HomeUncategorizedವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ; H.D ಕುಮಾರಸ್ವಾಮಿ ವಿರುದ್ಧ ಸಚಿವ ಚಲುವರಾಯಸ್ವಾಮಿ...

ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ; H.D ಕುಮಾರಸ್ವಾಮಿ ವಿರುದ್ಧ ಸಚಿವ ಚಲುವರಾಯಸ್ವಾಮಿ ವಾಗ್ಧಾಳಿ

ಮೈಸೂರು : ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಎಸ್‌ಐಆರ್‌ನಲ್ಲಿ ಅಕ್ರಮಗಳ ಸರಣಿಯೇ ನಡೆದಿದೆ. ಬಿಎಲ್‌ಒಗಳು 450ಕ್ಕೂ ಹೆಚ್ಚು ಫಾರಂ ನಂಬರ್ 7 ವಿತರಣೆ ಮಾಡಿದ್ದಾರೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ? ದೇಶದ ಸಂವಿಧಾನದ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕಾದ ಚುನಾವಣಾ ಆಯೋಗವು ಎಸ್‌ಐಆರ್ ಮೂಲಕ ಅಕ್ರಮ ಎಸಗಿದೆ. ಇದರಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಹೀಗಾಗಿ, ಕರ್ನಾಟಕದ ಪರ ಮಾತನಾಡಬೇಕಿರುವ ವಿರೋಧ ಪಕ್ಷದ ನಾಯಕರು ಕೇಂದ್ರದ ಪರವಾಗಿ ಮಾತನಾಡುತ್ತಿದ್ದಾರೆ. ಇಂತಹವರಿಗೆ ಯಾವ ಜನಪರ ಕಾಳಜಿ ಇದೆ? ಯಾವ ಮರ್ಯಾದೆ ಇದೆ?” ಇದೇ ಹಾದಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನ ಕೆಲವರಿದ್ದಾರೆ ಎಂದು ಟೀಕಿಸಿದರು.

ಜವಾಬ್ದಾರಿ ಮತ್ತು ಚುನಾವಣಾ ಅಕ್ರಮಗಳ ವಿರುದ್ಧ ಟೀಕೆ

“ಮೂಲ ಕಾಂಗ್ರೆಸಿಗರು ಮಾತನಾಡುತ್ತಿಲ್ಲ, ವಲಸಿಗರೇ ಮಾತನಾಡುತ್ತಿದ್ದಾರೆ” ಎಂದಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, “ಎಚ್.ಡಿ. ಕುಮಾರಸ್ವಾಮಿ ಅವರಿಗೆ ಡಿ.ಕೆ. ಶಿವಕುಮಾರ್ ಹಾಗೂ ನನ್ನನ್ನು ಕಂಡರೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಶಿವಲಿಂಗೇಗೌಡರನ್ನು ಕಂಡರಂತ್ತು ಇನ್ನೂ ಆಗುತ್ತಿಲ್ಲ. ಅವರ ಪಕ್ಷದಲ್ಲೇ ಉಳಿದುಕೊಂಡಿದ್ದರೆ ಬೋರ್ಡ್ ಅಧ್ಯಕ್ಷರನ್ನಾಗಿಯೂ ಯಾರನ್ನೂ ಮಾಡುತ್ತಿರಲಿಲ್ಲ. ರಾಮನಗರದ ಉಸ್ತುವಾರಿ ಸಚಿವರಾಗಿರುವ ಬಾಲಕೃಷ್ಣ, ತಮ್ಮ ವ್ಯಾಪ್ತಿಯಲ್ಲಿನ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬಗ್ಗೆ ಮಾತನಾಡುತ್ತಾರೆ. ಇದರಲ್ಲಿ ಅವರಿಗೇನು ಸಮಸ್ಯೆ?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕುಮಾರಸ್ವಾಮಿ ವಿರುದ್ಧ ಚಲುವರಾಯಸ್ವಾಮಿ ಕಿಡಿ

ಮುಂದುವರಿದು ಮಾತನಾಡಿದ ಅವರು, “ಕಳೆದ ಮೂರು ತಿಂಗಳಿಂದ ಅವರು ಮಾಡುತ್ತಿರುವುದು ಸರಿಯೇ? ಪ್ರಧಾನಿಗಳು ಅವರಿಗೆ ಕೆಲಸವನ್ನೇ ನೀಡಿಲ್ಲ ಅನ್ನಿಸುತ್ತದೆ. ವಾರ ಪೂರ್ತಿ ಬೆಂಗಳೂರಿನ ಮಾಧ್ಯಮಗಳ ಮುಂದೆಯೇ ಇರುತ್ತಾರೆ. ನಾನು ಸಚಿವನಾದ ದಿನದಿಂದಲೂ ಒಂದು ಗಂಟೆಯೂ ಪುರುಸೊತ್ತು ಸಿಗುತ್ತಿಲ್ಲ. ಕೇಂದ್ರ ಮಂತ್ರಿಯಾಗಿರುವ ಅವರಿಗೆ ಯಾವ ಕೆಲಸವೂ ಇಲ್ಲವೇ? ಅವರಿಗೆ ತಲೆಯಲ್ಲಿ ಬುದ್ಧಿ ಇರಬೇಕು. ಅವರು ಮಾಡುತ್ತಿರುವುದು ಸರಿಯಾಗಿದೆಯೇ ಎಂದು ನೀವೆ (ಪತ್ರಕರ್ತರು) ಹೇಳಿ. ನೀವು ಸರಿಯಾಗಿದೆ ಎಂದರೆ ನಾನೇ ಅವರನ್ನು ಅಭಿನಂದಿಸುತ್ತೇನೆ” ಎಂದರು.

“ಇನ್ನೊಬ್ಬರ ಬಗ್ಗೆ ದ್ವೇಷ ಸಾಧಿಸುತ್ತಿದ್ದರೆ ಕೆಲಸ ಮಾಡುವುದು ಹೇಗೆ? ನಾನು ಕುಮಾರಸ್ವಾಮಿ ಆಗುವುದಿಲ್ಲ, ಚಲುವರಾಯಸ್ವಾಮಿ ಆಗಿಯೇ ಇರುತ್ತೇನೆ. ಸಿಕ್ಕಿರುವ ಸಮಯದಲ್ಲಿ ಜನರಿಗಾಗಿ ಕೆಲಸ ಮಾಡಿದರೆ ಸಾಕು, ಅಷ್ಟನ್ನೇ ನಾನು ಮಾಡುತ್ತೇನೆ. ಅವರ ರೀತಿ ಬಾಯಿ ಚಪಲಕ್ಕೆ ಮಾತನಾಡುವವನು ನಾನಲ್ಲ” ಎಂದು ತಿರುಗೇಟು ನೀಡಿದರು.

“ಬರ ಅಧ್ಯಯನ ಸಂಬಂಧ ಕೇಂದ್ರದ ತಂಡ ಬಂದಿದೆ. ಅವರು ಯಾವ ರೀತಿ ವರದಿ ನೀಡುತ್ತಾರೋ ನೋಡಬೇಕು. ನಮ್ಮ ರೈತರ ಪರವಾಗಿಯೇ ವರದಿ ನೀಡುತ್ತಾರೆ ಎಂಬ ವಿಶ್ವಾಸವಿದೆ. ಆದರೆ ಕೇಂದ್ರ ಸರ್ಕಾರ ಈವರೆಗೂ ನಮ್ಮ ನಿರೀಕ್ಷೆಗೆ ತಕ್ಕಂತೆ ಬರ ಪರಿಹಾರ ನೀಡಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದ ವೇಳೆಯೂ ಸಂಪೂರ್ಣ ಪ್ರಮಾಣದ ಪರಿಹಾರ ಬಿಡುಗಡೆ ಮಾಡಿರಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular