HomeLatest NewsBIG NEWS : ಮಾರ್ಚ್ 31 ರ 'ಬ್ಯಾಂಕ್ ರಜೆ' ರದ್ದು : ದೇಶಾದ್ಯಂತ ಬ್ಯಾಂಕುಗಳು...

BIG NEWS : ಮಾರ್ಚ್ 31 ರ ‘ಬ್ಯಾಂಕ್ ರಜೆ’ ರದ್ದು : ದೇಶಾದ್ಯಂತ ಬ್ಯಾಂಕುಗಳು ಓಪನ್ .!

ನವದೆಹಲಿ: ಸಾಮಾನ್ಯವಾಗಿ ಸಾರ್ವಜನಿಕ ರಜೆಗಳು ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕುಗಳಿಗೆ ರಜೆ ಇರುವುದು ನಮಗೆಲ್ಲರಿಗೂ ತಿಳಿದಿದೆ. ಆದರೆ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಈಗ ಮಹತ್ವದ ಬದಲಾವಣೆಯೊಂದನ್ನು ಮಾಡಿದ್ದು, ಈ ಹಿಂದೆ ಘೋಷಿಸಲಾಗಿದ್ದ ಮಾರ್ಚ್ 31ರ ರಜೆಯನ್ನು ರದ್ದುಗೊಳಿಸಿದೆ.

ಮಾರ್ಚ್ 31ರಂದು ಮಹಾವೀರ ಜಯಂತಿ ಇರುವುದರಿಂದ ಈ ಮೊದಲು ರಜೆ ಘೋಷಿಸಲಾಗಿತ್ತು. ಆದರೆ, ಏಪ್ರಿಲ್ 1ರಿಂದ ಹೊಸ ಹಣಕಾಸು ವರ್ಷ (2026-27) ಆರಂಭವಾಗಲಿದೆ. ಪ್ರಸಕ್ತ ಹಣಕಾಸು ವರ್ಷದ (2025-26) ಸರ್ಕಾರದ ಎಲ್ಲಾ ರಶೀದಿಗಳು, ತೆರಿಗೆ ಪಾವತಿಗಳು ಮತ್ತು ಹಣಕಾಸಿನ ವಹಿವಾಟುಗಳನ್ನು ಅದೇ ವರ್ಷದ ಲೆಕ್ಕಕ್ಕೆ ಸೇರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ 31ರಂದು ದೇಶದ ಎಲ್ಲಾ ಬ್ಯಾಂಕುಗಳು ಎಂದಿನಂತೆ ಕಾರ್ಯನಿರ್ವಹಿಸಬೇಕು ಎಂದು ಕೇಂದ್ರದ ಮನವಿಯ ಮೇರೆಗೆ RBI ಆದೇಶಿಸಿದೆ.

ಮಾರ್ಚ್ 31ರಂದು ದೇಶಾದ್ಯಂತ ಎಲ್ಲಾ ಬ್ಯಾಂಕುಗಳು ಕಾರ್ಯನಿರ್ವಹಿಸಲಿವೆ. ಈ ಮೊದಲು ಬಿಡುಗಡೆ ಮಾಡಲಾಗಿದ್ದ ರಜಾ ಪಟ್ಟಿಯ ಪ್ರಕಾರ, ಆ ದಿನ ಮಹಾವೀರ ಜಯಂತಿ ಇದ್ದಿದ್ದರಿಂದ ಆರ್ಬಿಐ (RBI) ರಜೆ ಘೋಷಿಸಿತ್ತು. ಆದರೆ, ಈಗ ಆ ರಜೆಯನ್ನು ರದ್ದುಗೊಳಿಸಿರುವ ಆರ್ಬಿಐ, ಅಂದು ಬ್ಯಾಂಕುಗಳು ಎಂದಿನಂತೆ ಕಾರ್ಯನಿರ್ವಹಿಸಬೇಕು ಎಂದು ಆದೇಶ ಹೊರಡಿಸಿದೆ.
ಆರ್ಬಿಐ ರಜಾ ಕ್ಯಾಲೆಂಡರ್ ಪ್ರಕಾರ, ಮಾರ್ಚ್ ತಿಂಗಳಲ್ಲಿ ಮಹಾವೀರ ಜಯಂತಿ ಸೇರಿದಂತೆ ಒಟ್ಟು 11 ದಿನಗಳ ಬ್ಯಾಂಕ್ ರಜೆ ಇತ್ತು. ಆದರೆ, ಏಪ್ರಿಲ್ 1 ರಿಂದ ಹೊಸ ಹಣಕಾಸು ವರ್ಷ (2026-27) ಪ್ರಾರಂಭವಾಗಲಿರುವ ಹಿನ್ನೆಲೆಯಲ್ಲಿ, ಸರ್ಕಾರದ ರಶೀದಿಗಳು ಮತ್ತು ಪಾವತಿ ವಹಿವಾಟುಗಳನ್ನು ನಿರ್ವಹಿಸುವ ಬ್ಯಾಂಕ್ ಶಾಖೆಗಳನ್ನು ಮಾರ್ಚ್ 31 ರಂದು ತೆರೆದಿಡಲು ಕೇಂದ್ರ ಸರ್ಕಾರವು RBI ಗೆ ವಿನಂತಿಸಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೇಂದ್ರ ಸರ್ಕಾರದ ಈ ಮನವಿಯ ಮೇರೆಗೆ, ಮಾರ್ಚ್ 31 ರಂದು ದೇಶದ ಎಲ್ಲಾ ಬ್ಯಾಂಕುಗಳನ್ನು ತೆರೆದಿಡಲು ಆರ್ಬಿಐ ಅಧಿಸೂಚನೆ ಹೊರಡಿಸಿದೆ. 2025-26ರ ಹಣಕಾಸು ವರ್ಷದ ಎಲ್ಲಾ ಸರ್ಕಾರಿ ಆದಾಯ ಮತ್ತು ವೆಚ್ಚದ ವಹಿವಾಟುಗಳು (Inflow & Outflow) ಅದೇ ವರ್ಷದ ಲೆಕ್ಕಕ್ಕೆ ದಾಖಲಾಗಬೇಕು ಎಂದು ಕೇಂದ್ರ ಸರ್ಕಾರವು ಅಧಿಕಾರಿಗಳಿಗೆ ಸೂಚಿಸಿದೆ.ಈ ಕಾರಣದಿಂದಾಗಿ, ಸರ್ಕಾರದ ವ್ಯವಹಾರಗಳಿಗೆ ಸಂಬಂಧಿಸಿದ ಬ್ಯಾಂಕ್ ಶಾಖೆಗಳು ಮಾರ್ಚ್ 31 ರಂದು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಮಾರ್ಚ್ ತಿಂಗಳ ಇತರೆ ರಜೆಗಳ ಪಟ್ಟಿ
ಮಾರ್ಚ್ 31ರ ರಜೆ ರದ್ದಾಗಿದ್ದರೂ, ಹಬ್ಬಗಳ ಕಾರಣದಿಂದ ಮಾರ್ಚ್ನಲ್ಲಿ ಒಟ್ಟು 10 ದಿನಗಳು ಬ್ಯಾಂಕ್ ಕಾರ್ಯನಿರ್ವಹಿಸುವುದಿಲ್ಲ:
• ಮಾರ್ಚ್ 2: ಹೋಲಿಕಾ ದಹನ
• ಮಾರ್ಚ್ 3: ಹೋಳಿ ಹಬ್ಬ
• ಮಾರ್ಚ್ 4: ಹೋಳಿ (ಎರಡನೇ ದಿನ)
• ಮಾರ್ಚ್ 19: ಯುಗಾದಿ ಹಬ್ಬ (ಕರ್ನಾಟಕದಲ್ಲಿ ರಜೆ)
• ಮಾರ್ಚ್ 20: ರಂಜಾನ್
• ಮಾರ್ಚ್ 26: ಶ್ರೀರಾಮ ನವಮಿ
• ಮಾರ್ಚ್ 27: ಶ್ರೀರಾಮ ನವಮಿ ನಿಮಿತ್ತ ರಜೆ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular