ಚಿಕ್ಕಮಗಳೂರು: ದಸರಾ ರಜೆ ಹಿನೆಲೆಯಲ್ಲಿ ಮಜಾ ಮಾಡಲು ಕೆರೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಮರ್ಲೆ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಲಿಖಿತ್ (12) ಭುವನ್ (12), ತರುಣ್ (12) ಮೃತ ಬಾಲಕರು. ದಸರಾ ರಜೆ ಹಿನ್ನೆಲೆಯಲ್ಲಿ ಮನೆಯಲ್ಲಿ ಯಾರೂ ಇಲ್ಲವೆಂದು ಈಜಾಡಲು ಕೆರೆಗೆ ಹೋಗಿದ್ದಾರೆ.
ಮೂವರು ಮಕ್ಕಳಿಗೂ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ. ಆದರೂ ಕೆರೆಯಲ್ಲಿ ಇಳಿದ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳೀಯರು ಕೆರೆಯಿಂದ ಮೃತ ದೇಹಗಳನ್ನು ಹೊರತೆಗೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸಜಾ ಕೈದಿಯ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಡಿಐಜಿ: ಬಂಧಿತ ಜೈಲಾಧಿಕಾರಿಯ ಮತ್ತಷ್ಟು ಕರ್ಮಕಾಂಡ ಬಯಲು
ಬೆಂಗಳೂರು: ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯನ್ನು ಬಿಡುಗಡೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಜೈಲು ಡಿಐಜಿ ಸೋಮಶೇಖರ್ ರನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಅವರ ವಿಚಾರಣೆ ವೇಳೆ ಹಲವು ಸ್ಫೋಟಕ ಮಾಹಿತಿಗಳು ಬಯಲಾಗಿವೆ.
2018ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಶಂಕರ್ ಎಂಬ ಕೈದಿಯನ್ನ ಸುಪ್ರೀಂ ಕೋರ್ಟ್‌ನ ನಕಲಿ ಆದೇಶದ ಆಧಾರದ ಮೇಲೆ ಬಿಡುಗಡೆ ಮಾಡಲಾಗಿತ್ತು. ಶಂಕರ್ ಬಿಡುಗಡೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ನಕಲಿ ಆದೇಶವನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಲಾಗಿದ್ದು, ಈ ನಕಲಿ ದಾಖಲೆಯನ್ನ ಜೈಲಿನ ಎಸ್‌ಡಿಎ ಆಗಿದ್ದ ಶ್ರೀಕಾಂತ್ ಎಸ್. ಎಂಬಾತ ಸೃಷ್ಟಿಸಿದ್ದಾನೆ ಎಂಬ ಆರೋಪವಿದೆ. ತನಿಖೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಡಿಐಜಿ ಸೋಮಶೇಖರ್ ಹಾಗೂ ಶ್ರೀಕಾಂತ್ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಿಡುಗಡೆ ನಂತರ ಪತ್ನಿಗೆ ಕೈದಿ ಶಂಕರ್ ಕೈಕೊಟ್ಟಿದ್ದರಿಂದ ಪ್ರಕರಣ ಬಹಿರಂಗವಾಗಿದೆ ಎನ್ನಲಾಗಿದ್ದು, ಪತಿ ಮತ್ತೊಂದು ಮದುವೆಯಾಗಿದ್ದಕ್ಕೆ ಕೋಪಗೊಂಡ ಪತ್ನಿ ಸತ್ಯ ಹೇಳಿರುವ ಮಾಹಿತಿ ಲಭ್ಯವಾಗಿದೆ.
ಅನಾಮಧೇಯ ಪತ್ರದ ಆಧಾರದ ಮೇಲೆ ಕಾರಾಗೃಹ ಇಲಾಖೆ ತನಿಖೆ ನಡೆಸಿದಾಗ ಬೃಹತ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಅಪಹರಣ, ಕೊಲೆ ಪ್ರಕರಣದಲ್ಲಿ ಶಂಕರ್ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ. ಜೈಲಿಗೆ ಭೇಟಿ ನೀಡುತ್ತಿದ್ದ ಶಂಕರ್ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಂಡು, 2018ರಲ್ಲಿ ಪರಪ್ಪನ ಅಗ್ರಹಾರ ಜೈಲಿನ ಅಧೀಕ್ಷಕರಾಗಿದ್ದ ಸೋಮಶೇಖರ್ ಸಹಾಯ ಮಾಡಿದ್ದರು.
ಸಜಾ ಬಂದಿಗಳ ವಿಭಾಗದ ಸಿಬ್ಬಂದಿ ಶ್ರೀಕಾಂತ್‌ಗೆ ನಕಲಿ ದಾಖಲೆ ಸೃಷ್ಟಿಸಲು ಸೂಚಿಸಿದ್ದ ಸೋಮಶೇಖರ್, ಸುಪ್ರೀಂಕೋರ್ಟ್‌ನ ನಕಲಿ ಆದೇಶ ಇಟ್ಟುಕೊಂಡು 2018ರಲ್ಲಿ ಶಂಕರ್ನ ಜೈಲಿನಿಂದ ಬಿಡುಗಡೆ ಮಾಡಿದ್ದರು ಎನ್ನಲಾಗಿದೆ.
ತನಿಖೆಗೆ ಅಸಹಕಾರ ಹಿನ್ನೆಲೆ ಇತ್ತೀಚೆಗೆ ಶಂಕರ್ ಹಾಗೂ ಶ್ರೀಕಾಂತ್‌ನನ್ನು ಪೊಲೀಸರು ಬಂಧಿಸಿದ್ದರು. ತನಿಖೆ ವೇಳೆ ಶಂಕರ್ ಪತ್ನಿಗೆ ಡಿಐಜಿ ವಿಡಿಯೋ ಕರೆ ಮಾಡಿರೋದು ಪತ್ತೆಯಾಗಿದೆ. ವಿಡಿಯೋ ಕಾಲ್‌ನಲ್ಲಿ ವಿವಸ್ತ್ರವಾಗುವಂತೆ ಡಿಐಜಿ ಸೋಮಶೇಖರ್ ಹೇಳಿದ್ದು, ವಿಡಿಯೋ ವಶಕ್ಕೆ ಪಡೆದ ಪೊಲೀಸರು ಅದನ್ನು ಎಫ್ಎಸ್ಎಲ್‌ಗೆ ರವಾನಿಸಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ಬಳಿಕ ಶಂಕರ್ ಪತ್ನಿ ಮನೆಗೆ ಹೋಗದೇ ಬೇರೊಬ್ಬಳನ್ನು ಎರಡನೇ ಮದುವೆಯಾಗಿದ್ದ. ಇದರಿಂದ ಕೋಪಗೊಂಡ ಶಂಸ್ಕರ್ ಪತ್ನಿ, ಅನಾಮಧೇಯ ಪತ್ರದ ಮೂಲಕ ಇಡೀ ಪ್ರಕರಣ ಬಯಲಿಗೆಳೆದಿದ್ದಾಳೆ ಎನ್ನಲಾಗಿದೆ.

