HomeLatest NewsBREAKING : ವಂಟಮೂರಿ ಮಹಿಳೆಯ ವಿವಸ್ತ್ರ ಕೇಸ್ : 12 ಆರೋಪಿಗಳಿಗೆ 5 ವರ್ಷ ಕಠಿಣ...

BREAKING : ವಂಟಮೂರಿ ಮಹಿಳೆಯ ವಿವಸ್ತ್ರ ಕೇಸ್ : 12 ಆರೋಪಿಗಳಿಗೆ 5 ವರ್ಷ ಕಠಿಣ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ.!


ಬೆಳಗಾವಿ: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಬೆಳಗಾವಿಯ ವಂಟಮೂರಿ ಗ್ರಾಮದ ಮಹಿಳೆಯ ಮೇಲಿನ ಅಮಾನವೀಯ ಹಲ್ಲೆ ಮತ್ತು ವಿವಸ್ತ್ರಗೊಳಿಸಿದ ಪ್ರಕರಣದಲ್ಲಿ ನ್ಯಾಯಾಲಯ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ. ಪ್ರಕರಣದ 12 ಮಂದಿ ಆರೋಪಿಗಳು ದೋಷಿಗಳು ಎಂದು ಸಾಬೀತಾಗಿದ್ದು, ಅವರಿಗೆ 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಬೆಳಗಾವಿಯ 10ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: 2023ರ ಡಿಸೆಂಬರ್ನಲ್ಲಿ ನಡೆದ ಈ ಘಟನೆಯಲ್ಲಿ, ಯುವಕನೊಬ್ಬ ಯುವತಿಯೊಂದಿಗೆ ಓಡಿಹೋಗಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಯುವತಿಯ ಕಡೆಯವರು ಯುವಕನ ತಾಯಿಯ ಮೇಲೆ ಅಮಾನುಷವಾಗಿ ದಾಳಿ ಮಾಡಿದ್ದರು. ಆಕೆಯನ್ನು ಮನೆಯಿಂದ ಎಳೆದುಕೊಂಡು ಬಂದು ವಿವಸ್ತ್ರಗೊಳಿಸಿ, ವಿದ್ಯುತ್ ಕಂಬಕ್ಕೆ ಕಟ್ಟಿ ಸಾರ್ವಜನಿಕವಾಗಿ ಹಲ್ಲೆ ನಡೆಸಲಾಗಿತ್ತು. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ನ್ಯಾಯಾಲಯದ ತೀರ್ಪು: ನ್ಯಾಯಾಧೀಶರಾದ ಎಚ್.ಎಸ್. ಮಂಜುನಾಥ್ ಅವರು ವಿಚಾರಣೆ ನಡೆಸಿ, 12 ಜನ ಆರೋಪಿಗಳಿಗೆ ತಲಾ 5 ವರ್ಷ ಕಠಿಣ ಶಿಕ್ಷೆ ವಿಧಿಸಿದ್ದಾರೆ. ಶಿಕ್ಷೆಗೊಳಗಾದವರಲ್ಲಿ ಬಸಪ್ಪ ನಾಯಿಕ, ರಾಜು ನಾಯಿಕ ಸೇರಿದಂತೆ ಇತರ 12 ಮಂದಿ ಸೇರಿದ್ದಾರೆ. ಪ್ರಕರಣದಲ್ಲಿದ್ದ ಓರ್ವ ಬಾಲಾಪರಾಧಿಯನ್ನು ಹೊರತುಪಡಿಸಿ ಉಳಿದವರಿಗೆ ಈ ಶಿಕ್ಷೆ ವಿಧಿಸಲಾಗಿದೆ.
2023ರ ಡಿಸೆಂಬರ್ನಲ್ಲಿ ಮಗ ಪ್ರೀತಿಸಿ ಓಡಿಹೋದ ಎಂಬ ಕಾರಣಕ್ಕೆ, ಆತನ ತಾಯಿಯನ್ನು ಅಮಾನವೀಯವಾಗಿ ವಿವಸ್ತ್ರಗೊಳಿಸಿ, ವಿದ್ಯುತ್ ಕಂಬಕ್ಕೆ ಕಟ್ಟಿ ಸಾರ್ವಜನಿಕವಾಗಿ ಹಲ್ಲೆ ಮಾಡಲಾಗಿತ್ತು. ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿದ್ದ ಈ ಕ್ರೌರ್ಯಕ್ಕೆ ಇಂದು ಬೆಳಗಾವಿಯ 10ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಇತಿಹಾಸಾರ್ಹ ತೀರ್ಪು ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೋರ್ಟ್ ನೀಡಿದ ಶಿಕ್ಷೆಯ ವಿವರ
ಕಠಿಣ ಶಿಕ್ಷೆ: ದೋಷಿಗಳಿಗೆ ತಲಾ 5 ವರ್ಷ ಕಠಿಣ ಜೈಲು ಶಿಕ್ಷೆ.
ದಂಡ: ಪ್ರತಿಯೊಂದು ಸೆಕ್ಷನ್ ಅಡಿಯಲ್ಲಿ ದಂಡ ವಿಧಿಸಲಾಗಿದೆ.
ದೋಷಿಗಳ ಪಟ್ಟಿ: ಬಸಪ್ಪ ನಾಯಿಕ, ರಾಜು ನಾಯಿಕ ಸೇರಿದಂತೆ ಒಟ್ಟು 12 ಮಂದಿಗೆ ಶಿಕ್ಷೆ. (ಒಬ್ಬ ಬಾಲಾಪರಾಧಿಯನ್ನು ಹೊರತುಪಡಿಸಿ).

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular