ಚಿತ್ರದುರ್ಗದಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಪ್ರಮುಖವಾದ ಮಾಹಿತಿ ಒಂದಿದೆ. ಮಾರ್ಚ್ 11ರಂದು ಬೋಧಕ ಹುದ್ದೆಗಳ ನೇಮಕಾತಿಗಾಗಿ ಚಿತ್ರದುರ್ಗದಲ್ಲಿ ನೇರ ಸಂದರ್ಶನ ಆಯೋಜನೆ ಮಾಡಲಾಗಿದೆ.
ಚಿತ್ರದುರ್ಗ ನಗರದ ಹಳೆ ಬೆಂಗಳೂರು ರಸ್ತೆಯಲ್ಲಿರುವ ಜಿ.ಟಿ.ಟಿ.ಸಿ ಕಟ್ಟಡದಲ್ಲಿರುವ ಎನ್.ಐ.ಇ.ಎಲ್.ಐ.ಟಿ (ನ್ಯಾಷಿನಲ್ ಇನ್ಸಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಅಂಡ್ ಇನ್ಫರಮೇಷನ್ ಟೆಕ್ನಾಲಜಿ) ಎಕ್ಸ್ಟೆನ್ಶನ್ ಕೇಂದ್ರದಲ್ಲಿ ನೇರ ಸಂದರ್ಶನ ನಡೆಯಲಿದೆ.
ಮಾರ್ಚ್ 11ರಂದು ಬೆಳಗ್ಗೆ 9 ಗಂಟೆಗೆ ಒಪ್ಪಂದದ ಆಧಾರದ ಮೇಲೆ ಎರಡು ಬೋಧಕ ಹುದ್ದೆಗಳಿಗೆ ನೇರ ನೇಮಕಾತಿ ಸಂದರ್ಶನ ಹಮ್ಮಿಕೊಳ್ಳಲಾಗಿದೆ. ಆಸಕ್ತರು ವೆಬ್ಸೈಟ್ www.nielit.gov.in/calicut ಭೇಟಿ ನೀಡಬಹುದು.
ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಐಟಿ ವಿಷಯದಲ್ಲಿ ಬಿಇ, ಬಿ-ಟೆಕ್, ಸ್ನಾತಕೋತ್ತರ ಪದವಿ, ಎಂ.ಸಿ.ಎ. ಅಥವಾ ಬಿಸಿಎ ಪದವಿಗಳಲ್ಲಿ ವಿದ್ಯಾರ್ಹತೆ ಹೊಂದಿರುವವರು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ಆಸಕ್ತರು ಇತ್ತೀಚಿನ ಬಯೋಡೇಟಾ, ವಿದ್ಯಾಭ್ಯಾಸದ ಸ್ವಯಂ-ದೃಢೀಕೃತ ಪ್ರತಿ ಹಾಗೂ ಎಲ್ಲಾ ಮೂಲ ದಾಖಲೆಗಳ ಒಂದು ಸೆಟ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದು.
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿ ಡಾ.ರಾಣಾಶರ್ಮಾ ಅವರನ್ನು ಸಂಪರ್ಕಿಸಬಹುದು. ಮೊಬೈಲ್ ಸಂಖ್ಯೆ 9864020005, 9995427802.

