HomeLatest NewsUnder 19 WC Semifinal: ಭಾರತಕ್ಕೆ ಕಠಿಣ ಗುರಿ ನೀಡಿದ ಅಫ್ಘಾನಿಸ್ತಾನ

Under 19 WC Semifinal: ಭಾರತಕ್ಕೆ ಕಠಿಣ ಗುರಿ ನೀಡಿದ ಅಫ್ಘಾನಿಸ್ತಾನ

ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿಂದು ( ಫೆಬ್ರವರಿ 4 ) ಅಂಡರ್ 19 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಿವೆ.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 310 ರನ್ ಬಾರಿಸಿದ್ದು, ಭಾರತಕ್ಕೆ 311 ರನ್‌ಗಳ ಕಠಿಣ ಗುರಿಯನ್ನು ನೀಡಿದೆ.

ಅಫ್ಘಾನಿಸ್ತಾನದ ಪರ ಆರಂಭಿಕರಾಗಿ ಕಣಕ್ಕಿಳಿದ ಒಸ್ಮಾನ್ ಸಾದತ್ ಹಾಗೂ ಖಲೀದ್ ಅಹ್ಮದ್‌ಝೈ ಅರ್ಧಶತಕದ ಜತೆಯಾಟವನ್ನಾಡಿದರು. ಒಸ್ಮಾನ್ ಸಾದತ್ 39 ರನ್ ಗಳಿಸಿದರೆ, ಖಲೀದ್ ಅಹ್ಮದ್‌ಝೈ 31 ರನ್ ಗಳಿಸಿದರು. ಬಳಿಕ ಮೂರನೇ ವಿಕೆಟ್‌ಗೆ ಜತೆಯಾದ ಫೈಸಲ್ ಶಿನೊಜಾದಾ ಹಾಗೂ ಉಜೈರುಲ್ಲಾ ನಿಯಾಜಿ ಶತಕದ ಜತೆಯಾಟವನ್ನಾಡಿ ತಂಡವನ್ನು ಉತ್ತಮ ಹಂತಕ್ಕೆ ಕೊಂಡೊಯ್ದು ವೈಯಕ್ತಿಕ ಶತಕಗಳನ್ನು ಸಹ ಬಾರಿಸಿದರು. ಫೈಸಲ್ ಶಿನೊಜಾದಾ 110 ರನ್ ಬಾರಿಸಿದರೆ, ಉಜೈರುಲ್ಲಾ ನಿಯಾಜಿ ಅಜೇಯ 101 ರನ್ ಬಾರಿಸಿದರು. ಇನ್ನುಳಿದಂತೆ ಅಝೀಝುಲ್ಲಾ ಮಿಯಾಖಿಲ್ 12 ರನ್ ಹಾಗೂ ಅಬ್ದುಲ್ ಅಜೀಜ್ ಅಜೇಯ 7 ರನ್ ಬಾರಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತದ ಪರ ದೀಪೇಶ್ ದೇವೇಂದ್ರನ್ ಹಾಗೂ ಕನಿಷ್ಕ್ ಚೌಹಾಣ್ ತಲಾ ಎರಡು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

Most Popular