HomeLatest NewsBREAKING : ಎದೆಗೆ ಗನ್ ಇಟ್ಟು ತಾವೇ ಶೂಟ್ ಮಾಡಿಕೊಂಡ ಉದ್ಯಮಿ ಸಿ.ಜೆ ರಾಯ್ :...

BREAKING : ಎದೆಗೆ ಗನ್ ಇಟ್ಟು ತಾವೇ ಶೂಟ್ ಮಾಡಿಕೊಂಡ ಉದ್ಯಮಿ ಸಿ.ಜೆ ರಾಯ್ : ಮರಣೋತ್ತರ ಪರೀಕ್ಷೆಯಲ್ಲಿ ದೃಢ !

ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ (Confident Group) ಮುಖ್ಯಸ್ಥ, ಉದ್ಯಮಿ ಡಾ. ಸಿ.ಜೆ ರಾಯ್ (CJ Roy) ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಬೆಚ್ಚಿಬೀಳಿಸುವ ಮಾಹಿತಿ ಹೊರಬಂದಿದೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅವರು ತಾವೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಅಧಿಕೃತವಾಗಿ ದೃಢಪಟ್ಟಿದೆ.

ವರದಿಯಲ್ಲೇನಿದೆ?
ಶೂಟಿಂಗ್ ವಿಧಾನ: ಸಿಜೆ ರಾಯ್ ಅವರು ತಮ್ಮ ಬಲಗೈಯಿಂದ ಎದೆಯ ಎಡಭಾಗಕ್ಕೆ ಗನ್ ಇಟ್ಟು ಟ್ರಿಗರ್ ಒತ್ತಿದ್ದಾರೆ. ಅತ್ಯಂತ ಸಮೀಪದಿಂದ (Point Blank Range) ಗುಂಡು ಹಾರಿಸಿಕೊಂಡಿದ್ದರಿಂದ ಎದೆಯ ಮೇಲ್ಭಾಗದ ಮಾಂಸಖಂಡಗಳು ಚದುರಿಲ್ಲ, ಬದಲಾಗಿ ಗುಂಡು ನೇರವಾಗಿ ದೇಹದೊಳಗೆ ಆಳವಾಗಿ ಇಳಿದಿದೆ.

ಪಾಕೆಟ್ ಗನ್ನಿಂದ ಹಾರಿದ ಬುಲೆಟ್ ಹೃದಯವನ್ನು ಸೀಳಿ, ಶ್ವಾಸಕೋಶ ಮತ್ತು ರಕ್ತನಾಳಗಳ ಮೂಲಕ ಹಾದುಹೋಗಿ ಕೊನೆಗೆ ಬೆನ್ನಿನ 11ನೇ ಪಕ್ಕೆಲುಬಿನ ಬಳಿ ಸಿಲುಕಿಕೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಧಿವಿಜ್ಞಾನ ಪರೀಕ್ಷೆ: ಮರಣೋತ್ತರ ಪರೀಕ್ಷೆಯ ವೇಳೆ ಬೆನ್ನಿನಲ್ಲಿ ಸಿಲುಕಿದ್ದ ಬುಲೆಟ್ನ್ನು ಹೊರತೆಗೆಯಲಾಗಿದ್ದು, ಹೆಚ್ಚಿನ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ.

ಪರವಾನಗಿ ಹೊಂದಿದ್ದ ಪಿಸ್ತೂಲ್: ಆತ್ಮಹತ್ಯೆಗೆ ಬಳಸಲಾದ NP bore 0.25 ಪಿಸ್ತೂಲ್ ಸಿಜೆ ರಾಯ್ ಅವರ ಹೆಸರಿನಲ್ಲೇ ಪರವಾನಗಿ ಪಡೆದಿದ್ದ ಆಯುಧ ಎಂಬುದು ಖಚಿತವಾಗಿದೆ. ಪೊಲೀಸರು ಈ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದಾರೆ.

ಮೊಬೈಲ್ನಲ್ಲಿ ಅಡಗಿದೆಯೇ ಡೆತ್ ಸೀಕ್ರೆಟ್? ಸಿಜೆ ರಾಯ್ ಅವರ ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನೂ ನಿಗೂಢವಾಗಿದೆ. ಅವರ ಮೊಬೈಲ್ ಫೋನ್ನಲ್ಲಿರುವ ದತ್ತಾಂಶಗಳನ್ನು (Data) ಮರುಪಡೆಯಲು ಸಿಐಡಿ ಸೈಬರ್ ಸೆಲ್ಗೆ ಕಳುಹಿಸಲಾಗಿದೆ. ಯಾವುದೇ ಸಾಲಬಾಧೆ ಅಥವಾ ಶತ್ರುಗಳಿಲ್ಲದಿದ್ದರೂ, ಐಟಿ (Income Tax) ಅಧಿಕಾರಿಗಳ ಒತ್ತಡವಿತ್ತೇ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಂತ್ಯಕ್ರಿಯೆ: ಸಿಜೆ ರಾಯ್ ಅವರ ಇಚ್ಛೆಯಂತೆ ಬನ್ನೇರುಘಟ್ಟದ ಕಾಸಾಗ್ರ್ಯಾಂಡ್ (Casagrand) ನಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಸಜ್ಜಾಗಿದ್ದಾರೆ. ನಟ ಮೋಹನ್ ಲಾಲ್ ಸೇರಿದಂತೆ ಹಲವು ಗಣ್ಯರು ರಾಯ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಡಾ. ಸಿ.ಜೆ. ರಾಯ್ ಯಾರು.?

ಡಾ. ಸಿ.ಜೆ. ರಾಯ್ (CJ Roy) ಅವರು ಕೇವಲ ಒಬ್ಬ ಉದ್ಯಮಿಯಷ್ಟೇ ಆಗಿರಲಿಲ್ಲ, ಶೂನ್ಯದಿಂದ ಕೋಟ್ಯಂತರ ರೂಪಾಯಿಯ ಸಾಮ್ರಾಜ್ಯ ಕಟ್ಟಿದ ಒಬ್ಬ ಅದ್ಭುತ ಸಾಧಕರಾಗಿದ್ದರು. ಬಹಳ ಸಾಮಾನ್ಯ ಕುಟುಂಬದಿಂದ ಬಂದ ಇವರು, ವೃತ್ತಿಜೀವನ ಆರಂಭಿಸಿದ್ದು ಒಬ್ಬ ಸಣ್ಣ ಉದ್ಯಮಿಯಾಗಿ. ನಂತರ ದುಬೈಗೆ ತೆರಳಿ ಅಲ್ಲಿ ಉದ್ಯಮದಲ್ಲಿ ಯಶಸ್ಸು ಕಂಡರು. ಬಳಿಕ ಬೆಂಗಳೂರನ್ನು ತಮ್ಮ ಕೇಂದ್ರಸ್ಥಾನವನ್ನಾಗಿ ಮಾಡಿಕೊಂಡು ‘ಕಾನ್ಫಿಡೆಂಟ್ ಗ್ರೂಪ್’ ಆರಂಭಿಸಿದರು. ಇಂದು ಅವರ ಸಂಸ್ಥೆಯು ಸುಮಾರು 8,500 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಸಾಮ್ರಾಜ್ಯವಾಗಿ ಬೆಳೆದಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular