HomeLatest NewsBaggage Rules 2026 : ವಿದೇಶದಿಂದ ಬರುವ ಪ್ರಯಾಣಿಕರಿಗೆ ಬಂಪರ್ ಗಿಫ್ಟ್ : ತೆರಿಗೆ ಮುಕ್ತ...

Baggage Rules 2026 : ವಿದೇಶದಿಂದ ಬರುವ ಪ್ರಯಾಣಿಕರಿಗೆ ಬಂಪರ್ ಗಿಫ್ಟ್ : ತೆರಿಗೆ ಮುಕ್ತ ಮಿತಿ 75,000ಕ್ಕೆ ಏರಿಕೆ!

ನವದೆಹಲಿ: ವಿದೇಶದಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಸುಂಕ ರಹಿತ (Duty-Free) ಸಾಮಗ್ರಿಗಳ ಮಿತಿಯನ್ನು ಈ ಹಿಂದೆ ಇದ್ದ ₹50,000 ರಿಂದ ₹75,000 ಕ್ಕೆ ಹೆಚ್ಚಿಸಲಾಗಿದೆ. ಫೆಬ್ರವರಿ 2, 2026 ರಿಂದಲೇ ಈ ಹೊಸ ನಿಯಮ ಜಾರಿಗೆ ಬಂದಿದ್ದು, ಭಾರತೀಯ ನಾಗರಿಕರು ಮತ್ತು ವಿದೇಶಿ ಪ್ರವಾಸಿಗರಿಬ್ಬರಿಗೂ ಇದು ಅನ್ವಯವಾಗಲಿದೆ.

ಹೊಸ ನಿಯಮದಲ್ಲೇನಿದೆ ?
ಹೊಸ ನಿಯಮಗಳ ಪ್ರಕಾರ, ವಿಮಾನ ಅಥವಾ ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ಬರುವ ಭಾರತೀಯರು ತಮ್ಮೊಂದಿಗೆ ₹75,000 ಮೌಲ್ಯದ ವಸ್ತುಗಳನ್ನು ಯಾವುದೇ ಕಸ್ಟಮ್ಸ್ ಸುಂಕವಿಲ್ಲದೆ ತರಬಹುದು.ಈ ಸಾಮಗ್ರಿಗಳು ವೈಯಕ್ತಿಕ ಬಳಕೆಗೆ ಇರಬೇಕು ಮತ್ತು ಪ್ರಯಾಣಿಕರ ಬ್ಯಾಗೇಜ್ನಲ್ಲಿ ಇರಬೇಕು.ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಅವರ ದಿನನಿತ್ಯದ ಬಳಕೆಯ ವಸ್ತುಗಳು ಮತ್ತು ಸ್ಮರಣಿಕೆಗಳನ್ನು (Souvenirs) ತರಲು ಯಾವುದೇ ಸುಂಕವಿರುವುದಿಲ್ಲ.

ವಿದೇಶಿ ಪ್ರವಾಸಿಗರಿಗೂ ರಿಲೀಫ್

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿದೇಶಿ ಮೂಲದ ಪ್ರವಾಸಿಗರಿಗೂ ಸರ್ಕಾರ ಸೌಲಭ್ಯ ನೀಡಿದೆ. ಈ ಹಿಂದೆ ವಿದೇಶಿ ಪ್ರವಾಸಿಗರಿಗೆ ಕೇವಲ ₹15,000 ವರೆಗೆ ಮಾತ್ರ ಮಿತಿ ಇತ್ತು. ಈಗ ಅದನ್ನು ₹25,000 ಕ್ಕೆ ಏರಿಸಲಾಗಿದೆ. ಇದರಿಂದ ಭಾರತಕ್ಕೆ ಭೇಟಿ ನೀಡುವ ವಿದೇಶಿಗರಿಗೂ ಅನುಕೂಲವಾಗಲಿದೆ.
ಚಿನ್ನಾಭರಣ ತರುವವರಿಗೆ ಹೊಸ ಮಾರ್ಗಸೂಚಿ

ಒಂದು ವರ್ಷಕ್ಕಿಂತ ಹೆಚ್ಚು ಕಾಲ ವಿದೇಶದಲ್ಲಿ ನೆಲೆಸಿ ಭಾರತಕ್ಕೆ ಮರಳುವವರಿಗೆ ಈ ಕೆಳಗಿನಂತೆ ಕಸ್ಟಮ್ಸ್ ಸುಂಕ ವಿನಾಯಿತಿ ಸಿಗಲಿದೆ:
• ಮಹಿಳಾ ಪ್ರಯಾಣಿಕರು: 40 ಗ್ರಾಂ ವರೆಗಿನ ಚಿನ್ನಾಭರಣಗಳನ್ನು ತೆರಿಗೆ ಇಲ್ಲದೆ ತರಬಹುದು.
• ಇತರ ಪ್ರಯಾಣಿಕರು (ಪುರುಷರು): 20 ಗ್ರಾಂ ವರೆಗಿನ ಚಿನ್ನಾಭರಣಗಳಿಗೆ ಸುಂಕ ವಿನಾಯಿತಿ ಇರುತ್ತದೆ.
• ಇದು ಚಿನ್ನ, ಬೆಳ್ಳಿ, ಪ್ಲಾಟಿನಂ ಅಥವಾ ಯಾವುದೇ ಬೆಲೆಬಾಳುವ ಲೋಹದ ಆಭರಣಗಳಿಗೆ ಅನ್ವಯಿಸುತ್ತದೆ. ಆದರೆ ಇವು ಪ್ರಯಾಣಿಕರ ವೈಯಕ್ತಿಕ ಲಗೇಜ್ ಆಗಿರಬೇಕು.

ಸಿಬ್ಬಂದಿಗಳಿಗೂ ಅನ್ವಯ

ವಿದೇಶಿ ವಿಮಾನ ಅಥವಾ ಹಡಗುಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ತಮ್ಮ ಕೆಲಸ ಮುಗಿಸಿ ಕೊನೆಯದಾಗಿ ಭಾರತಕ್ಕೆ ಮರಳುವಾಗ ಈ ಸೌಲಭ್ಯ ಪಡೆಯಬಹುದು. ಅಲ್ಲದೆ, ತಮ್ಮ ಕುಟುಂಬಕ್ಕೆ ಉಡುಗೊರೆಯಾಗಿ ಚಾಕೊಲೇಟ್, ಕಾಸ್ಮೆಟಿಕ್ಸ್ ತರಲು ಅವಕಾಶವಿದೆ. ಆದರೆ ಅದರ ಒಟ್ಟು ಮೌಲ್ಯ ₹2,500 ಮೀರುವಂತಿಲ್ಲ.

  1. ಸುಂಕ ರಹಿತ ಮಿತಿ ₹50,000 ರಿಂದ ₹75,000ಕ್ಕೆ ಏರಿಕೆ.
  2. ವಿದೇಶಿ ಪ್ರವಾಸಿಗರಿಗೆ ₹25,000 ವರೆಗೆ ವಿನಾಯಿತಿ.
  3. ಮಹಿಳೆಯರಿಗೆ 40 ಗ್ರಾಂ ಹಾಗೂ ಪುರುಷರಿಗೆ 20 ಗ್ರಾಂ ಚಿನ್ನ ತರಲು ಅವಕಾಶ.
  4. ನಿಯಮಗಳು ಫೆಬ್ರವರಿ 2, 2026 ರಿಂದ ಜಾರಿಗೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular