HomeLatest Newsಗುಪ್ತಾಂಗದ ಶಸ್ತ್ರಚಿಕಿತ್ಸೆ ವೇಳೆ ಬಿಲಿಯನೇರ್ ‘ಎಹುದ್ ಲಾನಿಯಾಡೊ’ ಸಾವು : ವೈದ್ಯರ ಲೈಸೆನ್ಸ್ ರದ್ದು!

ಗುಪ್ತಾಂಗದ ಶಸ್ತ್ರಚಿಕಿತ್ಸೆ ವೇಳೆ ಬಿಲಿಯನೇರ್ ‘ಎಹುದ್ ಲಾನಿಯಾಡೊ’ ಸಾವು : ವೈದ್ಯರ ಲೈಸೆನ್ಸ್ ರದ್ದು!

ಪ್ಯಾರಿಸ್’ ನ ಖಾಸಗಿ ಕ್ಲಿನಿಕ್ನಲ್ಲಿ ನಡೆದ ಗುಪ್ತಾಂಗದ ಗಾತ್ರ ಹೆಚ್ಚಿಸುವ ಶಸ್ತ್ರಚಿಕಿತ್ಸೆಯು (Penis Enlargement Surgery) ದುರಂತದಲ್ಲಿ ಅಂತ್ಯಗೊಂಡಿದೆ. ಬೆಲ್ಜಿಯಂ-ಇಸ್ರೇಲ್ ಮೂಲದ ಶತಕೋಟ್ಯಾಧಿಪತಿ ಮತ್ತು ‘ಓಮೆಗಾ ಡೈಮಂಡ್ಸ್’ ಸಂಸ್ಥೆಯ ಸ್ಥಾಪಕ ಎಹುದ್ ಆರ್ಯೆ ಲಾನಿಯಾಡೋ (65) ಅವರು ಚಿಕಿತ್ಸೆ ವೇಳೆ ಸಂಭವಿಸಿದ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಇಬ್ಬರು ಸರ್ಜನ್ಗಳ ಮೇಲೆ ಕಠಿಣ ಕ್ರಮ ಜರುಗಿಸಲಾಗಿದೆ. ಮಾರ್ಚ್ನಲ್ಲಿ ಪ್ಯಾರಿಸ್ನ ಕ್ಲಿನಿಕ್ನಲ್ಲಿ ಲಾನಿಯಾಡೋ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆಯ ಭಾಗವಾಗಿ ಚುಚ್ಚುಮದ್ದು (Injection) ನೀಡುತ್ತಿದ್ದಾಗ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿತು. ತನಿಖೆಯ ವೇಳೆ ವೈದ್ಯರು ತುರ್ತು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂಬುದು ಸಾಬೀತಾಗಿದೆ. ರಾತ್ರಿ 8 ಗಂಟೆಗೆ ಲಾನಿಯಾಡೋ ಹೊಟ್ಟೆ ನೋವಿನಿಂದ ಬಳಲುತ್ತಿದ್ದರೂ ಚಿಕಿತ್ಸೆ ಮುಂದುವರಿಸಲಾಗಿತ್ತು. ಎರಡು ಗಂಟೆಯ ನಂತರ ಅವರು ಸಾವನ್ನಪ್ಪಿದರು.

ಮುಖ್ಯ ಸರ್ಜನ್ ‘ಗೈ ಎಚ್’ಗೆ 15 ತಿಂಗಳ ಅಮಾನತು ಶಿಕ್ಷೆ ಮತ್ತು ಅವರ ಸಹಾಯಕಿಗೆ 12 ತಿಂಗಳ ಅಮಾನತು ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ, ಇಬ್ಬರಿಗೂ ಇನ್ನು ಮುಂದೆ ಪ್ಲಾಸ್ಟಿಕ್ ಸರ್ಜರಿ ಮಾಡದಂತೆ ಪ್ಯಾರಿಸ್ ನ್ಯಾಯಾಲಯವು ಸಂಪೂರ್ಣ ನಿಷೇಧ ಹೇರಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಹಾಯಕ ವೈದ್ಯರು ಫ್ರಾನ್ಸ್ನಲ್ಲಿ ವೈದ್ಯಕೀಯ ವೃತ್ತಿ ಮಾಡಲು ಅಗತ್ಯವಿರುವ ನೋಂದಣಿ ಹೊಂದಿಲ್ಲದಿರುವುದು ಮತ್ತು ಅವರ ವಿದೇಶಿ ಪದವಿಗೆ ಮಾನ್ಯತೆ ಇಲ್ಲದಿರುವುದು ಪತ್ತೆಯಾಗಿದೆ. ಲಾನಿಯಾಡೋ ಅವರು ವಜ್ರದ ಉದ್ಯಮದಲ್ಲಿ ದೈತ್ಯ ಎನಿಸಿಕೊಂಡಿದ್ದರು. ಅವರು ಜಗತ್ತಿನ ಅತ್ಯಂತ ದುಬಾರಿ ವಜ್ರಗಳಲ್ಲಿ ಒಂದಾದ ‘ಬ್ಲೂ ಮೂನ್ ಆಫ್ ಜೋಸೆಫಿನ್’ ಅನ್ನು ಮಾರಾಟ ಮಾಡಿ ಪ್ರಸಿದ್ಧರಾಗಿದ್ದರು. ನ್ಯಾಯಾಲಯವು ಮುಖ್ಯ ಸರ್ಜನ್ ಮತ್ತು ಸರಿಯಾದ ಪರವಾನಗಿ ಇಲ್ಲದ ಅವರ ಸಹಾಯಕಿಗೆ ಭಾರಿ ದಂಡ ವಿಧಿಸುವುದರ ಜೊತೆಗೆ, ವೈದ್ಯಕೀಯ ವೃತ್ತಿಜೀವನದಿಂದ ಅವರನ್ನು ದೂರವಿಟ್ಟಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular