ರಾಜ್ಯದ ಎಲ್ಲಾ ‘ಎ’ ಮತ್ತು ‘ಬಿ’ ಗ್ರೇಡ್ ದೇವಾಲಯಗಳಲ್ಲಿ ಸಿನಿಮಾ, ಧಾರಾವಾಹಿ, ಸಾಕ್ಷ್ಯಚಿತ್ರ, ಸುದ್ದಿ ವಾಹಿನಿಗಳು ಹೀಗೆ ಯಾವುದೇ ತರಹದ ಚಿತ್ರೀಕರಣ ಮಾಡಬೇಕಾಗಿದ್ದಲ್ಲಿ, ಮುಜರಾಯಿ ಇಲಾಖೆಯ ಅನುಮತಿ ಪಡೆದು ಶುಲ್ಕ ಪಾವತಿಸುವುದು ಕಡ್ಡಾಯವಾಗಿದೆ.
ಇತ್ತೀಚೆಗೆ ಅನೇಕರು ಮೊಬೈಲ್ ಗಳಲ್ಲಿ ವಿಡಿಯೋ ಚಿತ್ರೀಕರಣ, ರೀಲ್ಸ್, ಯೂಟ್ಯೂಬ್ ಚಾನಲ್ ಗಳು, ಇತರೆ ಕೆಲವರು ವಾಣಿಜ್ಯ ಉದ್ದೇಶಗಳಿಗೆ ದೇವಾಲಯದ ಪಾವಿತ್ರ್ಯತೆ ಹಾಳು ಮಾಡುವ ಮತ್ತು ಧಾರ್ಮಿಕತೆಗೆ ಧಕ್ಕೆ ತರುವ ರೀತಿ ಬಿಂಬಿಸಲಾಗುತ್ತಿದೆ. ಹೀಗಾಗಿ ಕೆಲವು ಷರತ್ತುಗಳನ್ನು ವಿಧಿಸುವ ಮೂಲಕ ಚಿತ್ರೀಕರಣದ ವೇಳೆ ದೇವಾಲಯಗಳ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ 2012ರಲ್ಲಿ ಹೊರಡಿಸಲಾದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಜರಾಯಿ ಇಲಾಖೆ ಕ್ರಮ ಕೈಗೊಂಡಿದೆ.

