HomeIndiaವಿಚ್ಛೇದಿತ ಪತ್ನಿ, ಪುತ್ರನಿಗೆ 4 ಕೋಟಿ ರೂ. ಕಾರು ಗಿಫ್ಟ್ ನೀಡಿದ ಹಾರ್ದಿಕ್ ಪಾಂಡ್ಯ

ವಿಚ್ಛೇದಿತ ಪತ್ನಿ, ಪುತ್ರನಿಗೆ 4 ಕೋಟಿ ರೂ. ಕಾರು ಗಿಫ್ಟ್ ನೀಡಿದ ಹಾರ್ದಿಕ್ ಪಾಂಡ್ಯ

ಖ್ಯಾತ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರು ತಮ್ಮ ವಿಚ್ಛೇದಿತ ಪತ್ನಿ ನತಾಶಾ ಸ್ಟಾಂಕೋವಿಕ್ ಮತ್ತು ಪುತ್ರ ಅಗಸ್ತ್ಯನಿಗೆ 4 ಕೋಟಿ ರೂಪಾಯಿ ಬೆಲೆಯ ರೇಂಜ್ ರೋವರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ವಿಚ್ಛೇದನದ ನಂತರವೂ ಮಾಜಿ ಪತ್ನಿ ಮತ್ತು ಪುತ್ರ ನೊಂದಿದಿಗೆ ಹಾರ್ದಿಕ್ ಪಾಂಡ್ಯ ಉತ್ತಮ ಬಾಂಧವ್ಯ ಹೊಂದಿರುವುದಕ್ಕೆ ಕ್ರೀಡಾ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಾಂಡ್ಯ ಅವರು ಕಾರನ್ನು ಅಗಸ್ತ್ಯಾಗೆ ಉಡುಗೊರೆಯಾಗಿ ನೀಡಿದ್ದಾರೆ. ಅಗಸ್ತ್ಯ ಚಿಕ್ಕವನಾಗಿರುವುದರಿಂದ ನತಾಶಾ ಅವರೇ ಕಾರು ಓಡಿಸಲಿದ್ದಾರೆ. 2024ರಲ್ಲಿ ಪಾಂಡ್ಯ ಮತ್ತು ನತಾಶಾ ಬೇರೆಯಾಗಿದ್ದರು.

ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಬೇರ್ಪಟ್ಟರೂ ತಮ್ಮ ಮಗ ಅಗಸ್ತ್ಯನನ್ನು ಒಟ್ಟಿಗೆ ಬೆಳೆಸುವ ರೀತಿಯನ್ನು ಕ್ರೀಡಾಭಿಮಾನಿಗಳು ಇಷ್ಟಪಡುತ್ತಾರೆ. ಬೇರ್ಪಟ್ಟ ನಂತರವೂ ಅವರು ಯಾವಾಗಲೂ ತಮ್ಮ ಮಗುವಿಗೆ ಮೊದಲ ಸ್ಥಾನ ನೀಡುತ್ತಾರೆ. ಹಾರ್ದಿಕ್ ತನ್ನ ಮಾಜಿ ಪತ್ನಿಗೆ ಸುಮಾರು 4 ಕೋಟಿ ರೂ. ಮೌಲ್ಯದ ಫ್ಯಾನ್ಸಿ ಎಸ್‌ಯುವಿ ಲ್ಯಾಂಡ್ ರೋವರ್ ಡಿಫೆಂಡರ್ ಕಾರ್ ಉಡುಗೊರೆಯಾಗಿ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಫ್ಯಾಮಿಲಿ ಗ್ಯಾರೇಜ್‌ನಲ್ಲಿ ಹೊಳೆಯುವ ಕಪ್ಪು ಕಾರು ಕಾಣಿಸಿಕೊಂಡಾಗ ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕರು ಹಾರ್ದಿಕ್ ಅವರ ಉಡುಗೊರೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಂದೆಯ ಸ್ಥಾನವನ್ನು ನಿಭಾಯಿಸುವ ಬಗ್ಗೆ ಹಾರ್ದಿಕ್ ಪಾಂಡ್ಯ

ಎರಡು ವರ್ಷಗಳ ಹಿಂದೆ ವಿಚ್ಛೇದನದ ನಂತರವೂ, ಇಬ್ಬರೂ ಅಗಸ್ತ್ಯನನ್ನು ಬೆಳೆಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಹಾರ್ದಿಕ್ ತನ್ನ ವೈಯಕ್ತಿಕ ಜೀವನದಲ್ಲಿ ಪ್ರಗತಿ ಸಾಧಿಸಿದ್ದರೂ, ಇತ್ತೀಚೆಗೆ ಮಹಿಕಾ ಶರ್ಮಾ ಅವರೊಂದಿಗಿನ ಪ್ರಣಯಕ್ಕಾಗಿ ಸುದ್ದಿಯಲ್ಲಿದ್ದರೂ ಅವರು ಯಾವಾಗಲೂ ತಂದೆ ಸ್ಥಾನಕ್ಕೆ ಆದ್ಯತೆ ನೀಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular