ಭಾರತೀಯರಿಗೆ ಚಿನ್ನ ಅಂದ್ರೆ ಕೇವಲ ಆಭರಣವಲ್ಲ, ಅದೊಂದು ಭಾವನೆ ಮತ್ತು ಆಪತ್ಕಾಲದ ಆಸ್ತಿ. ಆದರೆ, ಮನೆಯಲ್ಲಿ ಎಷ್ಟು ಬೇಕಾದರೂ ಚಿನ್ನ ಇಡಬಹುದು ಅಂದುಕೊಂಡರೆ ಅದು ತಪ್ಪು ಆದಾಯ ತೆರಿಗೆ ಇಲಾಖೆಯ (Income Tax) ನಿಯಮದ ಪ್ರಕಾರ ಮನೆಯಲ್ಲಿ ಚಿನ್ನ ಇಡಲು ನಿರ್ದಿಷ್ಟ ಮಿತಿಯಿದೆ. ಆ ಮಿತಿ ಮೀರಿದರೆ ದಾಖಲೆ ನೀಡುವುದು ಕಡ್ಡಾಯ
ಯಾರಿಗೆ ಎಷ್ಟು ಗ್ರಾಂ ಚಿನ್ನ ಇಡಲು ಅವಕಾಶ?
ಮನೆಯಲ್ಲಿ ಯಾವುದೇ ದಾಖಲೆ ಇಲ್ಲದೆ ಇಟ್ಟುಕೊಳ್ಳಬಹುದಾದ ಚಿನ್ನದ ಮಿತಿ ಹೀಗಿದೆ:
ವಿವಾಹಿತ ಮಹಿಳೆ: 500 ಗ್ರಾಂ ವರೆಗೆ.
ಅವಿವಾಹಿತ ಮಹಿಳೆ: 250 ಗ್ರಾಂ ವರೆಗೆ.
ಪುರುಷರು (ವಿವಾಹಿತ/ಅವಿವಾಹಿತ): ಕೇವಲ 100 ಗ್ರಾಂ ವರೆಗೆ.
ಪ್ರಮುಖ ಅಂಶಗಳು:
ಸೀಜ್ ಆಗಲ್ಲ: ನಿಗದಿತ ಮಿತಿಯೊಳಗೆ ಚಿನ್ನವಿದ್ದರೆ ಐಟಿ ದಾಳಿಯ ಸಂದರ್ಭದಲ್ಲಿ ಅಧಿಕಾರಿಗಳು ಅದನ್ನು ವಶಪಡಿಸಿಕೊಳ್ಳುವಂತಿಲ್ಲ.
ದಾಖಲೆ ಬೇಕು: ಒಂದು ವೇಳೆ ನಿಗದಿತ ಮಿತಿಗಿಂತ ಹೆಚ್ಚು ಚಿನ್ನವಿದ್ದರೆ, ಅದನ್ನು ಖರೀದಿಸಿದ ರಸೀದಿ ಅಥವಾ ಹಣದ ಮೂಲದ (Source of Income) ಪುರಾವೆ ನಿಮ್ಮ ಬಳಿ ಇರಬೇಕು.
ಪಾರಂಪರಿಕ ಚಿನ್ನ: ತಂದೆ-ತಾಯಿಯಿಂದ ಅಥವಾ ವಂಶಪಾರಂಪರ್ಯವಾಗಿ ಬಂದ ಚಿನ್ನಕ್ಕೆ ತೆರಿಗೆ ಇರುವುದಿಲ್ಲ, ಆದರೆ ಅತ್ತೆ ಅಥವಾ ಅಮ್ಮನಿಂದ ಬಂದಿದೆ ಎಂಬುದನ್ನು ಸಾಬೀತುಪಡಿಸಲು ದಾಖಲೆಗಳು ಬೇಕಾಗಬಹುದು.
ಮಾರಾಟದ ಮೇಲೆ ತೆರಿಗೆ: ನೀವು ಚಿನ್ನ ಖರೀದಿಸಿ 3 ವರ್ಷದೊಳಗೆ ಮಾರಿದರೆ ‘ಅಲ್ಪಾವಧಿ ಲಾಭ ತೆರಿಗೆ’ ಮತ್ತು 3 ವರ್ಷದ ನಂತರ ಮಾರಿದರೆ ‘ದೀರ್ಘಾವಧಿ ಲಾಭ ತೆರಿಗೆ’ ಅನ್ವಯವಾಗುತ್ತದೆ.
ಬಂಗಾರ ಇರಿಸಿಕೊಳ್ಳುವಾಗ ಈ ವಿಚಾರ ಗೊತ್ತಿರಲಿ
ನಮ್ಮಲ್ಲಿ ಬಂಗಾರ ಕೇವಲ ಆಭರಣವಲ್ಲ, ಅದೊಂದು ಭವಿಷ್ಯದ ಭದ್ರತೆ. ಆದರೆ ಅದನ್ನು ಇಟ್ಟುಕೊಳ್ಳುವಾಗ ಮತ್ತು ಖರೀದಿಸುವಾಗ ಈ ನಿಯಮಗಳನ್ನು ಪಾಲಿಸುವುದು ಅತೀ ಅಗತ್ಯ:
ಬಿಲ್‌ಗಳನ್ನು ಜೋಪಾನವಾಗಿರಿಸಿ: ನೀವು ಹೊಸದಾಗಿ ಚಿನ್ನ ಖರೀದಿಸಿದ್ದರೆ ಅದರ ಅಸಲಿ ಬಿಲ್ ಅನ್ನು ತುಂಬಾ ಜತನವಾಗಿ ಕಾಯ್ದಿರಿಸಿಕೊಳ್ಳಿ. ಐಟಿ ಇಲಾಖೆಯ ವಿಚಾರಣೆ ಎದುರಾದಾಗ ಇದು ನಿಮ್ಮ ಆಸ್ತಿಯ ಅಸಲಿ ಪುರಾವೆಯಾಗಿ ಕೆಲಸ ಮಾಡುತ್ತದೆ.
ನಗದು ಖರೀದಿಯ ಮಿತಿ: 2 ಲಕ್ಷ ರೂಪಾಯಿ ಒಳಗಿನ ಚಿನ್ನವನ್ನು ನಗದು ನೀಡಿ ಖರೀದಿಸುವುದು ಸುಲಭ. ಆದರೆ 2 ಲಕ್ಷಕ್ಕೂ ಹೆಚ್ಚಿನ ಮೊತ್ತದ ಚಿನ್ನವನ್ನು ನಗದು ನೀಡಿ ಖರೀದಿಸಲು ಈಗ ಕಾನೂನಿನ ಪ್ರಕಾರ ಅವಕಾಶವಿಲ್ಲ. ಅಂತಹ ದೊಡ್ಡ ಮೊತ್ತದ ಖರೀದಿಗೆ ಆನ್‌ಲೈನ್ ಪಾವತಿ ಅಥವಾ ಚೆಕ್ ಬಳಸುವುದು ಕಡ್ಡಾಯ.
ದಾಖಲೆಗಳೇ ಜೀವಾಳ: ನಿಮ್ಮ ಬಳಿ ಎಷ್ಟು ಬೇಕಾದರೂ ಚಿನ್ನ ಇಟ್ಟುಕೊಳ್ಳಲು ಅಡ್ಡಿಯಿಲ್ಲ, ಆದರೆ ಆ ಚಿನ್ನಕ್ಕೆ ತಕ್ಕ ದಾಖಲೆಗಳು (ಬಿಲ್ ಅಥವಾ ವಂಶಪಾರಂಪರ್ಯವಾಗಿ ಬಂದ ದಾಖಲೆ) ನಿಮ್ಮ ಬಳಿ ಇರಬೇಕು.

