HomeLatest Newsಬೆಂಗಳೂರಲ್ಲಿ ಮತ್ತೆ 'ಟೋಯಿಂಗ್' ಆರಂಭ : ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡಿದ್ರೆ ಬೀಳುತ್ತೆ ಭಾರಿ ದಂಡ...

ಬೆಂಗಳೂರಲ್ಲಿ ಮತ್ತೆ ‘ಟೋಯಿಂಗ್’ ಆರಂಭ : ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡಿದ್ರೆ ಬೀಳುತ್ತೆ ಭಾರಿ ದಂಡ !

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು (Traffic Chaos) ನಿಯಂತ್ರಿಸಲು ಮತ್ತು ಅವೈಜ್ಞಾನಿಕ ಪಾರ್ಕಿಂಗ್’ಗೆ ಬ್ರೇಕ್ ಹಾಕಲು ಸಂಚಾರ ಪೊಲೀಸರು ಮತ್ತೆ ಟೋಯಿಂಗ್ (Towing) ಪ್ರಕ್ರಿಯೆಯನ್ನು ಆರಂಭಿಸಲು ಸಿದ್ಧತೆ ನಡೆಸಿದ್ದಾರೆ.

ಹೌದು, ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಆರಂಭವಾಗುತ್ತಿದ್ದು, ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವ ಮುನ್ನ ನೀವು ಹುಷಾರಾಗಿರಬೇಕು.ನಗರದ ರಾಜಾಜಿನಗರ, ಮಲ್ಲೇಶ್ವರಂ ಸೇರಿದಂತೆ ಹಲವು ಕಡೆಗಳಲ್ಲಿ ರಸ್ತೆಗಳಲ್ಲೇ ವಾಹನಗಳನ್ನು ಪಾರ್ಕ್ ಮಾಡಿ ವರ್ಷಗಟ್ಟಲೆ ಬಿಡಲಾಗುತ್ತಿದೆ. ಇಂತಹ ತುಕ್ಕು ಹಿಡಿದ ಮತ್ತು ಅನಾಮಧೇಯ ವಾಹನಗಳಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.

ಇತ್ತೀಚಿನ ‘ಟಾಮ್ಟಾಮ್’ ವರದಿಯ ಪ್ರಕಾರ, ಬೆಂಗಳೂರು ವಿಶ್ವದಲ್ಲೇ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ 2ನೇ ನಗರವಾಗಿ ಹೊರಹೊಮ್ಮಿದೆ ಫುಟ್ಪಾತ್ ಮತ್ತು ಕಿರಿದಾದ ರಸ್ತೆಗಳಲ್ಲಿ ವಾಹನ ನಿಲ್ಲಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಟೋಯಿಂಗ್ ವ್ಯವಸ್ಥೆ ಮರುಜಾರಿ ಮಾಡುವುದು ಉತ್ತಮ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಸ್ತೆ ಬದಿ ಪಾರ್ಕಿಂಗ್ ಕಡಿಮೆ ಮಾಡಲು ಬೆಂಗಳೂರಿನ ಆಯ್ದ ಜನನಿಬಿಡ ಪ್ರದೇಶಗಳಲ್ಲಿ (ಗಾಂಧಿನಗರ, ಮೆಜೆಸ್ಟಿಕ್) ಬಿಬಿಎಂಪಿ ಮಲ್ಟಿಲೆವೆಲ್ ಪಾರ್ಕಿಂಗ್ ಸಂಕೀರ್ಣಗಳನ್ನು ಉತ್ತೇಜಿಸುತ್ತಿದೆ.ಸಂಚಾರ ಪೊಲೀಸರು ಕೇವಲ ಪಾರ್ಕಿಂಗ್ ಮಾತ್ರವಲ್ಲದೆ, ಫುಟ್ಪಾತ್ಗಳ ಮೇಲೆ ವಾಹನ ಚಲಾಯಿಸುವ ಮತ್ತು ವಾಹನ ನಿಲ್ಲಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ (Special Drive) ನಡೆಸುತ್ತಿದ್ದಾರೆ.ಸರ್ಕಾರವು ಬೆಂಗಳೂರಿನಲ್ಲಿ ವಸತಿ ಪ್ರದೇಶಗಳಲ್ಲಿ ಪಾರ್ಕಿಂಗ್ ಮಾಡಲು ಶುಲ್ಕ ವಿಧಿಸುವ ಮತ್ತು ಪಾರ್ಕಿಂಗ್ ಪರವಾನಗಿ ಕಡ್ಡಾಯಗೊಳಿಸುವ ಹೊಸ ನೀತಿಯನ್ನು ಜಾರಿಗೆ ತರಲು ಚಿಂತನೆ ನಡೆಸುತ್ತಿದೆ.ರಸ್ತೆ ಬದಿಯಲ್ಲಿ ವರ್ಷಗಟ್ಟಲೆ ಬಿದ್ದಿರುವ, ಮಾಲೀಕರಿಲ್ಲದ ಹಳೆಯ ವಾಹನಗಳನ್ನು ಪತ್ತೆ ಹಚ್ಚಿ ಅವುಗಳನ್ನು ಗುಜರಿಗೆ ಹಾಕುವ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗುತ್ತಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular