ಸಾಮಾನ್ಯವಾಗಿ ಯಾರನ್ನಾದರೂ ಆರೋಗ್ಯ ಹೇಗಿದೆ? ಎಂದು ಕೇಳಿದರೆ, ಅವರು ತಮ್ಮ ಜಿಮ್ ಕಸರತ್ತು ಅಥವಾ ದೇಹದ ತೂಕದ ಬಗ್ಗೆ ಹೇಳುತ್ತಾರೆ. ಆದರೆ, ನಿಜವಾದ ಆರೋಗ್ಯ ಎಂದರೆ ಕೇವಲ ಸಿಕ್ಸ್ ಪ್ಯಾಕ್ ಹೊಂದುವುದಲ್ಲ; ಬದಲಿಗೆ ನೆಮ್ಮದಿಯ ಮನಸ್ಸನ್ನು ಹೊಂದಿರುವುದು. ದುರದೃಷ್ಟವಶಾತ್, ಇಂದು ನಾವು ಶರೀರಕ್ಕೆ ನೀಡುವ ಪ್ರಾಮುಖ್ಯತೆಯನ್ನು ಮಾನಸಿಕ ಆರೋಗ್ಯಕ್ಕೆ (Mental Health) ನೀಡುತ್ತಿಲ್ಲ.
ದೈಹಿಕ ಬಲಕ್ಕಿಂತ ಮನೋಬಲ ದೊಡ್ಡದು!
ನಾವು ದೈಹಿಕವಾಗಿ ಎಷ್ಟೇ ಬಲಿಷ್ಠರಾಗಿದ್ದರೂ, ಮನಸ್ಸಿನಲ್ಲಿ ನೆಮ್ಮದಿ ಇಲ್ಲದಿದ್ದರೆ ಇಡೀ ಜೀವನವೇ ಅಸ್ತವ್ಯಸ್ತವಾಗುತ್ತದೆ.
ದೈಹಿಕ ಆರೋಗ್ಯವು ನಮ್ಮನ್ನು ಓಡಾಡುವಂತೆ ಮಾಡಿದರೆ, ಮಾನಸಿಕ ಆರೋಗ್ಯವು ನಾವು ಹೇಗೆ ಬದುಕಬೇಕು ಮತ್ತು ಹೇಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸುತ್ತದೆ.
ಒಮ್ಮೆ ಮನಸ್ಸು ದಣಿದರೆ ಅಥವಾ ಹದಗೆಟ್ಟರೆ, ಅದು ನಮ್ಮ ದೇಹದ ಮೇಲೂ ಕೆಟ್ಟ ಪರಿಣಾಮ ಬೀರಲು ಶುರುವಾಗುತ್ತದೆ.
ಮೆದುಳಿಗೆ ಹಾನಿ ಮಾಡುವ ಆ ‘ಕೆಟ್ಟ’ ಅಭ್ಯಾಸಗಳು!
ನಮ್ಮ ದೈನಂದಿನ ಜೀವನದ ಕೆಲವು ಸಣ್ಣಪುಟ್ಟ ಅಭ್ಯಾಸಗಳು ಕಾಲಕ್ರಮೇಣ ನಮ್ಮ ಮೆದುಳಿನ ಕಾರ್ಯಕ್ಷಮತೆಯನ್ನು ಕುಂದಿಸುತ್ತವೆ. ನಾವು ದೇಹದ ಸೌಂದರ್ಯಕ್ಕೆ ಕೊಡುವ ಗಮನವನ್ನು ಮೆದುಳಿನ ಆರೋಗ್ಯಕ್ಕೆ ನೀಡದೆ ಹೋದರೆ, ಅದು ಗಂಭೀರ ಮಾನಸಿಕ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು
ಮಾನಸಿಕ ನೆಮ್ಮದಿಗೆ ಅಡ್ಡಿಪಡಿಸುವ ಅಭ್ಯಾಸಗಳು
1.ಅಸ್ವಸ್ಥಕರ ಆಹಾರ ಪದ್ಧತಿ (Unhealthy Diet)
ನಿಮ್ಮ ಮೆದುಳು ಸರಿಯಾಗಿ ಕಾರ್ಯನಿರ್ವಹಿಸಲು ಆಹಾರ ಪದ್ಧತಿ ಅತ್ಯಂತ ಪ್ರಮುಖ. ಸರ್ ಹೆಚ್.ಎನ್. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ, ಮನೋವೈದ್ಯರಾದ ಡಾ. ಆಶುತೋಷ್ ಷಾ ಅವರ ಪ್ರಕಾರ, ಕೆಟ್ಟ ಆಹಾರ ಪದ್ಧತಿಗಳು ಮೆದುಳಿನ ಆರೋಗ್ಯದ ಮೇಲೆ ನೇರವಾದ ಮತ್ತು ಗಮನಾರ್ಹ ಪರಿಣಾಮ ಬೀರುತ್ತವೆ.
ನಮ್ಮ ಮೆದುಳು ಪ್ರತಿದಿನ ನಾವು ತೆಗೆದುಕೊಳ್ಳುವ ಒಟ್ಟು ಶಕ್ತಿಯ ಸುಮಾರು 20% ಅನ್ನು ಬಳಸುತ್ತದೆ. ಓದುವುದು, ಕಲಿಯುವುದು ಮುಂತಾದ ಮಾನಸಿಕ ಚಟುವಟಿಕೆಗಳಲ್ಲಿ ಈ ಬಳಕೆ ಇನ್ನಷ್ಟು ಹೆಚ್ಚುತ್ತದೆ. ಆಮ್ಲಜನಕ ಮತ್ತು ಗ್ಲೂಕೋಸ್ ರೂಪದಲ್ಲಿ ಮೆದುಳು ಅಧಿಕ ಶಕ್ತಿಯನ್ನು ಬಳಸುವುದರಿಂದ, ಹೃದಯರಕ್ತನಾಳದ ಆರೋಗ್ಯವನ್ನು ಕಾಪಾಡುವ ಆರೋಗ್ಯಕರ ಆಹಾರ ಮೆದುಳಿಗೆ ತುಂಬಾ ಸಹಕಾರಿ.
ಪಾಶ್ಚಿಮಾತ್ಯ ಆಹಾರ ಪದ್ಧತಿ (Western Diet) ಯನ್ನು ಅನುಸರಿಸುವುದರಿಂದ ಆಹಾರ ಉರಿಯೂತದ ಸೂಚ್ಯಂಕ (Dietary Inflammatory Index) ಜಾಸ್ತಿಯಾಗಬಹುದು, ಇದು ದೀರ್ಘಾವಧಿಯಲ್ಲಿ ಮೆದುಳಿನ ಆರೋಗ್ಯಕ್ಕೆ ಹಾನಿಕಾರಕ.ಆದಕ್ಕಾಗಿ ಮೆದುಳಿನ ಆರೋಗ್ಯಕ್ಕೆ ಅತ್ಯುತ್ತಮವಾದ ‘ಮೆಡಿಟರೇನಿಯನ್ ಡಯಟ್’ ಅನ್ನು ಅನುಸರಿಸಲು ತಜ್ಞರು ಸಲಹೆ ನೀಡುತ್ತಾರೆ.
2.ನಿದ್ರೆಯ ಕೊರತೆ
ನೀವು ಎಷ್ಟು ಹೊತ್ತು ಮತ್ತು ಯಾವ ಗುಣಮಟ್ಟದ ನಿದ್ರೆ ಮಾಡುತ್ತೀರಿ ಎಂಬುದು ನಿಮ್ಮ ಮೆದುಳಿನ ಆರೋಗ್ಯವನ್ನು ದೊಡ್ಡ ಮಟ್ಟದಲ್ಲಿ ನಿರ್ಧರಿಸುತ್ತದೆ. ನಿದ್ರೆಯ ಸಮಯದಲ್ಲಿ ಹಗಲಿನಲ್ಲಿ ಜಮೆಯಾಗಿರುವ ಚಯಾಪಚಯ ತ್ಯಾಜ್ಯಗಳನ್ನು ತೆಗೆದುಹಾಕುವ ಮಹತ್ವವಾದ ಪ್ರಕ್ರಿಯೆ ನಡೆಯುತ್ತದೆ.
ವಯಸ್ಕರಲ್ಲಿಗಂಟೆ ನಿದ್ರೆ ಸಾಮಾನ್ಯವಾಗಿ ಸೂರ್ಯಾಸ್ತದ ಮೂರು–ನಾಲ್ಕು ಗಂಟೆಗಳ ನಂತರ ಆರಂಭವಾಗಿ, ಏಳು–ಎಂಟು ಗಂಟೆಗಳವರೆಗೆ ಇರಬೇಕು. ನಿದ್ರೆಯ ಆರಂಭದಲ್ಲೋ ಅವಧಿಯಲ್ಲೋ ಯಾವುದೇ ರಾಜಿ ಮಾಡಿದರೆ ಅದು ಮೆದುಳಿಗೂ ದೇಹಕ್ಕೂ ತಕ್ಷಣ ಹಾಗೂ ದೀರ್ಘಾವಧಿಯ ಹಾನಿ ಉಂಟುಮಾಡುತ್ತದೆ. ನಿದ್ರಾಹೀನತೆ ಹಲವು ಮಾನಸಿಕ ಅಸ್ವಸ್ಥತೆಗಳಿಗೆ, ಹಾಗು ಬುದ್ಧಿಮಾಂದ್ಯತೆಯಂತಹ ನರವೈಜ್ಞಾನಿಕ ಸಮಸ್ಯೆಗಳಿಗೆ ಪ್ರಮುಖ ಅಪಾಯಕಾರಿ ಅಂಶವಾಗಿದೆ.
3.ಸಾಮಾಜಿಕ ಮಾಧ್ಯಮ ವ್ಯಸನ
ಸಾಮಾಜಿಕ ಮಾಧ್ಯಮವನ್ನು ವಿನೋದಕ್ಕಾಗಿಯೂ ಕೆಲಸಕ್ಕಾಗಿಯೂ ಬಳಸುವುದು ಸಾಮಾನ್ಯ, ಆದರೆ ಅದರಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಮೆದುಳಿನಲ್ಲಿರುವ ಮನೋಭಾವ ನಿಯಂತ್ರಣದ ರಾಸಾಯನಿಕಗಳ ಮೇಲೆ ಪರಿಣಾಮ ಬೀಳಬಹುದು. ಇದು ವ್ಯಸನಕ್ಕೆ ಕಾರಣವಾಗಬಹುದು ಹಾಗೂ ನಿಮ್ಮ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕೆ ಹಾನಿ ಮಾಡಬಹುದು.ಸಾಮಾಜಿಕ ಮಾಧ್ಯಮವಿಲ್ಲದೆ ಇದ್ದಾಗ ಒಂಟಿತನ ಅಥವಾ ಅತಿಯಾಗಿ ಅವಲಂಬನೆಗೊಂಡಿರುವ ಭಾವನೆ ಕೂಡ ಕಾಣಿಸಬಹುದು.
4.ಜಡ ಜೀವನಶೈಲಿ
ದೀರ್ಘಕಾಲ ಕುಳಿತುಕೊಳ್ಳುವ ಜಡ ಜೀವನಶೈಲಿ, ಮಧುಮೇಹ, ಇಷ್ಕೆಮಿಕ್ ಹೃದಯರೋಗದಂತಹ ಅತೀವ ಗಂಭೀರ ಜೀವನಶೈಲಿಯ ಅಸ್ವಸ್ಥತೆಗಳ ಅಪಾಯವನ್ನು ಹೆಚ್ಚಿಸುತ್ತದೆ ಇವುಗಳೆಲ್ಲವೂ ಮೆದುಳಿನ ಆರೋಗ್ಯಕ್ಕೂ ಹಾನಿಕಾರಕ.ವಿಕಾಸಶಾಸ್ತ್ರೀಯ ದೃಷ್ಟಿಕೋನದಿಂದ ನೋಡಿದರೆ, ಸ್ನಾಯುಗಳ ಚಲನೆಯು ಎಂಡಾರ್ಫಿನ್ಗಳು ಮತ್ತು ಇತರ ಮೆದುಳಿನ ಬೆಳವಣಿಗೆ ಅಂಶಗಳ ಸ್ರಾವದ ಮೂಲಕ ಆರೋಗ್ಯಕರ ಮೆದುಳಿಗೆ ನೇರವಾಗಿ ಸಂಬಂಧಿಸಿದಿದೆ. ಪರೋಕ್ಷವಾಗಿ, ನಿಯಮಿತ ಚಲನೆ ಉತ್ತಮ ಹೃದಯರಕ್ತನಾಳದ ಆರೋಗ್ಯವನ್ನು ಕಾಪಾಡಿ, ಅದರ ಮೂಲಕ ಮೆದುಳಿನ ಆರೋಗ್ಯಕ್ಕೂ ಮಹತ್ವದ ಪ್ರಯೋಜನ ನೀಡುತ್ತದೆ.ಎಂದು ಡಾ. ಷಾ ವಿವರಿಸುತ್ತಾರೆ
5.ಒತ್ತಡದ ಜೀವನ
ನಿರಂತರ ಒತ್ತಡದಲ್ಲಿ ಬದುಕುತ್ತಾ ಅದನ್ನು ನಿರ್ವಹಿಸಲು ಮಾರ್ಗಗಳನ್ನು ಕಂಡುಹಿಡಿಯದಿರುವುದು ನಿಮ್ಮ ಮೆದುಳಿನ ಜೀವಕೋಶಗಳಿಗೆ ಹಾನಿ ಮಾಡುತ್ತದೆ. ಕಾಲಾನಂತರದಲ್ಲಿ, ಒತ್ತಡವು ನಿಮ್ಮ ಮೆದುಳಿನ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಕಷ್ಟಕರವಾಗಿಸುತ್ತದೆ, ನಿಮ್ಮ ಆಲೋಚನೆಗಳ ಮೇಲೆ ಪರಿಣಾಮ ಬೀರುತ್ತದೆ, ಆತಂಕವನ್ನು ಹೆಚ್ಚಿಸುತ್ತದೆ ಮತ್ತು ಖಿನ್ನತೆಗೂ ಕಾರಣವಾಗಬಹುದು. ಇದು ನಿಮ್ಮ ನಿದ್ರೆಯನ್ನು ಸಹ ಅಡ್ಡಿಪಡಿಸಬಹುದು.

