HomeLatest NewsBIG NEWS: ರಾಜ್ಯಾದ್ಯಂತ 100ಕ್ಕ್ಕೂ ಹೆಚ್ಚು ಕಡೆ ಸಿಐಡಿ ಸೈಬರ್ ಕ್ರೈಂ ವಿಶೇಷ ಕಾರ್ಯಾಚರಣೆ: 13...

BIG NEWS: ರಾಜ್ಯಾದ್ಯಂತ 100ಕ್ಕ್ಕೂ ಹೆಚ್ಚು ಕಡೆ ಸಿಐಡಿ ಸೈಬರ್ ಕ್ರೈಂ ವಿಶೇಷ ಕಾರ್ಯಾಚರಣೆ: 13 ಮಾಸ್ಟರ್ ಮೈಂಡ್ ಗಳು ಅರೆಸ್ಟ್

ಬೆಂಗಳೂರು: ರಾಜ್ಯದಲ್ಲಿ ಸೈಬರ್ ವಂಚನೆ ಪ್ರಕರಣ ಹೆಚ್ಚುತ್ತಿದ್ದು, ಇಂತಹ ಅಪರಾಧಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಿಐಡಿ ಸೈಬರ್ ಕ್ರೈಂ ಪೊಲೀಸರು ರಾಜ್ಯಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ರಾಜ್ಯದ ಹಲವೆಡೆ ಏಕಕಾಲದಲ್ಲಿ ದಾಳಿ ನಡೆಸಿದ್ದು, 13 ಮಾಸ್ಟರ್ ಮೈಂಡ್ ಗಳನ್ನು ಬಂಧಿಸಿದ್ದಾರೆ.

ಮ್ಯೂಲ್ ಅಕೌಂಟ್‌ಗಳ ಮೂಲಕ ನಡೆಯುತ್ತಿದ್ದ ದೊಡ್ದ ಪ್ರಮಾಣದ ಸೈಬರ್ ವಂಚನೆ ದಂಧೆಯನ್ನು ಸಿಐಡಿ ಸೈಬರ್ ಕ್ರೈಂ ವಿಭಾಗ ಭೇದಿಸಿದೆ. ಅಕ್ರಮಕ್ಕಾಗಿ ಬಳಸಲಾಗುತ್ತಿದ್ದ 40 ಸಾವಿರಕ್ಕೂ ಹೆಚ್ಚು ಮ್ಯೂಲ್ ಅಕೌಂಟ್​ಗಗಳನ್ನು ಪತ್ತೆ ಮಾಡಲಾಗಿದೆ.

ರಾಜ್ಯಾದ್ಯಂತ 100ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ದಾಳಿ ನಡೆಸಿರುವ ಸಿಐಡಿ ಸೈಬರ್ ಕ್ರೈಂ ತಂಡದ ಅಧಿಕಾರಿಗಳು, ಸೈಬರ್ ವಂಚನೆಗೆ ಸಂಬಂಧಿಸಿದ 13 ಮಾಸ್ಟರ್ ಮೈಂಡ್‌ಗಳನ್ನು ಬಂಧಿಸಿದ್ದಾರೆ. ಅಮಾಯಕ ಜನರ ಬ್ಯಾಂಕ್ ಖಾತೆ, ಎಟಿಎಂ ಕಾರ್ಡ್ ಹಾಗೂ ಖಾತೆ ವಿವರಗಳನ್ನು ಹಣಕ್ಕಾಗಿ ಸಂಗ್ರಹಿಸಿ ಸೈಬರ್ ವಂಚಕರಿಗೆ ನೀಡಲಾಗುತ್ತಿತ್ತು ಎಂಬುದು ತನಿಖೆ ವೇಳೆ ಬಯಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮ್ಯೂಲ್ ಅಕೌಂಟ್‌ಗಳ ಮೂಲಕ ವಂಚಕರು ಆನ್‌ಲೈನ್ ವಂಚನೆ ನಡೆಸಿ ಹಣ ವರ್ಗಾವಣೆ ಹಾಗೂ ಎಟಿಎಂ ಮೂಲಕ ಹಣ ವಿತ್‌ಡ್ರಾ ಮಾಡಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

ಸೈಬರ್ ವಂಚಕರ ಬಗ್ಗೆ ಅರಿವಿರದ ಅಮಾಯಕರು ಖಾತೆ ವಿವರಗಳನ್ನು ತನಿಖೆಯ ವೇಳೆ ಸುಮಾರು 42 ಸಾವಿರಕ್ಕೂ ಹೆಚ್ಚು ಮ್ಯೂಲ್ ಅಕೌಂಟ್‌ಗಳು ಬಳಕೆಯಲ್ಲಿರುವುದು ಪತ್ತೆಯಾಗಿದೆ. ಸೈಬರ್ ವಂಚನೆ ಪ್ರಕರಣದ ಬಗ್ಗೆ ಸಿಐಡಿ ಸೈಬರ್ ಕ್ರೈಂ ತನಿಖೆ ಮುಂದುವರೆಸಿದೆ.

For Latest News Updates, Join Our Whatsapp Community🚩
RELATED ARTICLES

Most Popular