HomeLatest Newsಬೆಂಗಳೂರಲ್ಲಿ ಸಿನಿಮೀಯ ಮಾದರಿಯಲ್ಲಿ 'ಸ್ಪಾ ಉದ್ಯೋಗಿಯ ಕಿಡ್ನ್ಯಾಪ್' : ಬೆಚ್ಚಿಬಿದ್ದ ಜನ !

ಬೆಂಗಳೂರಲ್ಲಿ ಸಿನಿಮೀಯ ಮಾದರಿಯಲ್ಲಿ ‘ಸ್ಪಾ ಉದ್ಯೋಗಿಯ ಕಿಡ್ನ್ಯಾಪ್’ : ಬೆಚ್ಚಿಬಿದ್ದ ಜನ !

ಬೆಂಗಳೂರು: ರಾಜಧಾನಿಯ ಬೇಗೂರು ವ್ಯಾಪ್ತಿಯಲ್ಲಿ ಹಾಡಹಗಲೇ ಸಿನಿಮೀಯ ಮಾದರಿಯಲ್ಲಿ ವ್ಯಕ್ತಿಯೊಬ್ಬನನ್ನು ಕಿಡ್ನ್ಯಾಪ್ ಮಾಡಲಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.ನಿನ್ನೆ ರಾತ್ರಿ 9:30 ರ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಬಿಹಾರ ಮೂಲದ ಅಶೀಶ್ ಜ್ಹಾ (29) ಎಂಬಾತ ಕಿಡ್ನ್ಯಾಪ್ ಆದ ವ್ಯಕ್ತಿ. ಈತ ಅಕ್ಷಯನಗರದಲ್ಲಿ ಸ್ಪಾ ಒಂದನ್ನು ನಡೆಸುತ್ತಿದ್ದನು. ಕೆಲಸ ಮುಗಿಸಿ ಎಲೆಕ್ಟ್ರಾನಿಕ್ ಸಿಟಿಯ ಬೆಟ್ಟದದಾಸಪುರದಲ್ಲಿರುವ ತನ್ನ ಮನೆಗೆ ಬೈಕ್‌ನಲ್ಲಿ ವಾಪಸಾಗುತ್ತಿದ್ದಾಗ ಈ ಘಟನೆ ನಡೆದಿದೆ.

ಅಶೀಶ್’ನನ್ನು ಹಿಂಬಾಲಿಸಿಕೊಂಡು ಬಂದ ಮೂವರು ದುಷ್ಕರ್ಮಿಗಳು, ಕಾರಿನಿಂದ ಆತನ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ.ಡಿಕ್ಕಿಯ ರಭಸಕ್ಕೆ ಅಶೀತ್ ಕೆಳಗೆ ಬೀಳುತ್ತಿದ್ದಂತೆ, ಕಾರಿನಿಂದ ಇಳಿದು ಬಂದ ಕಿಡ್ನ್ಯಾಪರ್‌ಗಳು ಆತನನ್ನು ಬಲವಂತವಾಗಿ ಕಾರಿಗೆ ಎಳೆದುಕೊಂಡು ಹೋಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಣಕ್ಕಾಗಿ ಬೆದರಿಕೆ:

ಅಪಹರಣ ಮಾಡಿದ ಕೆಲವೇ ಹೊತ್ತಿನಲ್ಲಿ ದುಷ್ಕರ್ಮಿಗಳು ಸ್ಪಾ ಮಾಲೀಕ ಪ್ರಕಾಶ್ ಎಂಬುವವರಿಗೆ ಕರೆ ಮಾಡಿದ್ದಾರೆ.ಅಶೀಶ್ ‘ ನನ್ನು ಬಿಡಬೇಕಾದರೆ ತಕ್ಷಣ 2 ಲಕ್ಷ ರೂಪಾಯಿ ನೀಡಬೇಕು.ಹಣ ನೀಡದಿದ್ದರೆ ಅಶೀತ್‌ನನ್ನು ಕೊಲೆ ಮಾಡುವುದಾಗಿ ಕಿಡ್ನ್ಯಾಪರ್‌ಗಳು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಜನನಿಬಿಡ ಪ್ರದೇಶದಲ್ಲೇ ಈ ರೀತಿ ಅಡ್ಡಗಟ್ಟಿ ಅಪಹರಣ ಮಾಡಿರುವುದು ಸ್ಥಳೀಯ ನಿವಾಸಿಗಳಲ್ಲಿ ಭೀತಿ ಹುಟ್ಟಿಸಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular