HomeFeatured Newsಬೇಸಿಗೆ ಆರಂಭ: ಬೋರ್‌ವೆಲ್ ಕೊರೆಯಲು ನಿಯಮಗಳು

ಬೇಸಿಗೆ ಆರಂಭ: ಬೋರ್‌ವೆಲ್ ಕೊರೆಯಲು ನಿಯಮಗಳು

ಬೇಸಿಗೆ ಆರಂಭವಾಗಿದೆ ಕುಡಿಯುವ ನೀರಿಗಾಗಿ, ಬೆಳೆಗಳಿಗೆ ನೀರು ಹಾಯಿಸಲು ರೈತರು ಬೋರ್‌ವೆಲ್ ಕೊರೆಸಲು ಪ್ರಾರಂಭಿಸುತ್ತಾರೆ. ಆದರೆ ಬೋರ್‌ವೆಲ್ ಕೊರೆಯಲು ನಿಯಮಗಳಿವೆ. ಅವುಗಳನ್ನು ಪಾಲನೆ ಮಾಡಬೇಕಿದೆ.

ಜಿಲ್ಲಾಡಳಿತ ಈ ವಿಚಾರದಲ್ಲಿ ಮೇಲ್ವಿಚಾರಣೆ ಮಾಡುತ್ತದೆ. ಜಿಲ್ಲೆಯ ಎಲ್ಲಾ ಕೊಳವೆ ಬಾವಿ ಕೊರೆಯುವ ಮಾಲೀಕರು ಕೊಳವೆಬಾವಿಗಳನ್ನು ಕೊರೆಸುವಾಗ ನಿಬಂಧನೆಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಈಗಾಗಲೇ ಸೂಚನೆಗಳನ್ನು ನೀಡಿದ್ದಾರೆ.

ಕೊಳವೆ ಬಾವಿ ಕೊರೆಯುವಾಗ ಎಲ್ಲಾ ಮಾಲೀಕರು ಕಡ್ಡಾಯವಾಗಿ 7ಎ ಪ್ರಮಾಣ ಪತ್ರವನ್ನು ಪಡೆಯಬೇಕು. ಕೊಳವೆ ಬಾವಿ ಕೊರೆಯುವಾಗ ರೈತರಿಗೆ ತೊಂದರೆಯಾಗದಂತೆ ಸರ್ಕಾರದ ಏಕರೂಪ ದರಪಟ್ಟಿಯಲ್ಲಿ ನಿಗದಿಪಡಿಸಿರುವ ದರಗಳನ್ನು ಪಡೆಯಬೇಕು. ಇದಕ್ಕಿಂತ ಹೆಚ್ಚು ಮೊತ್ತವನ್ನು ರೈತರಿಂದ ವಸೂಲಿ ಮಾಡಬಾರದು ಎಂದು ಎಚ್ಚರಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೊಳವೆಬಾವಿ ಕೊರೆಯಲು ನಿಯಮಗಳು

  • ಕೊಳವೆ ಬಾವಿ ಕೊರೆದ ನಂತರ ವಿಫಲವಾದರೆ ಅದನ್ನು ಸುರಕ್ಷಿತವಾಗಿ ಮುಚ್ಚಬೇಕು
  •  5.0ಮೀ ಕೇಸಿಂಗ್ ಹಾಕಿ ಅದರ ಮುಚ್ಚಳ ಮುಚ್ಚವಂತೆ ಕ್ರಮ ವಹಿಸುವುದು
  • 7ಎ ಪ್ರಮಾಣ ಪತ್ರವನ್ನು ಪಡೆಯದ ಮಾಲೀಕರ ಮೇಲೆ ಪೊಲೀಸರಿಂದ ಕ್ರಮ
  • ಸರ್ಕಾರಿ ಕಾಮಗಾರಿಗಳಿಗೆ ಕಡ್ಡಾಯವಾಗಿ 7ಎ ಹೊಂದಿರುವವರಿಂದಲೇ ಕಾಮಗಾರಿ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular