HomeLatest Newsಇದು ಪ್ರಪಂಚದ ಅತ್ಯಂತ ದುಬಾರಿ ಅಕ್ಕಿ ! ಇದರ ಬೆಲೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ..!

ಇದು ಪ್ರಪಂಚದ ಅತ್ಯಂತ ದುಬಾರಿ ಅಕ್ಕಿ ! ಇದರ ಬೆಲೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ..!

ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಬಳಸುವ ಅಕ್ಕಿಯ ಬೆಲೆ ಕೆಜಿಗೆ ₹50 ರಿಂದ ₹150 ರವರೆಗೆ ಇರುತ್ತದೆ. ಬಾಸುಮತಿ ತಳಿಯಾದರೆ ಇನ್ನೂ ಸ್ವಲ್ಪ ಹೆಚ್ಚಿರಬಹುದು. ಆದರೆ ಪ್ರಪಂಚದಲ್ಲಿ ಒಂದು ವಿಶೇಷ ರೀತಿಯ ಅಕ್ಕಿಯಿದೆ, ಅದರ ಬೆಲೆ ಕೇಳಿದರೆ ಅಚ್ಚರಿಯಾಗುತ್ತದೆ. ಜಪಾನ್ ದೇಶದ ”ಕಿನ್‌ಮೆಮಾಯ್ ಪ್ರೀಮಿಯಂ” (Kinmemai Premium) ಅಕ್ಕಿಯ ಬೆಲೆ ಒಂದು ಕೆಜಿಗೆ ಸುಮಾರು ₹12,500 ರಿಂದ₹15,000 ರವರೆಗೆ ಇರುತ್ತದೆ. ಅಂದರೆ ಒಂದು ಬ್ರಾಂಡೆಡ್ ಸ್ಮಾರ್ಟ್‌ಫೋನ್ ಖರೀದಿಸುವಷ್ಟು ಹಣವನ್ನು ಕೇವಲ ಒಂದು ಕೆಜಿ ಅಕ್ಕಿಗೆ ವ್ಯಯಿಸಬೇಕಾಗುತ್ತದೆ. ಇದೇ ಕಾರಣಕ್ಕೆ ಇದು ವಿಶ್ವದ ಅತ್ಯಂತ ದುಬಾರಿ ಅಕ್ಕಿ ಎಂದು ಗುರುತಿಸಲ್ಪಟ್ಟಿದೆ.

ಗಿನ್ನೆಸ್ ದಾಖಲೆ ಬರೆದ ದುಬಾರಿ ಅಕ್ಕಿ

ಈ ಅಪರೂಪದ ಅಕ್ಕಿಯನ್ನು ಜಪಾನ್‌ನ ‘‘ಟೋಯೋ ರೈಸ್ ಕಾರ್ಪೊರೇಷನ್’‘ ಉತ್ಪಾದಿಸುತ್ತದೆ. 2016ರಲ್ಲಿ ಈ ಅಕ್ಕಿಗೆ ವಿಶ್ವದ ಅತ್ಯಂತ ದುಬಾರಿ ಅಕ್ಕಿ ಎಂದು ‘‘ಗಿನ್ನೆಸ್ ವರ್ಲ್ಡ್ ರೆಕಾರ್ಡ್’‘ ಮಾನ್ಯತೆ ಲಭಿಸಿದೆ. ಮಾರುಕಟ್ಟೆಯ ಪರಿಸ್ಥಿತಿಗೆ ಅನುಗುಣವಾಗಿ ಇದರ ಬೆಲೆ ಬದಲಾಗುತ್ತಿರುತ್ತದೆ. ಇದರ ಮೌಲ್ಯ ಕೇವಲ ಬೆಲೆಯಲ್ಲಿ ಮಾತ್ರವಲ್ಲ, ತಯಾರಿಸುವ ವಿಧಾನದಲ್ಲೂ ಅಡಗಿದೆ. ವರ್ಷಕ್ಕೆ ಕೇವಲ 1000 ಬಾಕ್ಸ್‌ಗಳನ್ನು ಮಾತ್ರ ಉತ್ಪಾದಿಸುವುದರಿಂದ ಇದು ಮತ್ತಷ್ಟು ವಿಶೇಷವಾಗಿದೆ. ಜಪಾನ್‌ನಲ್ಲಿ ಇದನ್ನು ಕೇವಲ ಆಹಾರವಾಗಿ ಬಳಸದೆ, ಐಷಾರಾಮಿ ಉಡುಗೊರೆಯಾಗಿ ನೀಡಲಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಿನ್‌ಮೆಮಾಯ್ ಪ್ರೀಮಿಯಂ ಕೇವಲ ಒಂದು ರೀತಿಯ ಅಕ್ಕಿಯಲ್ಲ. ಜಪಾನ್‌ನ ಗುನ್ಮಾ (Gunma), ನಾಗಾನೋ (Nagano), ಮತ್ತು ನಿಗಾಟಾ (Niigata) ಪ್ರಾಂತ್ಯಗಳಲ್ಲಿ ಬೆಳೆಯುವ ‘ಕೋಶಿಹಿಕಾರಿ’ ಮತ್ತು ‘ಪಿಕಾಮಾರು’ ಅಂತಹ ಐದು ಅತ್ಯುತ್ತಮ ತಳಿಯ ಅಕ್ಕಿಗಳನ್ನು ಮಿಶ್ರಣ ಮಾಡಿ ಇದನ್ನು ತಯಾರಿಸಲಾಗುತ್ತದೆ. ಈ ಸಮ್ಮಿಶ್ರಣವೇ ಅದರ ಅಸಾಧಾರಣ ರುಚಿಗೆ ಮೂಲ ಕಾರಣ. ಕೊಯ್ಲಿನ ನಂತರ ಈ ಅಕ್ಕಿಯನ್ನು ತಕ್ಷಣ ಮಾರುಕಟ್ಟೆಗೆ ಬಿಡುಗಡೆ ಮಾಡುವುದಿಲ್ಲ. ಸುಮಾರು ಆರು ತಿಂಗಳ ಕಾಲ ವಿಶೇಷ ಪರಿಸ್ಥಿತಿಯಲ್ಲಿ ಸಂಗ್ರಹಿಸಿಡಲಾಗುತ್ತದೆ. ಈ ಅವಧಿಯಲ್ಲಿ ಅಕ್ಕಿಯ ಗುಣಮಟ್ಟ ಸುಧಾರಿಸಿ, ರುಚಿ ಮತ್ತಷ್ಟು ಹೆಚ್ಚುತ್ತದೆ ಎಂದು ಸಂಸ್ಥೆ ಹೇಳುತ್ತದೆ.

ಬೆಣ್ಣೆಯಂತೆ ಕರಗುವ ರುಚಿ

ಈ ಅಕ್ಕಿಯ ಮತ್ತೊಂದು ಪ್ರಮುಖ ವೈಶಿಷ್ಟ್ಯವೆಂದರೆ ಇದರ ಪಾಲಿಶ್ ಮಾಡುವ ವಿಧಾನ. ಪೇಟೆಂಟ್ ಪಡೆದ ವಿಶೇಷ ‘ಬಫಿಂಗ್‘ ಪ್ರಕ್ರಿಯೆಯ ಮೂಲಕ ಅಕ್ಕಿಯ ಮೇಲ್ಪದರವನ್ನು ತೆಗೆದರೂ, ಅದರಲ್ಲಿರುವ ಪ್ರಮುಖ ಪೌಷ್ಟಿಕಾಂಶಗಳು ನಾಶವಾಗದಂತೆ ಕಾಪಾಡಲಾಗುತ್ತದೆ. ಇದರಿಂದ ಅಕ್ಕಿಯ ನೈಸರ್ಗಿಕ ಗುಣಗಳು ಹಾಗೆಯೇ ಇರುತ್ತವೆ. ಈ ಅಕ್ಕಿಯಿಂದ ಮಾಡಿದ ಅನ್ನವು ಸ್ಫಟಿಕದಂತೆ ಹೊಳೆಯುತ್ತದೆ. ರುಚಿ ಸ್ವಲ್ಪ ಸಿಹಿಯಾಗಿದ್ದು, ಬಾಯಲ್ಲಿ ಇಟ್ಟರೆ ಬೆಣ್ಣೆಯಂತೆ ಕರಗಿ ಹೋಗುತ್ತದೆ ಎಂದು ಇದನ್ನು ಸವಿದವರು ಹೇಳುತ್ತಾರೆ.

ಸಾಮಾನ್ಯ ಆಹಾರ ಪದಾರ್ಥವೂ ಸಹ ಸರಿಯಾದ ನೈಪುಣ್ಯತೆ, ವೈಜ್ಞಾನಿಕ ಪದ್ಧತಿ ಮತ್ತು ಗುಣಮಟ್ಟದ ನಿಯಂತ್ರಣದೊಂದಿಗೆ ಸೇರಿದರೆ ಎಷ್ಟು ಐಷಾರಾಮಿಯಾಗಿ ಬದಲಾಗಬಹುದು ಎಂಬುದಕ್ಕೆ ಕಿನ್‌ಮೆಮಾಯ್ ಪ್ರೀಮಿಯಂ ಅಕ್ಕಿಯೇ ಸಾಕ್ಷಿ. ಬೆಲೆಯ ದೃಷ್ಟಿಯಿಂದ ಎಲ್ಲರಿಗೂ ಲಭ್ಯವಿಲ್ಲದಿದ್ದರೂ, ಜಾಗತಿಕವಾಗಿ ಐಷಾರಾಮಿ ಆಹಾರ ಉತ್ಪನ್ನಗಳ ಪಟ್ಟಿಯಲ್ಲಿ ಇದು ವಿಶೇಷ ಸ್ಥಾನ ಪಡೆದಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular