HomeLatest NewsBREAKING: ವಿಮಾನದ ಇಂಜಿನ್ ನಲ್ಲಿ ಬೆಂಕಿ: ಕೋಲ್ಕತ್ತಾ ಏರ್ ಪೋರ್ಟ್ ನಲ್ಲಿ ಟರ್ಕಿ ವಿಮಾನ ತುರ್ತು...

BREAKING: ವಿಮಾನದ ಇಂಜಿನ್ ನಲ್ಲಿ ಬೆಂಕಿ: ಕೋಲ್ಕತ್ತಾ ಏರ್ ಪೋರ್ಟ್ ನಲ್ಲಿ ಟರ್ಕಿ ವಿಮಾನ ತುರ್ತು ಭೂಸ್ಪರ್ಶ

ಕೋಲ್ಕತ್ತಾ: ವಿಮಾನ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಟರ್ಕಿ ಏರ್ ಲೈನ್ಸ್ ವಿಮಾನ ಕೋಲ್ಕತ್ತಾ ಏರ್ ಪೋರ್ಟ್ ನಲ್ಲಿ ತುರ್ತು ಭೂಸ್ಪರ್ಶವಾದ ಘಟನೆ ನಡೆದಿದೆ.

ಪಶ್ಚಿಮ ಬಂಗಾಳದ ಕೋಲ್ಕತ್ತಾ ಏರ್ ಪೋರ್ಟ್ ನಲ್ಲಿ ಟರ್ಕಿ ಏರ್ ಲೈನ್ಸ್ ವಿಮಾನ ತುರ್ತು ಭೂಸ್ಪರ್ಶವಾಗಿದೆ. ಟರ್ಕಿ ಏರ್ ಲೈನ್ಸ್ ನ TK-727 ವಿಮಾನ ನೇಪಾಳದಿಂದ ಇಸ್ತಾಂಬುಲ್ ಗೆ ಹೊರಟಿತ್ತು. ಕೋಲ್ಕತ್ತಾದ ವಾಯುಪ್ರದೇಶದ ಮೂಲಕ ಸಾಗುತ್ತಿದ್ದಾಗ ವಿಮಾನದ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕೋಲ್ಕತ್ತಾ ಏರ್ ಟ್ರಾಫಿಕ್ ಕಂಟ್ರೋಲ್ ನ್ನು ವಿಮಾನದ ಪೈಲಟ್ ಸಂಪರ್ಕಿಸಿದ್ದಾರೆ. ಬಳಿಕ ಎಟಿಸಿ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆಯೇ ಕೋಲ್ಕತ್ತಾ ಏರ್ ಪೋರ್ಟ್ ನಲ್ಲಿ ವಿಮಾನವನ್ನು ಲ್ಯಾಂಡಿಂಗ್ ಮಾಡಲಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಮಾನದಲ್ಲಿ 236 ಪ್ರಯಾಣಿಕರು ಇದ್ದರು. ಎಲ್ಲಾ ಪ್ರಯಾಣಿಕರು ಹಾಗೂ ವಿಮಾನದ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular