HomeLatest Newsಅಂಬರೀಶ್, HDK, ಚಲುವರಾಯಸ್ವಾಮಿ ಬಗ್ಗೆ ನಿಂದನೆ: ಮಾಜಿ ಸಂಸದ ಶಿವರಾಮೇಗೌಡಗೆ ಕಾಂಗ್ರೆಸ್ ನಿಂದ ಗೇಟ್ ಪಾಸ್…?

ಅಂಬರೀಶ್, HDK, ಚಲುವರಾಯಸ್ವಾಮಿ ಬಗ್ಗೆ ನಿಂದನೆ: ಮಾಜಿ ಸಂಸದ ಶಿವರಾಮೇಗೌಡಗೆ ಕಾಂಗ್ರೆಸ್ ನಿಂದ ಗೇಟ್ ಪಾಸ್…?

ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡರ ಆಡಿಯೋ ವೈರಲ್ ವಿಚಾರಕ್ಕೆ ಸಂಬಬಂಧಿಸಿದಂತೆ ಕಾಂಗ್ರೆಸ್ ನಿಂದಲೂ ಅವರಿಗೆ ಗೇಟ್ ಪಾಸ್ ನೀಡುವ ಸಾಧ್ಯತೆ ಇದೆ.

ಅವರ ವಿರುದ್ಧ ಶಿಸ್ತುಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ನಿಂದಲೇ ಒತ್ತಾಯ ಕೇಳಿಬಂದಿದೆ. ಈ ಕುರಿತಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಗೆ ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಪತ್ರ ಬರೆದಿದ್ದಾರೆ.

ನಾಲಿಗೆ ಹರಿಬಿಟ್ಟ ಶಿವರಾಮೇಗೌಡ ತಲೆದಂಡಕ್ಕೆ ಕಾಂಗ್ರೆಸ್ ಪಕ್ಷದವರೇ ಪಟ್ಟು ಹಿಡಿದಿದ್ದಾರೆ. ಈ ಹಿಂದೆಯೂ ಆಡಿಯೋ ವಿಚಾರದಲ್ಲಿ ಶಿವರಾಮೇಗೌಡ ಉಚ್ಚಾಟನೆ ಮಾಡಲಾಗಿತ್ತು. ಜೆಡಿಎಸ್ ನಿಂದ ಉಚ್ಚಾಟನೆಗೊಂಡಿದ್ದ ಶಿವರಾಮೇಗೌಡ ಮತ್ತೆ ನಾಲಿಗೆ ಹರಿ ಬಿಟ್ಟು ಈಗ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೆಡಿಎಸ್ ಕಾರ್ಯಕರ್ತನ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಬಹಿರಂಗವಾಗಿದೆ. ಆಡಿಯೋದಲ್ಲಿ ಮಾಜಿ ಸಚಿವ ದಿ.ಅಂಬರೀಶ್, ಕೇಂದ್ರ ಸಚಿವ ಹೆಚ್‍.ಡಿ. ಕುಮಾರಸ್ವಾಮಿ, ಮಾಜಿ ಸಂಸದ ಮಾದೇಗೌಡ, ಸಚಿವ ಚಲುವರಾಯಸ್ವಾಮಿಯವರ ಬಗ್ಗೆ ನಿಂದಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆಡಿಯೋ ವೈರಲ್ ಆಗಿದ್ದು ಹೀಗಾಗಿ ಕಾಂಗ್ರೆಸ್ ನಿಂದ ಶಿವರಾಮೇಗೌಡರನ್ನು ಉಚ್ಚಾಟಿಸುವಂತೆ ಸ್ಥಳೀಯ ನಾಯಕರು ಪತ್ರ ಬರೆದಿದ್ದಾರೆ.

ಶಿವರಾಮೇಗೌಡರ ಮಾತು ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದಿದೆ. ನಮ್ಮ ಪಕ್ಷದ ನಾಯಕರ ವಿರುದ್ಧ ಅವಾಚ್ಯ ಶಬ್ದ ಬಳಸಲಾಗಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪತ್ರ ಬರೆಯಲಾಗಿದೆ. ಆದರೆ, ಇದನ್ನು ಅಲ್ಲಗಳೆದಿರುವ ಶಿವರಾಮೇಗೌಡ, ತಾವು ಆ ರೀತಿ ಮಾತನಾಡಿಲ್ಲ. ಎಐ ಬಳಸಿಕೊಂಡು ಷಡ್ಯಂತ್ರ ಮಾಡಲಾಗಿದೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular