HomeLive Newsವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಶರಣು ಸಲಗಾರ್ ವಿರುದ್ಧ ಶಾಸಕ ಶಿವಲಿಂಗೇಗೌಡ ರೋಷಾವೇಷ: ಏಕವಚನದಲ್ಲಿ ಹಿಗ್ಗಾಮುಗ್ಗಾ ವಾಗ್ದಾಳಿ

ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಶರಣು ಸಲಗಾರ್ ವಿರುದ್ಧ ಶಾಸಕ ಶಿವಲಿಂಗೇಗೌಡ ರೋಷಾವೇಷ: ಏಕವಚನದಲ್ಲಿ ಹಿಗ್ಗಾಮುಗ್ಗಾ ವಾಗ್ದಾಳಿ

ಬೆಂಗಳೂರು: ವಿಧಾನಸಭೆಯಲ್ಲಿ ವಿಪಕ್ಷ ಬಿಜೆಪಿ ಸದಸ್ಯರು ಒಂದೆಡೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರೆ ಮತ್ತೊಂದೆಡೆ ವಿಬಿ ಜಿ ರಾಮ್ ಜಿ ಕಾಯ್ದೆ ವಿರುದ್ಧ ರಾಜ್ಯ ಕಾಂಗ್ರೆಸ್ ಸರ್ಕಾರ ಮಂಡಿಸಿರುವ ನಿರ್ಣಯ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸದಸ್ಯರ ವರ್ತನೆಗೆ ಕೆಂಡಾಮಂಡಲವಾಗಿರುವ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ, ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸಭೆಯಲ್ಲಿ ವಿಬಿ ಜಿ ರಾಮ್ ಜಿ ಕಾಯ್ದೆ ಬಗ್ಗೆ ಚರ್ಚೆಯ ವೇಳೆ ಮಾತನಾಡಿದ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ, ಬಿಜೆಪಿ ಶಾಸಕ ಶರಣು ಸಲಗಾರ್ ವಿರುದ್ಧ ಕಿಡಿ ಕಾರಿದ್ದಾರೆ. ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಶರಣು ಸಲಗಾರ್, ಶಿವಲಿಂಗೆಗೌಡರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಂತೆ ಕೆರಳಿ ಕೆಂಡದಂತಾದ ಶಿವಲಿಂಗೇಗೌಡ, ಯಾಕೆ ಕೋತಿ ಬಡ್ಕೊಂಡಂಗೆ ಬಡ್ಕೋತೀಯಾ? ನೀನು ಕೋತಿ ಆಟ ಆಡೋಕೆ ಹೋಗಬೇಡ. ನಿನಗೆ ಮಾನ ಮರ್ಯಾದೆ ಇದೆಯಾ? ನಿನ್ನ ಹೆಂಡತಿಯನ್ನು ತಹಶೀಲ್ದಾರ್ ಮಾಡಿಸಿ ದುಡ್ದು ಹೊಡೆದಿದ್ದೀಯಾ ಎಂದು ಕಿಡಿಕಾರಿದ್ದಾರೆ.

ಲೇ ಆರ್ ಎಸ್ ಎಸ್ಸು, ಬಿಜೆಪಿ ಸದಸ್ಯರು ಹೀಗೆ ಅನಗತ್ಯವಾಗಿ ಪ್ರತಿಭಟನೆ, ಸದನದಲ್ಲಿ ಧರಣಿ ನಡೆಸಿಯೇ ಆರ್.ಎಸ್.ಎಸ್ ಮರ್ಯಾದೆ ತೆಗೆದಿದ್ದಾರೆ. ನೀವೆಲ್ಲಾ ಅಸೆಂಬ್ಲಿಗೆ ಕಲಾಪ ನಡೆಸಲು ಬಂದಿದೀರಾ? ಅಥವಾ ಡ್ಯಾನ್ಸ್ ಮಾಡಲು ಬಂದಿದ್ದೀರಾ? ನಾವೂ ಕೂಡ ಸದನದಲ್ಲಿ ಧರಣಿ ಮಾಡಿದ್ದೇವೆ. ಆದರೆ ಯಾವತ್ತೂ ಈ ರೀತಿ ವರ್ತಿಸಿಲ್ಲ. ಚರ್ಚೆ ನಡೆಸಲು ಬಿಡದೇ ಕೂಗಾಡುವುದು. ಧಿಕ್ಕಾರ ಕೂಗೂವುದು, ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಧಾನಸಭೆಯ ಕಲಾಪ ವಿಪಕ್ಷ ಬಿಜೆಪಿ ಹಾಗೂ ಆಡಳಿತ ಪಕ್ಷ ಕಾಂಗ್ರೆಸ್ ಸದಸ್ಯರ ಗದ್ದಲ-ಗಲಾಟೆಗೆ ಸಾಕ್ಷಿಯ್ತಾದ ಘಟನೆ ನಡೆಯಿತು.

For Latest News Updates, Join Our Whatsapp Community🚩
RELATED ARTICLES

Most Popular