HomeKarnatakaNamma Metro: ಮೆಟ್ರೋದಲ್ಲಿ ಪ್ರಯಾಣಿಕರು ಮಾಡುವ ತಪ್ಪುಗಳ ಪಟ್ಟಿ

Namma Metro: ಮೆಟ್ರೋದಲ್ಲಿ ಪ್ರಯಾಣಿಕರು ಮಾಡುವ ತಪ್ಪುಗಳ ಪಟ್ಟಿ

Namma Metro ಬೆಂಗಳೂರು ನಗರದ ಜನರ ಜೀವನಾಡಿ. ಪ್ರತಿದಿನ ಸುಮಾರು 8 ಲಕ್ಷ ಜನರು ಮಟ್ರೋ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ನಗರದಲ್ಲಿ ಸದ್ಯ 3 ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳು ಸಂಚಾರವನ್ನು ನಡೆಸುತ್ತಿವೆ.

ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುವಾಗ ಜನರು ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಈ ಕುರಿತು ಪ್ರಯಾಣಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ಜನರು ತಪ್ಪುಗಳನ್ನು ಮಾಡುತ್ತಲೇ ಇದ್ದಾರೆ.

ಆದ್ದರಿಂದ ಈಗ ಬಿಎಂಆರ್‌ಸಿಎಲ್ ಪ್ರಯಾಣಿಕರು ನಿಯಮಗಳನ್ನು ಪಾಲಿಸಲು ವಿಶೇಷ ಜಾಗೃತಿ ಅಭಿಯಾನವನ್ನು ನಡೆಸುತ್ತಿದೆ. ಅಲ್ಲದೇ ಪ್ರಯಾಣಿಕರು ಮಾಡುವ ತಪ್ಪುಗಳು ಏನು? ಎಂದು ಪಟ್ಟಿಯನ್ನು ಕೊಟ್ಟಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಎಂಆರ್‌ಸಿಎಲ್ ಹೇಳುವುದೇನು?: ಪ್ರಯಾಣಿಕರಲ್ಲಿ ನಿಯಮಗಳನ್ನು ಪಾಲಿಸಲು ಬಿಎಂಆರ್‌ಸಿಎಲ್ ವಿಶೇಷ ಜಾಗೃತಿ ಅಭಿಯಾನವನ್ನು ನಡೆಸುತ್ತಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರ ಜವಾಬ್ದಾರಿಯುತ ವರ್ತನೆ ಹಾಗೂ ಪ್ರಯಾಣದಲ್ಲಿ ಪಾಲಿಸಬೇಕಾದ ನಿಯಮಗಳನ್ನು ಬಲಪಡಿಸುವ ಉದ್ದೇಶದಿಂದ ವಿಶೇಷ ಜಾಗೃತಿ ಅಭಿಯಾನವನ್ನು ಕೈಗೊಂಡಿದೆ.

ಮೆಟ್ರೋ ರೈಲುಗಳು ಸಾರ್ವಜನಿಕರ ಸಂಚಾರಕ್ಕಿದ್ದು, ಸುರಕ್ಷಿತ, ಆರಾಮದಾಯಕ ಮತ್ತು ಸುಖಕರ ಪ್ರಯಾಣಕ್ಕಾಗಿ ಎಲ್ಲಾ ಪ್ರಯಾಣಿಕರ ಸಹಭಾಗಿತ್ವ ಅಗತ್ಯವಿದೆ. ಮೆಟ್ರೋ ರೈಲುಗಳಲ್ಲಿ ಹೆಡ್ ಫೋನ್ ಇಲ್ಲದೆ ಸಂಗೀತ ಕೇಳುವುದು, ಆಹಾರ ಸೇವಿಸುವುದು ಅಥವಾ ತಂಬಾಕು ಸೇವನೆ ಮಾಡುವುದು ಸಹ ಪ್ರಯಾಣಿಕರಿಗೆ ತೊಂದರೆಯನ್ನು ಉಂಟುಮಾಡುತ್ತದೆ.

ಅದೇ ರೀತಿ, ಹಿರಿಯ ನಾಗರಿಕರಿಗೆ, ಗರ್ಭಿಣಿ ಮಹಿಳೆಯರಿಗೆ, ಅಂಗವಿಕಲರಿಗೆ ಮತ್ತು ಅಗತ್ಯವಿರುವವರಿಗೆ ಮೀಸಲು ಆಸನಗಳನ್ನು ಬಿಟ್ಟುಕೊಡುವುದು ಎಲ್ಲರ ಕರ್ತವ್ಯವಾಗಿದೆ. ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಬಿಎಂಆರ್‌ಸಿಎಲ್ ವಿಶೇಷ ಜಾಗೃತಿ ಅಭಿಯಾನವನ್ನು ನಡೆಸಲಿದೆ.

ಇಬ್ಬರು ಗೃಹ ರಕ್ಷಕರನ್ನೊಳಗೊಂಡ (ಹೋಮ್ ಗಾರ್ಡ್‌ಗಳು) ವಿಶೇಷ ತಂಡಗಳನ್ನು ಮೆಟ್ರೋ ರೈಲುಗಳಲ್ಲಿ ನಿಯೋಜಿಸಿ, ಪ್ರಯಾಣಿಕರಿಗೆ ತಿಳುವಳಿಕೆ ನೀಡುವ ಹಾಗೂ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗಿದೆ. ಒಂದು ವರ್ಷದ ಈ ಅಭಿಯಾನದ ವಿಶ್ಲೇಷಣೆಯಲ್ಲಿ ಕೆಳಕಂಡ ಅಂಶಗಳು ಕಂಡುಬಂದಿವೆ

  • 57,538 ಪ್ರಯಾಣಿಕರು ಜೋರಾಗಿ ಸಂಗೀತ ಕೇಳುವುದು
  • 37,038 ಪ್ರಯಾಣಿಕರು ಮೀಸಲು ಆಸನಗಳನ್ನು ಬಿಡದೆ ಬಳಸಿರುವುದು
  • 1,907 ಪ್ರಯಾಣಿಕರು ರೈಲಿನಲ್ಲಿ ಆಹಾರ ಸೇವಿಸುತ್ತಿರುವುದು
  • 1,677 ಪ್ರಯಾಣಿಕರು ತಂಬಾಕು ಉತ್ಪನ್ನಗಳ ಸೇವನೆ ಮಾಡುತ್ತಿರುವುದು

ಮೆಟ್ರೋ ರೈಲ್ವೇಸ್ (ಆಪರೇಷನ್ ಅಂಡ್ ಮೆಂಟೆನನ್ಸ್) ಕಾಯ್ದೆ, 2002ರ ಅಡಿಯಲ್ಲಿ, ಸಹ ಪ್ರಯಾಣಿಕರಿಗೆ ತೊಂದರೆ ಉಂಟುಮಾಡಿದ್ದಲಿ, ಕೆಲವು ಅಪರಾಧಗಳು ದಂಡಕ್ಕೆ ಒಳಪಡುತ್ತವೆ. ಎಂಬುದನ್ನು ಬಿಎಂಆರ್‌ಸಿಎಲ್ ಪ್ರಯಾಣಿಕರಿಗೆ ತಿಳಿಸಲು ಬಯಸುತ್ತದೆ. ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸುವಾಗ ನಿಯಮಗಳನ್ನು ಪಾಲಿಸುವಲ್ಲಿ ಎಲ್ಲ ನಮ್ಮ ಮೆಟ್ರೋ ಪ್ರಯಾಣಿಕರ ನಿರಂತರ ಸಹಕಾರವನ್ನು ಬಿಎಂಆರ್‌ಸಿಎಲ್‌ ಕೋರುತ್ತದೆ.

ರೈಲುಗಳೊಳಗೆ, ಸಂಗೀತ ಕೇಳುವಾಗ ಇಯರ್‌ಫೋನ್‌ಗಳನ್ನು ಬಳಸುವುದು, ಅಗತ್ಯವಿರುವವರಿಗೆ ಮೀಸಲು ಆಸನಗಳನ್ನು ನೀಡುವುದು, ಆಹಾರ ಸೇವನೆ ಮಾಡದಿರುವುದು ಮತ್ತು ತಂಬಾಕು ಸೇವನೆ ಮಾಡದಿರುವುದು, ಇತ್ಯಾದಿ ಸರಳ ಕ್ರಮಗಳು, ಹೆಚ್ಚು ಸುಖಕರ ಹಾಗೂ ಸುಗಮ ಪ್ರಯಾಣದ ವಾತಾವರಣ ನಿರ್ಮಿಸಲು ಮಹತ್ವದ ಪಾತ್ರ ವಹಿಸುತ್ತವೆ.

ನಮ್ಮ ಮೆಟ್ರೋದಲ್ಲಿ ಪ್ರತಿಯೊಂದು ಪ್ರಯಾಣವೂ ಎಲ್ಲರಿಗೂ ಸುರಕ್ಷಿತ, ಆರಾಮದಾಯಕ ಮತ್ತು ಆನಂದಕರವಾಗಿರಲು ಸಹ ಪ್ರಯಾಣಿಕರ ಸೌಜನ್ಯ, ಸಹನೆ ಮತ್ತು ಪರಸ್ಪರ ಗೌರವವನ್ನು ತೋರಿಸುವಂತೆ ಬಿಎಂಆರ್‌ಸಿಎಲ್ ಎಲ್ಲಾ ಪ್ರಯಾಣಿಕರಿಗೆ ಮನವಿ ಮಾಡುತ್ತದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular