ಶಿವಮೊಗ್ಗ: ಬೇರೆಯವರ ಖಾತೆಯ ಮೂಲಕ ಲಕ್ಷಾಂತರ ವಹಿವಾಟು ನಡೆಸಿದ್ದ ಆರೋಪಿಯನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ವಿನೋಬನಗರದ ಇಂಡಿಯನ್ ಓವರ್ಸಿಸ್ ಬ್ಯಾಂಕ್ ಬ್ರಾಂಚ್ ನಲ್ಲಿ ಗಣೇಶ್ ಟಿ-ಶಾಪ್ ಹೆಸರಿನಲ್ಲಿ ಖಾತೆಯನ್ನು ಓಪನ್ ಮಾಡಿಕೊಂಡು ಬಳಸುತ್ತಿದ್ದ ಖಾತೆಯನ್ನು ಪಿರ್ಯಾದಿ ಸ್ನೇಹಿತ ಶರತ್ @ ಗುಂಡ ಈತನು ಪಿರ್ಯಾಯರಿಂದ ಪಾಸ್ ಬುಕ್, ಎ.ಟಿಎಂ ಕಾರ್ಡ್ ಮತ್ತು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿರುವ ಮೊಬೈಲ್ ನಂಬರ್ 9902039655 ನ್ನು ನನಗೆ ಕೊಡು ನಿನಗೆ 15 ದಿನಗಳಿಗೊಮ್ಮೆ ಕಮಿಷನ್ ಕೊಡುತ್ತೇನೆ ಎಂದು ನಂಬಿಸಿದ್ದಾನೆ.
ಸದರಿ ಖಾತೆಯನ್ನು ಪಡೆದುಕೊಂಡು ಪಿರ್ಯಾದಿಯವರಂತೆ ನಟಿಸಿ ವಂಚನೆಯ ಲಕ್ಷಂತಾರ ರೂ. ಹಣವನ್ನು ವರ್ಗಾವಣೆ ಮಾಡಲು ದುರುಪಯೋಗಪಡಿಸಿಕೊಂಡಿರುವ ಶರತ್ ಕುಮಾರ್ ಎಂಬುವವನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಪ್ರಕರಣದಲ್ಲಿ ಆರೋಪಿ ಬಗ್ಗೆ ಎಸ್ಪಿ ನಿಖಿಲ್ ಬಿ., ಹೆಚ್ಚುವರಿ ಎಸ್ಪಿಗಳಾದ ಕಾರಿಯಪ್ಪ ಎ.ಜಿ,, ರಮೇಶ್ ಕುಮಾರ್, ಸೈಬರ್ ಕ್ರೈಂ ಪೊಲೀಸ್ ಠಾಣೆ ಡಿವೈಎಸ್ಪಿ ಕೃಷ್ಣಮೂರ್ತಿ ಕೆ. ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಮಂಜುನಾಥ ನೇತೃತ್ವದಲ್ಲಿ ಸಿಬ್ಬಂದಿಗಳಾದ ಶೇಖರ ಎನ್, ಜೆ ಕೆ ಪ್ರಕಾಶ್ ಎಎಸ್ಐ, ಕಾಂತಮ್ಮ, ಮಹಿಳಾ ಹೆಚ್. ಸಿ, ಗಿರೀಶ್ ಸ್ವಾಮಿ, ಆಂಡ್ರೂಸ್ ಜೋನ್ಸ್, ಅರವಿಂದ ಸಿಪಿಸಿ ರವರುಗಳನ್ನು ಒಳಗೊಂಡ ತಂಡವನ್ನು ರಚಿಸಲಾಗಿರುತ್ತದೆ.
ಸದರಿ ತನಿಖಾ ತಂಡವು ಪ್ರಕರಣದ ಆರೋಪಿ ಶಿವಮೊಗ್ಗದ ಕೆಳಗಿನ ತುಂಗಾ ನಗರ ಶರತ್ ಬಿನ್ ಕೃಷ್ಣ ರೆಡ್ಡಿ ಈತನನ್ನು ದಸ್ತಗಿರಿ ಮಾಡಿ ವಿಚಾರಣೆ ಮಾಡಲಾಗಿ ಆರೋಪಿತನ ಬಳಿ ವಿವಿಧ ಹೆಸರಿನಲ್ಲಿರುವ ವಿವಿಧ ಬ್ಯಾಂಕ್ ಗಳಲ್ಲಿ ಪತ್ತೆಹಚ್ಚಲಾದ 19 Mule accounts ಮೇಲೆ ದೇಶಾದ್ಯಂತ ಒಟ್ಟು 96 ಕ್ಕೂ ಹೆಚ್ಚು ಪ್ರಕರಣಗಳಿದ್ದು, ಅವುಗಳಲ್ಲಿ ಸುಮಾರು 55,43,56,248- ರೂ ಗೂ ಹೆಚ್ಚು ವಂಚನೆಯಾಗಿರುತ್ತದೆ.
ಅಲ್ಲದೆ ಆರೋಪಿಯು ಹೊಂದಿದ್ದ 19 Mule account ಗಳಲ್ಲಿ ಒಟ್ಟು 11,48,42,898 ರೂ ಗೂ ಹೆಚ್ಚು ಹಣ ವರ್ಗಾವಣೆಯಾಗಿರುವುದು ಕಂಡು ಬಂದಿರುತ್ತದೆ.
ಆರೋಪಿ ಮನೆ ಶೋಧನೆ ಮಾಡಿದ್ದು 18 Pass Book, 7 Cheque Book, 25 ATM card, 2 QR ಕೋಡ್ Scanner, 2 Mobiles ವಶಪಡಿಸಿಕೊಳ್ಳಲಾಗಿರುತ್ತದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ.

