HomeLatest News'ಆದಾಯ ತೆರಿಗೆ ಇಲಾಖೆ'ಯ 8 ವಿಧದ ನೋಟಿಸ್‌’ಗಳ ಅರ್ಥ ನಿಮಗೆ ಗೊತ್ತೇ ? ಇಲ್ಲಿದೆ ಸಂಪೂರ್ಣ...

‘ಆದಾಯ ತೆರಿಗೆ ಇಲಾಖೆ’ಯ 8 ವಿಧದ ನೋಟಿಸ್‌’ಗಳ ಅರ್ಥ ನಿಮಗೆ ಗೊತ್ತೇ ? ಇಲ್ಲಿದೆ ಸಂಪೂರ್ಣ ಮಾಹಿತಿ

ಆದಾಯ ತೆರಿಗೆ ಇಲಾಖೆ (Income Tax Department) ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ಒಂದು ಪ್ರಮುಖ ವಿಭಾಗವಾಗಿದೆ. ಇದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಮೂಲಕ ಕಾರ್ಯನಿರ್ವಹಿಸುತ್ತದೆ.ವ್ಯಕ್ತಿಗಳು, ಕಂಪನಿಗಳು ಮತ್ತು ಸಂಸ್ಥೆಗಳಿಂದ ಆದಾಯ ತೆರಿಗೆಯನ್ನು ಸಂಗ್ರಹಿಸುವುದು. ತೆರಿಗೆಗಳ್ಳತನವನ್ನು ತಡೆಗಟ್ಟುವುದು ಮತ್ತು ತೆರಿಗೆ ಕಾನೂನುಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದು ಸೇರಿ ಹಲವು ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸುತ್ತದೆ.

ಭಾರತದಲ್ಲಿ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸುವವರಿಗೆ ತೆರಿಗೆ ಇಲಾಖೆಯಿಂದ ನೋಟಿಸ್ ಬರುವುದು ಸಾಮಾನ್ಯ. ಆದರೆ ನೋಟಿಸ್ ಬಂದ ತಕ್ಷಣ ಭಯಪಡುವ ಅಗತ್ಯವಿಲ್ಲ. ಅನೇಕ ನೋಟಿಸ್ಗಳು ಕೇವಲ ಹೆಚ್ಚಿನ ಮಾಹಿತಿ ಅಥವಾ ಸ್ಪಷ್ಟನೆಗಾಗಿ ಇರುತ್ತವೆ. ಪ್ರತಿಯೊಂದು ನೋಟಿಸ್ಗೂ ಅದರದ್ದೇ ಆದ ವಿಶೇಷ ಅರ್ಥವಿದೆ.

ಆದಾಯ ತೆರಿಗೆ ಇಲಾಖೆಯ 8 ವಿಧದ ನೋಟಿಸ್’ಗಳ ಅರ್ಥ ನಿಮಗೆ ಗೊತ್ತೇ ? ಇಲ್ಲಿದೆ ಸಂಪೂರ್ಣ ಮಾಹಿತಿ”

1) ಸೆಕ್ಷನ್ 142(1) – ಮಾಹಿತಿ ಕೇಳುವ ನೋಟಿಸ್: ನೀವು ಸಲ್ಲಿಸಿದ ರಿಟರ್ನ್ಸ್ನಲ್ಲಿರುವ ವಿವರಗಳಿಗೆ ಬೆಂಬಲವಾಗಿ ನಿಮ್ಮಿಂದ ಹೆಚ್ಚಿನ ದಾಖಲೆ ಅಥವಾ ವಿವರಣೆ ಬೇಕಾದಾಗ ಇಲಾಖೆ ಈ ನೋಟಿಸ್ ನೀಡುತ್ತದೆ. ಒಂದು ವೇಳೆ ನೀವು ಸಮಯಕ್ಕೆ ಸರಿಯಾಗಿ ITR ಸಲ್ಲಿಸದಿದ್ದರೂ ಈ ನೋಟಿಸ್ ಬರಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2) ಸೆಕ್ಷನ್ 133(6) – ಹೆಚ್ಚಿನ ವಹಿವಾಟಿನ ವಿಚಾರಣೆ: ನಿಮ್ಮ ಆದಾಯವು ತೆರಿಗೆ ವಿನಾಯಿತಿ ಮಿತಿಗಿಂತ ಹೆಚ್ಚಿದ್ದರೂ ನೀವು ITR ಸಲ್ಲಿಸದಿದ್ದರೆ ಅಥವಾ ನಿಮ್ಮ ಖರ್ಚುಗಳು ನಿಮ್ಮ ಆದಾಯಕ್ಕಿಂತ ಗಣನೀಯವಾಗಿ ಹೆಚ್ಚಿದ್ದರೆ ಇಲಾಖೆ ಈ ನೋಟಿಸ್ ನೀಡುತ್ತದೆ. ಇದು ನಿಮ್ಮ ಬ್ಯಾಂಕ್ ವಹಿವಾಟುಗಳ ಬಗ್ಗೆ ಹೆಚ್ಚಿನ ಮಾಹಿತಿ ಕೇಳಬಹುದು.

3) ಸೆಕ್ಷನ್ 143(1) – ಇಂಟಿಮೇಷನ್ (ಮಾಹಿತಿ ಪತ್ರ): ಇದು ರಿಟರ್ನ್ಸ್ ಸಲ್ಲಿಸಿದ ನಂತರ ಬರುವ ಸಾಮಾನ್ಯ ಮಾಹಿತಿ ಪತ್ರ. ನೀವು ಸಲ್ಲಿಸಿದ ಲೆಕ್ಕಾಚಾರವು ಇಲಾಖೆಯ ಲೆಕ್ಕಾಚಾರಕ್ಕೆ ತಾಳೆಯಾಗುತ್ತದೆಯೇ ಎಂದು ಇದು ತಿಳಿಸುತ್ತದೆ. ಇದರಲ್ಲಿ ನೀವು ಹೆಚ್ಚುವರಿ ತೆರಿಗೆ ಕಟ್ಟಬೇಕೆ ಅಥವಾ ನಿಮಗೆ ರಿಫಂಡ್ (Refund) ಬರುತ್ತದೆಯೇ ಎಂಬ ಮಾಹಿತಿ ಇರುತ್ತದೆ.

4) ಸೆಕ್ಷನ್ 143(2) – ಸ್ಕ್ರುಟಿನಿ ನೋಟಿಸ್: ಸೆಕ್ಷನ್ 143(1) ಗೆ ನೀವು ಸರಿಯಾಗಿ ಸ್ಪಂದಿಸದಿದ್ದಾಗ ಅಥವಾ ನಿಮ್ಮ ಉತ್ತರ ತೃಪ್ತಿಕರವಾಗಿಲ್ಲದಿದ್ದಾಗ ಇಲಾಖೆ ಈ ನೋಟಿಸ್ ನೀಡುತ್ತದೆ. ನಿಮ್ಮ ತೆರಿಗೆ ಸಲ್ಲಿಕೆಯನ್ನು ಆಳವಾಗಿ ಪರಿಶೀಲಿಸಲು (Scrutiny) ಈ ನೋಟಿಸ್ ಬಳಸಲಾಗುತ್ತದೆ.

5) ಸೆಕ್ಷನ್ 148 – ಆದಾಯ ಮುಚ್ಚಿಟ್ಟಿರುವ ಬಗ್ಗೆ: ನೀವು ನಿಮ್ಮ ಆದಾಯದ ಕೆಲವು ಭಾಗವನ್ನು ಇಲಾಖೆಯಿಂದ ಮುಚ್ಚಿಟ್ಟಿದ್ದೀರಿ ಅಥವಾ ತಪ್ಪು ಮಾಹಿತಿ ನೀಡಿದ್ದೀರಿ ಎಂದು ಇಲಾಖೆಗೆ ಶಂಕೆಯಿದ್ದಾಗ ಈ ಗಂಭೀರ ನೋಟಿಸ್ ಕಳುಹಿಸಲಾಗುತ್ತದೆ.

6) ಸೆಕ್ಷನ್ 245 – ರಿಫಂಡ್ ಹೊಂದಾಣಿಕೆ ನೋಟಿಸ್: ನೀವು ಈ ವರ್ಷ ತೆರಿಗೆ ಮರುಪಾವತಿ (Refund) ಪಡೆಯಬೇಕಿದ್ದು, ಹಿಂದಿನ ಯಾವುದಾದರೂ ವರ್ಷದಲ್ಲಿ ತೆರಿಗೆ ಬಾಕಿ ಉಳಿಸಿಕೊಂಡಿದ್ದರೆ, ಆ ಬಾಕಿಯನ್ನು ರಿಫಂಡ್ನೊಂದಿಗೆ ಹೊಂದಾಣಿಕೆ ಮಾಡುವ ಬಗ್ಗೆ ಮಾಹಿತಿ ನೀಡಲು ಇಲಾಖೆ ಈ ನೋಟಿಸ್ ನೀಡುತ್ತದೆ.

7) ಸೆಕ್ಷನ್ 156 – ಡಿಮ್ಯಾಂಡ್ ನೋಟಿಸ್: ಪರಿಶೀಲನೆಯ ನಂತರ ನೀವು ಇನ್ನೂ ಹೆಚ್ಚುವರಿ ತೆರಿಗೆ, ಬಡ್ಡಿ ಅಥವಾ ದಂಡವನ್ನು ಪಾವತಿಸಬೇಕಿದ್ದರೆ ಈ ‘ಡಿಮ್ಯಾಂಡ್ ನೋಟಿಸ್’ ಬರುತ್ತದೆ. ಇದನ್ನು ಪಡೆದ 30 ದಿನಗಳೊಳಗೆ ನೀವು ಬಾಕಿ ಪಾವತಿಸಬೇಕಾಗುತ್ತದೆ.

8) ಸೆಕ್ಷನ್ 139(9) – ದೋಷಪೂರಿತ ರಿಟರ್ನ್ಸ್ (Defective Return): ನೀವು ಸಲ್ಲಿಸಿದ ಐಟಿಆರ್ ಫಾರ್ಮ್ನಲ್ಲಿ ಏನಾದರೂ ತಾಂತ್ರಿಕ ತಪ್ಪುಗಳಿದ್ದರೆ (ಉದಾಹರಣೆಗೆ ತಪ್ಪು ಫಾರ್ಮ್ ಬಳಕೆ ಅಥವಾ ಸಹಿ ಇಲ್ಲದಿರುವುದು) ಈ ನೋಟಿಸ್ ಬರುತ್ತದೆ. ಇದನ್ನು ಸರಿಪಡಿಸಲು ನಿಮಗೆ 15 ದಿನಗಳ ಕಾಲಾವಕಾಶ ನೀಡಲಾಗುತ್ತದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular