HomeBusinessಬಂಗಾರ ಪ್ರಿಯರಿಗೆ ಬಂಪರ್ ಗಿಫ್ಟ್: ಏರಿದಷ್ಟೇ ವೇಗವಾಗಿ ಕುಸಿದ ಚಿನ್ನದ ದರ: ಒಂದೇ ದಿನ ಭರ್ಜರಿ...

ಬಂಗಾರ ಪ್ರಿಯರಿಗೆ ಬಂಪರ್ ಗಿಫ್ಟ್: ಏರಿದಷ್ಟೇ ವೇಗವಾಗಿ ಕುಸಿದ ಚಿನ್ನದ ದರ: ಒಂದೇ ದಿನ ಭರ್ಜರಿ ₹5,000 ಇಳಿಕೆ ಬೆಳ್ಳಿಯೂ ಅಗ್ಗ

ಬೆಂಗಳೂರು: ಬುಧವಾರವಷ್ಟೇ ಬರೋಬ್ಬರಿ 6600 ರೂಪಾಯಿ ಏರಿಕೆ ಕಂಡು ಆಭರಣ ಪ್ರಿಯರಲ್ಲಿ ದಿಗಿಲು ಹುಟ್ಟಿಸಿದ್ದ ಚಿನ್ನದ ದರ ಇಂದು ಅಷ್ಟೇ ವೇಗವಾಗಿ ಕುಸಿತ ಕಂಡಿದೆ. ಫೆಬ್ರವರಿ 5, 2026ರ ಗುರುವಾರದಂದು ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಭಾರೀ ಇಳಿಕೆ ಹಾದಿ ಹಿಡಿಯುವ ಮೂಲಕ ಗ್ರಾಹಕರಿಗೆ ಕೊಂಚ ನಿರಾಳ ತಂದಿದೆ.

ನಿನ್ನೆ ಏರಿಕೆ ಕಂಡಂತ ಚಿನ್ನದ ದರ ಇಂದು ದಿಢೀರ್ ತಿರುವು ಪಡೆದಿದೆ. 24 ಕ್ಯಾರೆಟ್ ಮಾತ್ರವಲ್ಲದೆ 22 ಕ್ಯಾರೆಟ್ ಹಾಗೂ 18 ಕ್ಯಾರೆಟ್ ಚಿನ್ನದ ದರಗಳೂ ಕೂಡ ಸ್ಪಷ್ಟವಾಗಿ ಇಳಿಕೆಯಾಗಿವೆ. ಇದು ಹೂಡಿಕೆದಾರರಲ್ಲಿ ಹೊಸ ಕುತೂಹಲ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ದರಗಳು ಇನ್ನೂ ಇಳಿಯಲಿವೆಯೇ ಅಥವಾ ಮತ್ತೆ ಏರಿಕೆ ಹಾದಿ ಹಿಡಿಯಲಿವೆಯೇ ಎಂಬುದು ಸದ್ಯದ ಪ್ರಶ್ನೆಯಾಗಿದೆ.

24 ಕ್ಯಾರೆಟ್ ಶುದ್ಧ ಚಿನ್ನದ ಇಂದಿನ ದರ ವಿವರ:
ನಿನ್ನೆ ದಾಖಲೆ ಬರೆದಿದ್ದ ಚಿನ್ನದ ಬೆಲೆಯಲ್ಲಿ ಇಂದು ಪ್ರತಿ 10 ಗ್ರಾಂಗೆ ₹5,020 ಇಳಿಕೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1 ಗ್ರಾಂ ಬೆಲೆ: ₹15,442 (ನಿನ್ನೆ ₹15,944 ಇತ್ತು)

10 ಗ್ರಾಂ ಬೆಲೆ: ₹1,54,420 (ನಿನ್ನೆ ₹1,59,440 ಇತ್ತು)

100 ಗ್ರಾಂ ಬೆಲೆ: ₹15,44,200 (ನಿನ್ನೆ ₹15,94,400 ಇತ್ತು)

ಬೆಳ್ಳಿ ಬೆಲೆಯೂ ಕುಸಿತ
ಚಿನ್ನದ ಬೆನ್ನಲ್ಲೇ ಬೆಳ್ಳಿ ಬೆಲೆಯಲ್ಲೂ ಭರ್ಜರಿ ಇಳಿಕೆ ಕಂಡುಬಂದಿದ್ದು, ಸದ್ಯ ಬೆಳ್ಳಿ ಬೆಲೆಯು 3 ಲಕ್ಷ ರೂಪಾಯಿಗೆ ಇಳಿದಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಆರ್ಥಿಕ ಬದಲಾವಣೆಗಳು ಮತ್ತು ಹೂಡಿಕೆದಾರರ ನಡೆಯಿಂದಾಗಿ ಈ ದಿಢೀರ್ ಕುಸಿತ ಸಂಭವಿಸಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಬೆಳ್ಳಿಯ ಇಂದಿನ ದರ ಪಟ್ಟಿ:

1 ಗ್ರಾಂ ಬೆಳ್ಳಿ: ಇಂದು ₹300 (ನಿನ್ನೆ ₹320 ಇತ್ತು) – ₹20 ಇಳಿಕೆ

10 ಗ್ರಾಂ ಬೆಳ್ಳಿ: ಇಂದು ₹3,000 (ನಿನ್ನೆ ₹3,200 ಇತ್ತು) – ₹200 ಇಳಿಕೆ

1 ಕೆಜಿ ಬೆಳ್ಳಿ: ಇಂದು ₹3,00,000 (ನಿನ್ನೆ ₹3,20,000 ಇತ್ತು) – ₹20,000 ಭಾರೀ ಇಳಿಕೆ

24 ಕ್ಯಾರೆಟ್ ಚಿನ್ನದ ಬೆಲೆ

ಚಿನ್ನದ ಪ್ರಮಾಣ (24 ಕ್ಯಾರೆಟ್)ಇಂದಿನ ದರ (Feb 05)ನಿನ್ನೆಯ ದರ (Feb 04)ವ್ಯತ್ಯಾಸ (ಇಳಿಕೆ)
1 ಗ್ರಾಂ₹ 15,442₹ 15,944– ₹ 502
10 ಗ್ರಾಂ₹ 1,54,420₹ 1,59,440– ₹ 5,020
100 ಗ್ರಾಂ₹ 15,44,200₹ 15,94,400– ₹ 50,200
ನಗರಗಳುಇಂದಿನ 24 ಕ್ಯಾರೆಟ್ ಚಿನ್ನದ ದರ (1 ಗ್ರಾಂ)
ಚೆನ್ನೈ₹ 15,622
ಮುಂಬೈ₹ 15,442
ದೆಹಲಿ₹ 15,457
ಕೋಲ್ಕತ್ತಾ₹ 15,442
ಬೆಂಗಳೂರು₹ 15,442
ಹೈದರಾಬಾದ್₹ 15,442
ಕೇರಳ₹ 15,442
ಪುಣೆ₹ 15,442
ವಡೋದರಾ₹ 15,447
ಅಹಮದಾಬಾದ್₹ 15,447

ಪ್ರಮುಖ ನಗರಗಳಲ್ಲಿ ಇಂದಿನ 24 ಕ್ಯಾರಟ್ ಚಿನ್ನದ ದರ

ನಗರಗಳುಇಂದಿನ 24 ಕ್ಯಾರೆಟ್ ಚಿನ್ನದ ದರ (1 ಗ್ರಾಂ)
ಚೆನ್ನೈ₹ 15,622
ಮುಂಬೈ₹ 15,442
ದೆಹಲಿ₹ 15,457
ಕೋಲ್ಕತ್ತಾ₹ 15,442
ಬೆಂಗಳೂರು₹ 15,442
ಹೈದರಾಬಾದ್₹ 15,442
ಕೇರಳ₹ 15,442
ಪುಣೆ₹ 15,442
ವಡೋದರಾ₹ 15,447
ಅಹಮದಾಬಾದ್₹ 15,447

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular