HomeKarnatakaಪ್ರೆಸ್ಟೀಜ್ ಜೊತೆ ಒಪ್ಪಂದ ಬೆಳ್ಳಂದೂರು ಮೆಟ್ರೋ ನಿಲ್ದಾಣದ ವಿಶೇಷತೆಗಳು

ಪ್ರೆಸ್ಟೀಜ್ ಜೊತೆ ಒಪ್ಪಂದ ಬೆಳ್ಳಂದೂರು ಮೆಟ್ರೋ ನಿಲ್ದಾಣದ ವಿಶೇಷತೆಗಳು

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮತ್ತು ಪ್ರೆಸ್ಟೀಜ್ ಗ್ರೂಪ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ನಮ್ಮ ಮೆಟ್ರೋ ಹಂತ 2-ಎನಲ್ಲಿ ಹೊರ ವರ್ತುಲ ರಸ್ತೆಯಲ್ಲಿ ಬರುವ ನಿಲ್ದಾಣಕ್ಕೆ ಸಂಬಂಧಿಸಿದ ಒಪ್ಪಂದದ ಮೌಲ್ಯ 80 ಕೋಟಿ  ರೂ. ಆಗಿದೆ.

ಈ ಕುರಿತು ಬಿಎಂಆರ್‌ಸಿಎಲ್ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಈ ಪ್ರಕಟಣೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮತ್ತು ಪ್ರೆಸ್ಟೀಜ್ ಗ್ರೂಪ್ ನಡುವೆ ನಿರ್ಣಾಯಕ ಒಪ್ಪಂದಕ್ಕೆ ಸಹಿ ಎಂಬ ವಿಷಯವನ್ನು ಒಳಗೊಂಡಿದೆ.

ಬಿಎಂಆರ್‌ಸಿಎಲ್ ಫೆಬ್ರವರಿ 21ರಂದು ಪ್ರೆಸ್ಟೀಜ್ ಬೀಟಾ ಪ್ರಾಜೆಕ್ಟ್ಸ್‌ ಪ್ರೈವೇಟ್ ಲಿಮಿಟೆಡ್ (ಪ್ರೆಸ್ಟೀಜ್‌ ಗ್ರೂಪ್) ಜೊತೆ ಹಂತ-2ಎ ಹೊರ ವರ್ತುಲ ರಸ್ತೆ (ಒಆರ್‌ಆರ್) ಕಾರಿಡಾರ್‌ನ ಬೆಳ್ಳಂದೂರು ಮೆಟ್ರೋ ನಿಲ್ದಾಣದ ನಾಮಕರಣ ಹಕ್ಕುಗಳ ಒಪ್ಪಂದಕ್ಕೆ ಸಹಿ ಹಾಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಒಪ್ಪಂದದಂತೆ, ವಾಣಿಜ್ಯ ಕಾರ್ಯಾಚರಣೆ ಪ್ರಾರಂಭವಾದ ದಿನಾಂಕದಿಂದ 30 ವರ್ಷಗಳ ಕಾಲ ನಿಲ್ದಾಣವನ್ನು ‘ಪ್ರೆಸ್ಟೀಜ್ ಬೆಳ್ಳಂದೂರು ಮೆಟ್ರೋ ನಿಲ್ದಾಣ’ ಎಂದು ಕರೆಯಲಾಗುತ್ತದೆ. ನಾಮಕರಣ ಹಕ್ಕುಗಳು ಮತ್ತು ಇತರೆ ಅನುಕೂಲಗಳಿಗೆ ಸಂಬಂಧಿಸಿದ ಒಪ್ಪಂದದ ಮೌಲ್ಯ ರೂ 80 ಕೋಟಿ ಆಗಿದೆ ಎಂದು ಹೇಳಿದೆ.

ಮೆಟ್ರೋ ನಿಲ್ದಾಣದಿಂದ ಪ್ರೆಸ್ಟೀಜ್ ಆವರಣಕ್ಕೆ ಸಂಪರ್ಕಿಸುವ ವಿಶೇಷ ಪಾದಚಾರಿ ಮೇಲ್ಸೇತುವೆ (ಸ್ಕೈ-ವಾಕ್) ಆಯ್ಕೆ ಮಾಡಿದಲ್ಲಿ ಹೆಚ್ಚುವರಿ ರೂ 10 ಕೋಟಿ ಪಾವತಿಸಬೇಕಾಗುತ್ತದೆ. ಇದರಿಂದ ಒಟ್ಟು ಸಹಭಾಗಿತ್ವದ ಮೌಲ್ಯ 390 ಕೋಟಿಯಾಗುತ್ತದೆ.

ನಾನ್ ಫೇರ್ ಬಾಕ್ಸ್ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಮೆಟ್ರೋ ಜಾಲದ ಆರ್ಥಿಕ ಸ್ಥಿರತೆಯನ್ನು ಬಲಪಡಿಸುವ ಯೋಜನೆಯ ಭಾಗವಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.

ಈ ವ್ಯವಸ್ಥೆಯ ಭಾಗವಾಗಿ, ಪ್ರಯಾಣಿಕರ ಸೌಕರ್ಯಗಳು ಮತ್ತು ಒಳಾಂಗಣ ಗುಣಮಟ್ಟವನ್ನು ಮೇಲ್ದರ್ಜೆಗೇರಿಸಲು ಬಿಎಂಆರ್‌ಸಿಎಲ್‌ನೊಂದಿಗೆ ಸಮನ್ವಯದಿಂದ, ನಿಗದಿತ ಸುರಕ್ಷತೆ ಮತ್ತು ವಿನ್ಯಾಸ ಮಾನದಂಡಗಳನ್ನು ಅನುಸರಿಸುವ ಮೂಲಕ ನಿಲ್ದಾಣದ ನಿರ್ವಹಣೆಯ ಜವಾಬ್ದಾರಿಯನ್ನು ಪ್ರೇಸ್ಟಿಜ್ ಗ್ರೂಪ್ ವಹಿಸಿಕೊಳ್ಳಲಿದೆ.

ಈ ನಿಲ್ದಾಣವು ನಿಗಮದ ಸ್ವಾಮ್ಯದಲ್ಲಿ ಹಾಗೂ ನಿಯಂತ್ರಣದಲ್ಲಿರುವ ಸಾರ್ವಜನಿಕ ಆಸ್ತಿಯಾಗಿಯೇ ಉಳಿಯುತ್ತದೆ. ಒಪ್ಪಂದದಲ್ಲಿ ನಿಲ್ದಾಣದ ನಾಮಕರಣ ಹಕ್ಕುಗಳು, ಗರಿಷ್ಠ 1,000 ಚದರ ಅಡಿ ಒಳಾಂಗಣ ಜಾಹೀರಾತು ಹಕ್ಕುಗಳು ಹಾಗೂ ನಿಲ್ದಾಣದ ಆವರಣದಲ್ಲಿ 3,000 ಚದರ ಅಡಿ ವಾಣಿಜ್ಯ ಸ್ಥಳದ ಹಂಚಿಕೆ ಸೇರಿವೆ.

ನಿಯಂತ್ರಿತ ಅನುಮೋದನೆಗಳು ಮತ್ತು ಹೆಚ್ಚುವರಿ ರೂ 10 ಕೋಟಿ ಪಾವತಿಗೆ ಒಳಪಟ್ಟು, ನಿಲ್ದಾಣವನ್ನು ಸಂಪರ್ಕಿಸುವ ವಿಶೇಷ ಪಾದಚಾರಿ ಸ್ಕೈವಾಕ್ ಸಾಧ್ಯತೆಯನ್ನು ಒಪ್ಪಂದವು ಒದಗಿಸಿರುತ್ತದೆ. ಭವಿಷ್ಯದಲ್ಲಿ ಯೋಜನಾ ಹಂತದಲ್ಲಿ ಕಾರ್ಯಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಲು ಅಂತಹ ಸಂಪರ್ಕಕ್ಕಾಗಿ ವಿನ್ಯಾಸ ನಿಬಂಧನೆಗಳನ್ನು ಸೇರಿಸಲಾಗಿದೆ.

ಸಾರ್ವಜನಿಕ ಮಾಲೀಕತ್ವದ ಸಂಸ್ಥೆ ಯೊಂದಿಗೆ ಖಾಸಗಿ ಭಾಗವಹಿಸುವಿಕೆಯನ್ನು ಬಳಸಿಕೊಳ್ಳುವಲ್ಲಿ ಯಾ ಕಾರ್ಯಾಚರಣೆಯ ಸಮಗ್ರತೆಗೆ ಧಕ್ಕೆಯಾಗದಂತೆ ಮೆಟ್ರೋ ಮೂಲಸೌಕರ್ಯವನ್ನು ಹೆಚ್ಚಿಸಲು ಈ ಪಾಲುದಾರಿಕೆಯು ಒಂದು ಮೈಲಿಗಲ್ಲು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಬಣ್ಣಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಪ್ರೆಸ್ಟೀಜ್ ಗ್ರೂಪ್ ಜಗ್ಗಿ ಮರ್ವಾಹಾ ಅವರು, “ಬೆಂಗಳೂರು ನಗರದ ವೇಗವಾಗಿ ಬೆಳೆಯುತ್ತಿರುವ ಸಾರಿಗೆ ಆಧಾರಿತ ಅಭಿವೃದ್ಧಿ ವಲಯಗಳಲ್ಲಿ ನಗರ ಚಲನವಲನ ಮೂಲಸೌಕರ್ಯಕ್ಕೆ ಬೆಂಬಲ ನೀಡುವ ಮತ್ತು ಪ್ರಯಾಣಿಕರ ಅನುಭವವನ್ನು ಹೆಚ್ಚಿಸುವ ಸಂಸ್ಥೆಯ ಬದ್ಧತೆಯನ್ನು ಈ ಸಹಕಾರ ಪ್ರತಿಬಿಂಬಿಸುತ್ತದೆ” ಎಂದರು.

ಬೆಳ್ಳಂದೂರು ಮೆಟ್ರೋ ನಿಲ್ದಾಣವು ಹೊರ ವರ್ತುಲ ರಸ್ತೆಯ ಕಾರಿಡಾರ್‌ನ ಪ್ರಮುಖ ನಿಲ್ದಾಣವಾಗಿದ್ದು, ಬೆಂಗಳೂರಿನ ಐಟಿ ಮತ್ತು ವಾಣಿಜ್ಯ ಕೇಂದ್ರ ಪ್ರದೇಶಗಳಲ್ಲಿ ಗಣನೀಯ ಪ್ರಮಾಣದ ಪ್ರಯಾಣಿಕರಿಗೆ ಸೇವೆ ಸಲ್ಲಿಸಲಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular