನು ಹೊರತುಪಡಿಸಿ.) | 16.02.2026 | 10.03.2026 ರಂದು 6.00 ಗಂಟೆ ವರೆಗೆ |



