ಬೆಂಗಳೂರು: ಚಿನ್ನದ ಬೆಲೆ ಇಳಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ಫೆಬ್ರವರಿ ಕೊನೆಯ ವಾರದ ಆರಂಭದಲ್ಲೇ ದೊಡ್ಡ ನಿರಾಸೆ ಎದುರಾಗಿದೆ. ಜಾಗತಿಕ ರಾಜಕೀಯ ಉದ್ವಿಗ್ನತೆಗಳ ಪರಿಣಾಮವಾಗಿ ಇಂದು (ಫೆಬ್ರವರಿ 23, ಸೋಮವಾರ) ಚಿನ್ನ ಮತ್ತು ಬೆಳ್ಳಿಯ ದರ ರಾಕೆಟ್ ವೇಗದಲ್ಲಿ ಏರಿಕೆ ಕಂಡಿದೆ. ಇವತ್ತಿನ ಮಾರ್ಕೆಟ್ನಲ್ಲಿ ಚಿನ್ನದ ಬೆಲೆ ಎಷ್ಟು ಜಾಸ್ತಿ ಆಗಿದೆ? ಬೆಳ್ಳಿ ಬೆಲೆ ಯಾವ ಮಟ್ಟಕ್ಕೆ ತಲುಪಿದೆ? ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
ಇಂದು ಚಿನ್ನದ ಬೆಲೆ ಎಷ್ಟಿದೆ? (24K & 22K)
ಇಂದು ಮಾರುಕಟ್ಟೆ ಆರಂಭವಾಗುತ್ತಿದ್ದಂತೆ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ ಬರೋಬ್ಬರಿ 2,070 ರೂಪಾಯಿ ಏರಿಕೆಯಾಗಿದೆ.
24 ಕ್ಯಾರೆಟ್ ಚಿನ್ನ (ಶುದ್ಧ ಬಂಗಾರ): ಇಂದು 1 ಗ್ರಾಂ ಬೆಲೆ 16,135 ರೂ. ದಾಖಲಾಗಿದ್ದು, 10 ಗ್ರಾಂ ಬೆಲೆ ಬರೋಬ್ಬರಿ 1,61,350 ರೂಪಾಯಿಗೆ ಮುಟ್ಟಿದೆ! (ನಿನ್ನೆ ಇದು 1,59,280 ರೂ. ಇತ್ತು).
22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ): ಇಂದು 1 ಗ್ರಾಂ ಬೆಲೆ 190 ರೂ. ಏರಿಕೆಯಾಗಿ 14,790 ರೂ. ತಲುಪಿದೆ. 10 ಗ್ರಾಂ ಚಿನ್ನದ ಬೆಲೆ 1,47,900 ರೂಪಾಯಿಗೆ ಜಿಗಿದಿದೆ.
ಬೆಳ್ಳಿ ಬೆಲೆಯಲ್ಲಿ ಏರಿಕೆ
ಬೆಳ್ಳಿ ಬೆಲೆ ಇವತ್ತು ಕೆಜಿಗೆ ಬರೋಬ್ಬರಿ 25,000 ರೂಪಾಯಿ ಏರಿಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದೆ. ಇಂದು ಒಂದು ಕೆಜಿ ಬೆಳ್ಳಿಯ ಬೆಲೆ 3,00,000 ರೂಪಾಯಿ (3 ಲಕ್ಷ ರೂ.) ದಾಖಲಾಗಿದೆ
ಬೆಲೆ ಏರಿಕೆಗೆ ಅಸಲಿ ಕಾರಣಗಳೇನು?
ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಆರ್ಥಿಕ ಮತ್ತು ರಾಜಕೀಯ ಬೆಳವಣಿಗೆಗಳೇ ಈ ಬೆಲೆ ಏರಿಕೆಗೆ ‘ವಿಲನ್’ಗಳಾಗಿವೆ:
ಇರಾನ್-ಅಮೆರಿಕ ಸಂಘರ್ಷ: ಇರಾನ್ ಜೊತೆಗಿನ ಒಪ್ಪಂದಕ್ಕೆ ಅಮೆರಿಕ ವಿಧಿಸಿರುವ 10 ದಿನಗಳ ಗಡುವು ಮತ್ತು ಮಿಲಿಟರಿ ಕ್ರಮದ ಎಚ್ಚರಿಕೆ ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿದೆ.
ಟ್ರಂಪ್ ಸುಂಕ ನೀತಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 15% ಪ್ರತಿಸುಂಕದ ಘೋಷಣೆ ಮತ್ತು ಡಾಲರ್ ಮೌಲ್ಯದ ಕುಸಿತ ಚಿನ್ನದ ಬೆಲೆಗೆ ತುಪ್ಪ ಸುರಿದಿದೆ.
ಯುದ್ಧದ ಭೀತಿ: ಉಕ್ರೇನ್-ರಷ್ಯಾ ಸಂಘರ್ಷ ಮತ್ತು ಚೀನಾ-ಅಮೆರಿಕ ನಡುವಿನ ಶೀತಲ ಸಮರದಿಂದಾಗಿ ಹೂಡಿಕೆದಾರರು ಷೇರು ಮಾರುಕಟ್ಟೆ ಬಿಟ್ಟು ಸುರಕ್ಷಿತವಾದ ಚಿನ್ನದತ್ತ ಮುಖ ಮಾಡಿದ್ದಾರೆ.
ಈ ತಿಂಗಳ ಆರಂಭದಲ್ಲಿ (ಫೆ. 1) 16,058 ರೂ. ಇದ್ದ ಚಿನ್ನದ ಬೆಲೆ, ಫೆಬ್ರವರಿ 2 ರಂದು ಕನಿಷ್ಠ 15,317 ರೂ. ಗೆ ಇಳಿದಿತ್ತು. ಆದರೆ ಕಳೆದ 10 ದಿನಗಳಿಂದ ಸತತವಾಗಿ ಏರಿಕೆ ಹಾದಿ ಹಿಡಿದಿರುವ ಬಂಗಾರ, ಈಗ ಮತ್ತೆ ದಾಖಲೆಯ ಮಟ್ಟಕ್ಕೆ (16,135 ರೂ.) ಬಂದು ನಿಂತಿದೆ.
24 ಕ್ಯಾರೆಟ್ (24K) ಚಿನ್ನದ ಇಂದಿನ ಬೆಲೆ
| ಚಿನ್ನದ ಪ್ರಮಾಣ (24K) | ಇಂದಿನ ಬೆಲೆ (ಫೆ. 23) | ನಿನ್ನೆಯ ಬೆಲೆ (ಫೆ. 22) | ಬೆಲೆ ಏರಿಕೆ |
|---|---|---|---|
| 1 ಗ್ರಾಂ | ₹16,135 | ₹15,928 | + ₹207 |
| 8 ಗ್ರಾಂ (1 ಪವನ್) | ₹1,29,080 | ₹1,27,424 | + ₹1,656 |
| 10 ಗ್ರಾಂ | ₹1,61,350 | ₹1,59,280 | + ₹2,070 |
| 100 ಗ್ರಾಂ | ₹16,13,500 | ₹15,92,800 | + ₹20,700 |
| ನಗರ | 24 ಕ್ಯಾರೆಟ್ ಚಿನ್ನದ ಬೆಲೆ (₹ ಪ್ರತಿ ಗ್ರಾಂ) |
|---|---|
| ಚೆನ್ನೈ | 16,211 |
| ಮುಂಬೈ | 16,135 |
| ದೆಹಲಿ | 16,150 |
| ಕೋಲ್ಕತ್ತಾ | 16,135 |
| ಬೆಂಗಳೂರು | 16,135 |
| ಹೈದರಾಬಾದ್ | 16,135 |
| ಕೇರಳ | 16,135 |
| ಪುಣೆ | 16,135 |
| ವಡೋದರಾ | 16,140 |
| ಅಹಮದಾಬಾದ್ | 16,140 |

