HomeLatest NewsBREAKING : ಬೆಂಗಳೂರಲ್ಲಿ ಕೇರಳ ಪೊಲೀಸರ ಭರ್ಜರಿ ಕಾರ್ಯಾಚರಣೆ : 1 ಕೋಟಿ ಮೌಲ್ಯದ...

BREAKING : ಬೆಂಗಳೂರಲ್ಲಿ ಕೇರಳ ಪೊಲೀಸರ ಭರ್ಜರಿ ಕಾರ್ಯಾಚರಣೆ : 1 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ, ಪೆಡ್ಲರ್ ಅರೆಸ್ಟ್!


ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಾದಕ ವಸ್ತುಗಳ ಜಾಲದ ವಿರುದ್ಧ ಕೇರಳ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಆನ್ಲೈನ್ ಡೆಲಿವರಿ ಬಾಯ್ಸ್ ವೇಷದಲ್ಲಿ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಅಂತರರಾಜ್ಯ ಜಾಲವನ್ನು ಭೇದಿಸುವಲ್ಲಿ ಕೇರಳದ ಮಾದಕ ವಸ್ತು ನಿಗ್ರಹ ದಳ ಯಶಸ್ವಿಯಾಗಿದೆ.

ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಭಾರಿ ಪ್ರಮಾಣದ ಎಮ್ಡಿಎಮ್ಎ (MDMA) ಡ್ರಗ್ಸ್ ಮತ್ತು ಗಾಂಜಾ ವಶಕ್ಕೆ ಪಡೆಯಲಾಗಿದೆ..ಅಸ್ಸಾಂ ಮೂಲದ ಅಂತರರಾಜ್ಯ ಗಾಂಜಾ ಪೆಡ್ಲರ್ ಧೀರೇಶ್ ಕುಟುಮ್ (27) ಎಂಬಾತನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.ಬೆಂಗಳೂರಿನ ಮೈಲಸಂದ್ರ ವ್ಯಾಪ್ತಿಯ ರಮೇಶ್ ರೆಡ್ಡಿ ಬಡಾವಣೆಯ ನಿವಾಸವೊಂದರ ಮೇಲೆ ಈ ದಾಳಿ ನಡೆದಿದೆ.

ಹೇಗಿತ್ತು ಪೊಲೀಸರ ಸ್ಕೆಚ್?
ಖಚಿತ ಮಾಹಿತಿಯ ಮೇರೆಗೆ ಕೇರಳದಿಂದ ಬಂದ ವಿಶೇಷ ಪೊಲೀಸ್ ತಂಡ, ಮೈಲಸಂದ್ರದ ನಿವಾಸದ ಮೇಲೆ ದಾಳಿ ಮಾಡಿತು. ಈ ತಂಡವು ಆನ್ಲೈನ್ ಆಹಾರ ಅಥವಾ ಪಾರ್ಸೆಲ್ ಡೆಲಿವರಿ ನೀಡುವವರ ರೀತಿ ವೇಷ ಧರಿಸಿ ಡ್ರಗ್ಸ್ ಸರಬರಾಜು ಮಾಡುತ್ತಿತ್ತು ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಂತರರಾಜ್ಯ ಜಾಲದ ನಂಟು
ಬಂಧಿತ ಪೆಡ್ಲರ್ಗಳು ಬೆಂಗಳೂರಿನಿಂದ ಕೇರಳ ಮತ್ತು ಇತರ ರಾಜ್ಯಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು. ಆನ್ಲೈನ್ ಡೆಲಿವರಿ ಆ್ಯಪ್ಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ಅನುಮಾನ ಬರದಂತೆ ಈ ಅಕ್ರಮ ದಂಧೆ ನಡೆಸಲಾಗುತ್ತಿತ್ತು. ಸದ್ಯ ಪೊಲೀಸರು ಬಂಧಿತರಿಂದ ಮೊಬೈಲ್ ಫೋನ್ ಹಾಗೂ ಡ್ರಗ್ಸ್ ಜಪ್ತಿ ಮಾಡಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular