HomeLatest Newsಅಮೆರಿಕ ವೀಸಾ ನಿರಾಕರಣೆ: ಭಾರತೀಯ AI ಸ್ಟಾರ್ಟ್‌ಅಪ್ ಸಂಸ್ಥಾಪಕನ ನೋವಿನ ಕಥೆ

ಅಮೆರಿಕ ವೀಸಾ ನಿರಾಕರಣೆ: ಭಾರತೀಯ AI ಸ್ಟಾರ್ಟ್‌ಅಪ್ ಸಂಸ್ಥಾಪಕನ ನೋವಿನ ಕಥೆ

ಬೆಂಗಳೂರು: ನೀವು ಎಷ್ಟೇ ದೊಡ್ಡ ಕಂಪನಿಯ ಸಿಇಒ ಆಗಿರಲಿ, ನಿಮ್ಮ ಕಂಪನಿಗೆ ಕೋಟಿ ಕೋಟಿ ಹೂಡಿಕೆ ಬಂದಿರಲಿ, ಅಮೆರಿಕದ ವೀಸಾ ಅಧಿಕಾರಿಗಳ ಮುಂದೆ ಅದೆಲ್ಲಾ ಗೌಣ ಬೆಂಗಳೂರು ಮೂಲದ ಎಐ ಸ್ಟಾರ್ಟ್‌ಅಪ್ NeoSapien ಸಂಸ್ಥಾಪಕ ಧನಂಜಯ್ ಯಾದವ್ ಅವರ ವೀಸಾ ತಿರಸ್ಕೃತಗೊಂಡಿರುವ ಸುದ್ದಿ ಈಗ ಟೆಕ್ ಲೋಕದಲ್ಲಿ ಸಂಚಲನ ಮೂಡಿಸಿದೆ.

ಏನಿದು ಹೈ-ಪ್ರೊಫೈಲ್ ವೀಸಾ ರಿಜೆಕ್ಷನ್
ಧನಂಜಯ್ ಅವರು ಸಾಮಾನ್ಯ ವ್ಯಕ್ತಿಯಲ್ಲ. ಅಮೆರಿಕದಲ್ಲೇ ಓದಿ, ಜರ್ಮನಿಯಲ್ಲಿ ಕೆಲಸ ಮಾಡಿದ ಅನುಭವ ಇರುವವರು. ಅವರ ಕಂಪನಿಯಲ್ಲಿ ಹೂಡಿಕೆ ಮಾಡಿರುವ ಅಮೆರಿಕದ ದೈತ್ಯ ಕಂಪನಿ Pyxis ($200 ಮಿಲಿಯನ್ ಹೂಡಿಕೆ ಹೊಂದಿರುವ ಸಂಸ್ಥೆ) ಸ್ವತಃ ಇವರನ್ನು ಆಹ್ವಾನಿಸಿತ್ತು. ಇಷ್ಟೆಲ್ಲಾ ಬ್ಯಾಕಿಂಗ್ ಇದ್ದರೂ ಫೆಬ್ರವರಿ 3ರಂದು ನಡೆದ ಸಂದರ್ಶನದಲ್ಲಿ ಇವರ ಅರ್ಜಿಯನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಲಾಗಿದೆ.

ವೀಸಾ ರಿಜೆಕ್ಟ್ ಆಗಲು ಕಾರಣವೇನು?

ಧನಂಜಯ್ ಅವರು ಎಕ್ಸ್ (X) ನಲ್ಲಿ ಹಂಚಿಕೊಂಡಿರುವ ಪ್ರಕಾರ, ಈ ತಿರಸ್ಕಾರಕ್ಕೆ ಅವರ ‘ಕಡಿಮೆ ಸಂಬಳ’ ಕಾರಣವಾಗಿರಬಹುದು

“ನಾನು ಸ್ಟಾರ್ಟ್‌ಅಪ್ ಫೌಂಡರ್ ಆಗಿ ಪಡೆಯುವ ಸಂಬಳ ತುಂಬಾ ಕಡಿಮೆ. ಪ್ರಯಾಣದ ವೆಚ್ಚವನ್ನು ಕಂಪನಿಯೇ ಭರಿಸುತ್ತದೆ ಎಂದು ಹೇಳಿದರೂ ಅಧಿಕಾರಿಗಳು ಒಪ್ಪಲಿಲ್ಲ. ಸಂಬಳದ ವಿಷಯ ಕೇಳಿದ ತಕ್ಷಣವೇ ವೀಸಾ ರಿಜೆಕ್ಟ್ ಮಾಡಿದರು,” ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಡಿಬೇಟ್
ಧನಂಜಯ್ ಅವರ ಪೋಸ್ಟ್ ಬೆನ್ನಲ್ಲೇ ನೆಟ್ಟಿಗರು ಎರಡು ಭಾಗವಾಗಿ ವಾದ ಮಾಡುತ್ತಿದ್ದಾರೆ:

ಸ್ಟಾರ್ಟ್‌ಅಪ್ ಪರ ವಾದ: “ಫೌಂಡರ್‌ಗಳು ಆರಂಭದಲ್ಲಿ ಸಂಬಳ ಕಡಿಮೆ ತಗೊಳ್ತಾರೆ ಅನ್ನೋ ಕನಿಷ್ಠ ಜ್ಞಾನವೂ ವೀಸಾ ಅಧಿಕಾರಿಗಳಿಗೆ ಇಲ್ಲವೇ? ಅಮೆರಿಕಕ್ಕೆ ಹೂಡಿಕೆ ಬೇಕು, ಆದ್ರೆ ಹೂಡಿಕೆ ತರುವ ಉದ್ಯಮಿಗಳು ಬೇಡ್ವಾ?” ಎಂದು ಹಲವರು ಕಿಡಿಕಾರಿದ್ದಾರೆ.

ಅಮೆರಿಕನ್ ಸಿಸ್ಟಮ್ ಪರ ವಾದ: “ಅಧಿಕಾರಿಗಳಿಗೆ ನಿಮ್ಮ ಟೈಟಲ್ ಮುಖ್ಯವಲ್ಲ, ನಿಮ್ಮ ಪರ್ಸನಲ್ ಬ್ಯಾಂಕ್ ಬ್ಯಾಲೆನ್ಸ್ ಮುಖ್ಯ. ಸ್ವಂತಕ್ಕೆ ಶಕ್ತಿ ಇಲ್ಲದಿದ್ದರೆ ಅವರು ವಾಪಸ್ ಬರ್ತಾರೆ ಅನ್ನೋ ನಂಬಿಕೆ ಅವರಿಗೆ ಇರೋದಿಲ್ಲ,” ಎಂದು ಕೆಲವರು ಕಠಿಣವಾಗಿ ಪ್ರತಿಕ್ರಿಯಿಸಿದ್ದಾರೆ.

ಲೂಟಿ ಆರೋಪ: “ಇದು ವೀಸಾ ಶುಲ್ಕದ ಹೆಸರಲ್ಲಿ ಮಾಡ್ತಿರೋ ಹೊಸ ದಂಧೆ. ದಾಖಲೆಗಳು ಸರಿಯಿದ್ದರೂ ರಿಜೆಕ್ಟ್ ಮಾಡೋದು ಸರಿಯಲ್ಲ,” ಎಂಬ ಕೂಗು ಕೇಳಿಬರುತ್ತಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular