HomeLatest NewsALERT : ಅಂದದ ಕಣಗಿಲೆ ಹೂವಿನಲ್ಲಿದೆ ಭೀಕರ ವಿಷ : ನಿಮ್ಮ ಮನೆಯಲ್ಲೂ ಈ ...

ALERT : ಅಂದದ ಕಣಗಿಲೆ ಹೂವಿನಲ್ಲಿದೆ ಭೀಕರ ವಿಷ : ನಿಮ್ಮ ಮನೆಯಲ್ಲೂ ಈ ಗಿಡವಿದ್ರೆ ತಕ್ಷಣ ಈ ಸುದ್ದಿ ಓದಿ !

ನಮ್ಮ ಮನೆಯ ಅಂಗಳಕ್ಕೆ ಮೆರುಗು ನೀಡುವ, ದೇವರ ಪೂಜೆಗೂ ಬಳಕೆಯಾಗುವ ಅಂದದ ಕಣಗಿಲೆ (Oleander) ಹೂವಿನ ಹಿಂದೆ ಅಡಗಿದೆಯೇ ಭೀಕರ ಮೃತ್ಯು? ಹೌದು, ನೋಡುಗರ ಕಣ್ಣಿಗೆ ಆಕರ್ಷಕವಾಗಿ ಕಾಣುವ ಈ ಗಿಡದ ಎಲೆ, ಹೂವು ಮತ್ತು ಹಾಲಿನಲ್ಲಿ ಪ್ರಾಣಕ್ಕೆ ಕುತ್ತು ತರಬಲ್ಲ ಘಾತಕ ವಿಷವಿದೆ ಎಂಬ ಆತಂಕಕಾರಿ ವಿಷಯ ಈಗ ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ.

ಇತ್ತೀಚಿನ ದಿನಗಳಲ್ಲಿ ಈ ಹೂವಿನ ಅರಿವಿಲ್ಲದ ಸೇವನೆಯಿಂದ ಸಾವು-ನೋವುಗಳು ಸಂಭವಿಸುತ್ತಿರುವುದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ನಿಮ್ಮ ಮನೆಯ ಮುಂದೆಯೂ ಈ ಗಿಡವಿದ್ದರೆ, ಅದರಲ್ಲೂ ಸಣ್ಣ ಮಕ್ಕಳಿದ್ದರೆ ನೀವು ಈ ಕೂಡಲೇ ಎಚ್ಚೆತ್ತುಕೊಳ್ಳಲೇಬೇಕು. ಈ ಗಿಡ ಎಷ್ಟು ಅಪಾಯಕಾರಿ? ತಜ್ಞರು ಏನು ಹೇಳುತ್ತಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಹೌದು. ಅನೇಕ ಜನರು ತಮ್ಮ ಮನೆಯ ಮುಂದೆ ಅಥವಾ ಗಾರ್ಡನ್ಗಳಲ್ಲಿ ಬಣ್ಣ ಬಣ್ಣದ ಹೂವಿನ ಗಿಡಗಳು, ಹಣ್ಣಿನ ಮರಗಳು ಹಾಗೂ ಆಯುರ್ವೇದ ಗುಣವುಳ್ಳ ಸಸ್ಯಗಳನ್ನು ಬೆಳೆಸಲು ಇಷ್ಟಪಡುತ್ತಾರೆ. ನೋಡುಗರ ಕಣ್ಣಿಗೆ ಅಂದವಾಗಿ ಕಾಣಲು ವೈವಿಧ್ಯಮಯ ಗಿಡಗಳನ್ನು ನೆಡುವುದು ಇಂದಿನ ಫ್ಯಾಶನ್ ಕೂಡ ಹೌದು. ಆದರೆ, ಈ ಅಂದದ ಹಿಂದೆಯೇ ಭೀಕರ ಅಪಾಯವೊಂದು ಅಡಗಿದೆ ಎಂಬುದು ಹಲವರಿಗೆ ತಿಳಿದಿಲ್ಲ.

ಕೆಲವರು ಅರಿವಿಲ್ಲದೆಯೇ ತಮ್ಮ ತೋಟದಲ್ಲಿ ವಿಷಕಾರಿ ಅಂಶಗಳನ್ನು ಹೊಂದಿರುವ ಗಿಡಗಳನ್ನು ಬೆಳೆಸುತ್ತಿದ್ದಾರೆ. ಇಂತಹ ಸಸ್ಯಗಳನ್ನು ಸ್ಪರ್ಶಿಸುವುದು ಅಥವಾ ಅವುಗಳ ಸಂಪರ್ಕಕ್ಕೆ ಬರುವುದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉಸಿರಾಟದ ಸಮಸ್ಯೆ ಮತ್ತು ಅಲರ್ಜಿಗೆ ಕಾರಣವಾಗಬಹುದು!
ಕೆಲವು ಹೂವಿನ ಗಿಡಗಳು ನೋಡಲು ಸುಂದರವಾಗಿದ್ದರೂ ಅವು ದೇಹಕ್ಕೆ ಹಾನಿಕಾರಕ. ಈ ಹೂವುಗಳ ಪರಾಗವು (Pollen) ಉಸಿರಾಟದ ಮೂಲಕ ದೇಹವನ್ನು ಪ್ರವೇಶಿಸಿದರೆ ಅಲರ್ಜಿ, ಸೀನು ಮತ್ತು ಕೆಮ್ಮಿನಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಷ್ಟೇ ಅಲ್ಲದೆ, ಚರ್ಮದ ಮೇಲೆ ತುರಿಕೆ ಮತ್ತು ದದ್ದುಗಳು ಉಂಟಾಗಬಹುದು.

ಯಾವುದು ಈ ಅಪಾಯಕಾರಿ ಗಿಡ?
ನೋಡಲು ಅತ್ಯಂತ ಆಕರ್ಷಕವಾಗಿ ಕಾಣುವ ಈ ಹೂವಿನ ಹೆಸರು ‘ಕಣಗಿಲೆ’ (Oleander/Kanheri). ಇದು ಕೆಂಪು ಮತ್ತು ಗುಲಾಬಿ ಬಣ್ಣಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಗಿಡದ ಎಲೆಗಳು ಮತ್ತು ಹೂವುಗಳನ್ನು ಮುಟ್ಟುವುದು ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ಈ ಎಲೆಗಳನ್ನು ತಿಂದರೆ ಅಥವಾ ಹೂವಿನ ಪರಾಗದ ಸಂಪರ್ಕಕ್ಕೆ ಬಂದರೆ ತೀವ್ರತರವಾದ ಅಲರ್ಜಿ ಉಂಟಾಗುತ್ತದೆ.
ಸ್ಥಳೀಯವಾಗಿ ‘ಕಸ್ತೂರಿ ಹೂವು’ ಎನ್ನುತ್ತಾರೆ.

ಗ್ರಾಮೀಣ ಮತ್ತು ನಗರ ಭಾಗದ ಬಹುತೇಕ ಮನೆಗಳ ಆವರಣದಲ್ಲಿ ಈ ಗಿಡಗಳು ಕಂಡುಬರುತ್ತವೆ. ಆದರೆ, ಈ ಗಿಡದಿಂದ ಬರುವ ಗಾಳಿ, ಹೂವು ಮತ್ತು ಎಲೆಗಳು ಉಸಿರಾಟದ ತೊಂದರೆಗೆ ಕಾರಣವಾಗುವುದರಿಂದ ಇವುಗಳನ್ನು ಮನೆಯ ಅಂಗಳದಲ್ಲಿ ಬೆಳೆಸದಿರುವುದೇ ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

ಪ್ರಮುಖ ಸೂಚನೆ: ಈ ಗಿಡದ ಯಾವುದೇ ಭಾಗವನ್ನು (ಹೂವು, ಎಲೆ ಅಥವಾ ಹಾಲು) ಮಕ್ಕಳು ಅಥವಾ ಸಾಕುಪ್ರಾಣಿಗಳು ಸೇವಿಸದಂತೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular