HomeLatest NewsWPL 2026: ಕೇವಲ 15 ಓವರ್‌ಗಳಲ್ಲಿ ಟಾರ್ಗೆಟ್ ಚೇಸ್ ಮಾಡಿದ ಡೆಲ್ಲಿ; ಆರ್‌ಸಿಬಿ ಜತೆ ಫೈನಲ್...

WPL 2026: ಕೇವಲ 15 ಓವರ್‌ಗಳಲ್ಲಿ ಟಾರ್ಗೆಟ್ ಚೇಸ್ ಮಾಡಿದ ಡೆಲ್ಲಿ; ಆರ್‌ಸಿಬಿ ಜತೆ ಫೈನಲ್ ಪಂದ್ಯ

ವಡೋದರಾದ ಬಿಸಿಎ ಕ್ರೀಡಾಂಗಣದಲ್ಲಿ ನಡೆದ ವನಿತೆಯರ ಪ್ರೀಮಿಯರ್ ಲೀಗ್ 2026ರ ಎಲಿಮಿನೇಟರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗುಜರಾತ್ ಜೈಂಟ್ಸ್ ತಂಡದ ವಿರುದ್ಧ 7 ವಿಕೆಟ್‌ಗಳ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿದೆ. ಫೈನಲ್ ಪಂದ್ಯ ಫೆಬ್ರವರಿ 5ರಂದು ವಡೋದರಾದ ಬಿಸಿಎ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 168 ರನ್ ಕಲೆಹಾಕಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲ್ಲಲು 169 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ಡೆಲ್ಲಿ ಕ್ಯಾಪಿಟಲ್ಸ್ 15.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 169 ರನ್ ಬಾರಿಸಿತು.

ಗುಜರಾತ್ ಇನ್ನಿಂಗ್ಸ್: ತಂಡದ ಪರ ಬೆಥ್ ಮೂನಿ ಹಾಗೂ ಜಾರ್ಜಿಯಾ ಹೊರತುಪಡಿಸಿ ಇನ್ಯಾವ ಆಟಗಾರ್ತಿಯೂ ಸಹ ಜವಾಬ್ದಾರಿಯುತ ಆಟವನ್ನಾಡಲಿಲ್ಲ. ಮೂನಿ 62 ರನ್ ಬಾರಿಸಿ ಏಕಾಂಗಿ ಹೋರಾಟ ನಡೆಸಿ ಅಜೇಯರಾಗಿ ಉಳಿದರು. ಇನ್ನುಳಿದಂತೆ ಸೋಫಿ ಡಿವೈನ್ 6, ಅನುಷ್ಕಾ ಶರ್ಮಾ 16, ಆಶ್ಲಿ ಗಾರ್ಡ್‌ನರ್ ಡಕ್‌ಔಟ್, ಕನಿಕಾ ಅಹುಜಾ 6, ಜಾರ್ಜಿಯಾ ವಾರೆಹಮ್ 35, ಭಾರ್ತಿ ಫುಲ್ಮಲಿ ಡಕ್‌ಔಟ್, ಕಾಶ್ವಿ ಗೌತಮ್ 18 ಹಾಗೂ ಯಾವುದೇ ರನ್ ಬಾರಿಸದ ತನುಜಾ ಕನ್ವೆರ್ ಅಜೇಯರಾಗಿ ಉಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡೆಲ್ಲಿ ಪರ ಚಿನೆಲ್ ಹೆನ್ರಿ ಮೂರು ವಿಕೆಟ್, ನಂದನಿ ಶರ್ಮಾ ಎರಡು ವಿಕೆಟ್ ಹಾಗೂ ಮಿನ್ನು ಮಣಿ ಒಂದು ವಿಕೆಟ್ ಪಡೆದರು.

ಡೆಲ್ಲಿ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಲಿಜೆಲ್ ಲೀ ಹಾಗೂ ಶಫಾಲಿ ವರ್ಮಾ 89 ರನ್‌ಗಳ ಜತೆಯಾಟವನ್ನಾಡುವ ಮೂಲಕ ಉತ್ತಮ ಆರಂಭ ಕಟ್ಟಿಕೊಟ್ಟರು. ಶಫಾಲಿ ವರ್ಮಾ 31 ರನ್ ಗಳಿಸಿದರೆ, ಲಿಜೆಲ್ ಲೀ 24 ಎಸೆತಗಳಲ್ಲಿ 43 ರನ್ ಬಾರಿಸಿದರು. ಇನ್ನುಳಿದಂತೆ ನಾಯಕಿ ಜೆಮಿಮಾ ರೊಡ್ರಿಗಸ್ 23 ಎಸೆತಗಳಲ್ಲಿ 41 ರನ್‌, ಲೌರಾ ವಾಲ್ವರ್ಟ್ ಅಜೇಯ 32 ಹಾಗೂ ಮಾರಿಜಾನ್ ಕಾಪ್ ಅಜೇಯ 4 ರನ್ ಬಾರಿಸಿದರು.

ಗುಜರಾತ್ ಪರ ಜಾರ್ಜಿಯಾ ಎರಡು ವಿಕೆಟ್ ಹಾಗೂ ರಾಜೇಶ್ವರಿ ಗಾಯಕ್ವಾಡ್ ಒಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

Most Popular