ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ) ಅಡಿ ಖಾಸಗಿ ಶಾಲೆಗಳಲ್ಲಿ ಶೇಕಡ 25 ರಷ್ಟು ಉಚಿತ ಸೀಟು ಪಡೆಯಲು ಶಾಲಾ ಶಿಕ್ಷಣ ಇಲಾಖೆ 2026- 27 ನೇ ಸಾಲಿನ ಅರ್ಜಿ ಸಲ್ಲಿಕೆ ಮತ್ತು ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ನೆರೆಹೊರೆಯ ಎಲ್ಲಾ ಶಾಲೆಗಳ ಪಟ್ಟಿಯನ್ನು ಫೆಬ್ರವರಿ 12ರಂದು ಬಿಡುಗಡೆ ಮಾಡಲಿದ್ದು, ಇದಕ್ಕೆ ಆಕ್ಷೇಪಣೆಗಳಿದ್ದಲ್ಲಿ ಫೆಬ್ರವರಿ 16ರೊಳಗೆ ಸಲ್ಲಿಸಬಹುದು. ಫೆಬ್ರವರಿ 18ರಂದು ನೆರೆಹೊರೆ ಶಾಲೆಗಳ ಅಂತಿಮ ಪಟ್ಟಿ ನೀಡಲಾಗುವುದು. ಎಲ್ಕೆಜಿ ಮತ್ತು ಒಂದನೇ ತರಗತಿ ಪ್ರವೇಶಕ್ಕೆ ಖಾಸಗಿ ಶಾಲೆಗಳಲ್ಲಿ ಶೇಕಡ 25ರಂತೆ ಅನುದಾನಿತ ಶಾಲೆಗಳಲ್ಲಿ ಲಭ್ಯವಿರುವ ಕನಿಷ್ಠ ಸೀಟುಗಳ ವಿವರ ಪ್ರಕಟಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.
ಫೆಬ್ರವರಿ 20 ಮತ್ತು 21 ರಂದು ಪ್ರಾಯೋಗಿಕ ಅರ್ಜಿ ಸಲ್ಲಿಕೆ ನಡೆಯಲಿದ್ದು, ಫೆಬ್ರವರಿ 24 ರಿಂದ ಮಾರ್ಚ್ 24ರ ವರೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ನೀಡಲಾಗಿದೆ.

