HomeCrimeಪತ್ನಿ ಬಿಟ್ಟು ಪ್ರಿಯತಮೆಯೊಂದಿಗೆ ಶಾಪಿಂಗ್‌ಗೆ ಬಂದಿದ್ದ ಪೊಲೀಸ್ ಪೇದೆ: ಮಾರ್ಕೆಟ್‌ನಲ್ಲೇ ಧರ್ಮದೇಟು ನೀಡಿದ ಭಾಮೈದರು!

ಪತ್ನಿ ಬಿಟ್ಟು ಪ್ರಿಯತಮೆಯೊಂದಿಗೆ ಶಾಪಿಂಗ್‌ಗೆ ಬಂದಿದ್ದ ಪೊಲೀಸ್ ಪೇದೆ: ಮಾರ್ಕೆಟ್‌ನಲ್ಲೇ ಧರ್ಮದೇಟು ನೀಡಿದ ಭಾಮೈದರು!

ಮಧ್ಯಪ್ರದೇಶದ ಜಬಲ್‌ಪುರ ನಗರದ ಪ್ರಮುಖ ವ್ಯಾಪಾರ ಕೇಂದ್ರವಾದ ಸಿವಿಕ್ ಸೆಂಟರ್ ಪ್ರದೇಶದಲ್ಲಿ ಗುರುವಾರ ಸಂಜೆ ಭಾರೀ ಹೈಡ್ರಾಮಾವೊಂದು ನಡೆದಿದೆ. ಮದುವೆಯಾಗಿದ್ದರೂ ಪತ್ನಿಯನ್ನು ಬಿಟ್ಟು ಪ್ರಿಯತಮೆಯೊಂದಿಗೆ ಶಾಪಿಂಗ್ ಮಾಡಲು ಬಂದಿದ್ದ ಪೊಲೀಸ್ ಪೇದೆಯೊಬ್ಬನಿಗೆ ಆತನ ಭಾವಮೈದರು ನಡುರಸ್ತೆಯಲ್ಲೇ ಚಪ್ಪಲಿಯಿಂದ ಹೊಡೆದು ಬುದ್ಧಿ ಕಲಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ರಂಜಿತ್ ಕೌರವ್ ಎಂಬ ಹೆಸರಿನ ಈ ಕಾನ್‌ಸ್ಟೆಬಲ್ ಕೋರ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂದು ಹೇಳಲಾಗಿದೆ. ಈತ ಸೀನಿಯಿಂದ ಬಂದಿದ್ದ ಯುವತಿಯೊಬ್ಬಳ ಜೊತೆ ಶಾಪಿಂಗ್ ಮಾಡುತ್ತಿದ್ದಾಗ ಆತನ ಪತ್ನಿಯ ಸಹೋದರರು ಆಕಸ್ಮಿಕವಾಗಿ ಅಲ್ಲಿಗೆ ಬಂದಿದ್ದಾರೆ. ಅಕ್ಕನಿಗೆ ವಂಚಿಸಿ ಬೇರೆ ಮಹಿಳೆಯ ಜೊತೆ ಸುತ್ತಾಡುತ್ತಿದ್ದನ್ನು ಕಂಡು ಆಕ್ರೋಶಗೊಂಡ ಇಬ್ಬರು ಭಾವಮೈದರು, ಪೇದೆಯ ಕಾಲರ್ ಹಿಡಿದು ರಸ್ತೆಯಲ್ಲೇ ಎಳೆದಾಡಿದ್ದಾರೆ.

ವೈರಲ್ ವಿಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಪೇದೆಯನ್ನು ಹಿಡಿದು ಚಪ್ಪಲಿಯಿಂದ ಹೊಡೆಯುತ್ತಾ, “ಈತ ಪೊಲೀಸ್ ಕೆಲಸದಲ್ಲಿದ್ದಾನೆ, ಈತನ ಕೆಲಸ ಹೋಗಬೇಕು” ಎಂದು ಜೋರಾಗಿ ಕಿರುಚುತ್ತಿರುವುದು ಕಂಡುಬಂದಿದೆ. ಈ ಘಟನೆಯಿಂದಾಗಿ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದು, ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ದಾರಿಯಲ್ಲಿ ಹೋಗುತ್ತಿದ್ದವರು ಈ ನಾಟಕೀಯ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆ ನಡೆದ ತಕ್ಷಣ ಓಮ್ತಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಹಲ್ಲೆ ಮಾಡಿದವರು ಮತ್ತು ಪೇದೆ ಇಬ್ಬರನ್ನೂ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದು ಸಂಪೂರ್ಣವಾಗಿ ಕೌಟುಂಬಿಕ ಕಲಹದಿಂದ ನಡೆದ ಘಟನೆಯಾಗಿದ್ದು, ಎರಡೂ ಕಡೆಯವರ ಹೇಳಿಕೆಗಳನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸ್‌ಐ ಶ್ರೀರಾಮ್ ಸನೋಡಿಯಾ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular