HomeLatest Newsಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆಗೊಂಡ ಪಹಣಿಗಳಲ್ಲಿ ಖಾತಾ ಬದಲಾವಣೆಗೆ ಅವಕಾಶ :  ರಾಜ್ಯ ಸರ್ಕಾರ ಆದೇಶ

ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆಗೊಂಡ ಪಹಣಿಗಳಲ್ಲಿ ಖಾತಾ ಬದಲಾವಣೆಗೆ ಅವಕಾಶ :  ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಕೃಷಿಯೇತರ ಉದ್ದೇಶಕ್ಕಾಗಿ ಭೂಪರಿವರ್ತನೆ (NA) ಗೊಂಡಿದ್ದರೂ, ಅಭಿವೃದ್ಧಿಯಾಗದ (Converted but Un-developed) ಜಮೀನುಗಳ ಪಹಣಿಗಳಲ್ಲಿ ಖಾತಾ ಬದಲಾವಣೆ ಮತ್ತು ನೋಂದಣಿ ಪ್ರಕ್ರಿಯೆಗೆ ಇದ್ದ ಅಡೆತಡೆಗಳನ್ನು ನಿವಾರಿಸಿ ಕಂದಾಯ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಭೂಪರಿವರ್ತನೆಗೊಂಡ ಜಮೀನುಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಎದುರಿಸುತ್ತಿದ್ದ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಕಂದಾಯ ಆಯುಕ್ತಾಲಯವು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಈ ಸೂಚನೆ ನೀಡಿದೆ.

ಆದೇಶದ ಪ್ರಮುಖ ಅಂಶಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  • ನೋಂದಣಿಗೆ ಅವಕಾಶ: ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆಗೊಂಡು ಇನ್ನೂ ಅಭಿವೃದ್ಧಿಯಾಗದ ಜಮೀನುಗಳ ಪಹಣಿಗಳನ್ನು ನೋಂದಣಿ ಪ್ರಕ್ರಿಯೆಗೆ ಮುಕ್ತಗೊಳಿಸಲು ‘ಭೂಮಿ’ ತಂತ್ರಾಂಶದಲ್ಲಿ ಅಗತ್ಯ ತಾಂತ್ರಿಕ ಬದಲಾವಣೆಗಳನ್ನು ಮಾಡಲಾಗಿದೆ.
  • ಮ್ಯುಟೇಶನ್ ತಿರಸ್ಕರಿಸುವಂತಿಲ್ಲ: ಕೇವಲ ಭೂಪರಿವರ್ತನೆ ಆಗಿದೆ ಎಂಬ ಕಾರಣ ನೀಡಿ ಮ್ಯುಟೇಶನ್ (ಖಾತಾ ಬದಲಾವಣೆ) ಅರ್ಜಿಯನ್ನು ತಿರಸ್ಕರಿಸದಂತೆ ಎಲ್ಲಾ ತಾಲೂಕು ತಹಶೀಲ್ದಾರರಿಗೆ ಮತ್ತು ಕಂದಾಯ ನಿರೀಕ್ಷಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
  • ಮಾರುಕಟ್ಟೆ ಮೌಲ್ಯದ ಅನ್ವಯ: ಇಂತಹ ಜಮೀನುಗಳ ನೋಂದಣಿ ಸಂದರ್ಭದಲ್ಲಿ ಕೃಷಿ ಜಮೀನೆಂದು ಪರಿಗಣಿಸದೆ, ಕೃಷಿಯೇತರ ಅಭಿವೃದ್ಧಿಯಾಗದ ಜಮೀನುಗಳಿಗೆ ನಿಗದಿಪಡಿಸಿದ ಪ್ರಚಲಿತ ಮಾರುಕಟ್ಟೆ ಮೌಲ್ಯದಂತೆ ಮುದ್ರಾಂಕ ಶುಲ್ಕವನ್ನು ಪಾವತಿಸಿಕೊಳ್ಳಲು ಕ್ರಮ ವಹಿಸಲಾಗುವುದು.
  • ತಾಂತ್ರಿಕ ಸಂಯೋಜನೆ: ಭೂಮಿ, ಇ-ಸ್ವತ್ತು ಮತ್ತು ಇ-ಆಸ್ತಿ ತಂತ್ರಾಂಶಗಳ ನಡುವೆ ಸಮನ್ವಯ ಸಾಧಿಸಲಾಗುತ್ತಿದ್ದು, ಆಸ್ತಿ ಗುರುತಿನ ಸಂಖ್ಯೆ (PID) ಲಭ್ಯವಿಲ್ಲದಿದ್ದರೂ ಪಹಣಿ ಆಧಾರದ ಮೇಲೆ ನಿಯಮಾನುಸಾರ ವಹಿವಾಟು ನಡೆಸಲು ಅನುಕೂಲ ಕಲ್ಪಿಸಲಾಗುತ್ತಿದೆ.

ಯಾರಿಗೆ ಅನುಕೂಲ?: ಭೂಪರಿವರ್ತನೆ ಮಾಡಿಸಿಕೊಂಡ ನಂತರ ಇ-ಖಾತಾ ಪಡೆಯಲು ವಿಳಂಬವಾಗುತ್ತಿದ್ದ ಕಾರಣ ಅಥವಾ ತಾಂತ್ರಿಕ ಕಾರಣಗಳಿಂದಾಗಿ ಆಸ್ತಿ ಮಾರಾಟ ಮಾಡಲು ಸಾಧ್ಯವಾಗದಿದ್ದ ಸಾರ್ವಜನಿಕರಿಗೆ ಮತ್ತು ಉದ್ದಿಮೆದಾರರಿಗೆ ಈ ನಿರ್ಧಾರದಿಂದ ದೊಡ್ಡ ಮಟ್ಟದ ನೆಮ್ಮದಿ ಸಿಗಲಿದೆ.ಈ ಆದೇಶವು ಫೆಬ್ರವರಿ 21, 2026 ರಂದು ಅಧಿಕೃತವಾಗಿ ಹೊರಬಿದ್ದಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular