ಬೆಂಗಳೂರು: ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ಚುರುಕುಗೊಳಿಸಿರುವ ಬೆಂಗಳೂರು ಸಿಸಿಬಿ ಪೊಲೀಸರು ವಿವಿಧ ಪ್ರಕರಣಗಳಲ್ಲಿ 5.24 ಕೋಟಿ ರೂ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. 16 ಆರೋಪಿಗಳನ್ನು ಬಂಧಿಸಿದ್ದಾರೆ.
ಡ್ರಗ್ಸ್ ಪ್ರಕರಣಗಳಲ್ಲಿ ಇಬ್ಬರು ಮಹಿಳೆಯರು ಸೇರಿ ಒಟ್ಟು 16 ಪೆಡ್ಲರ್ಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿದೇಶಿ ಪ್ರಜೆಗಳು ಸೇರಿದಂತೆ ಹೊರ ರಾಜ್ಯದ 8 ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಜೊತೆಗೆ ನಗರದಲ್ಲಿ 5.24 ಕೋಟಿ ರೂ ಮೌಲ್ಯದ ಡ್ರಗ್ಸ್, ಮೂರು ಸಾವಿರ ಎಂಡಿಎಂ ಮಾತ್ರೆಗಳು ಮತ್ತು ಗಾಂಜಾವನ್ನು ಜಪ್ತಿ ಮಾಡಿದ್ದಾರೆ.
ನೈಜೀರಿಯಾ ಪ್ರಜೆಯ ಡ್ರಗ್ಸ್ ಡಿಲೀಂಗ್ಗೆ ಸಾಥ್ ಕೊಡುತ್ತಿದ್ದ ಮಹಿಳೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸುಭಾಷಿಣಿ ಬಂಧಿತ ಮಹಿಳೆ. ಬಾಗಲೂರು ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಳು. ಬಂಧಿತ ಸುಭಾಷಿಣಿ, ನೈಜೀರಿಯನ್ ಪ್ರಜೆಯೊಬ್ಬನ ಜೊತೆ ಸೇರಿ ಡ್ರಗ್ಸ್ ಡಿಲೀಂಗ್ ಮಾಡುತ್ತಿದ್ದಳು. ಸುಭಾಷಿಣಿ ಮನೆಯಲ್ಲಿ ಡ್ರಗ್ಸ್ ಶೇಖರಿಸಿಟ್ಟು, ನೈಜಿರಿಯನ್ ಪ್ರಜೆ ಸೂಚಿಸಿದ್ದ ವಿಳಾಸ, ಗ್ರಾಹಕರಿಗೆ ಸುಭಾಷಿಣಿ ತಲುಪಿಸುತ್ತಿದ್ದಳು.
ಇನ್ನು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ, ಬಂಧಿತಳಿಂದ 2 ಕೋಟಿ ರೂ ಮೌಲ್ಯದ 300 ಎಕ್ಸ್ ಟೆಸಿ ಮಾತ್ರೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪರಾರಿಯಾಗಿರುವ ವಿದೇಶಿ ಡ್ರಗ್ ಪೆಡ್ಲರ್ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

