HomeLatest Newsದುಬೈ ಟು ಇಂಡಿಯಾ ಗೋಲ್ಡ್: ಸುಂಕ ಕಟ್ಟಿದ ಮೇಲೂ ₹2.5 ಲಕ್ಷ ಲಾಭ ಸಾಧ್ಯವೇ? ಇಲ್ಲಿದೆ...

ದುಬೈ ಟು ಇಂಡಿಯಾ ಗೋಲ್ಡ್: ಸುಂಕ ಕಟ್ಟಿದ ಮೇಲೂ ₹2.5 ಲಕ್ಷ ಲಾಭ ಸಾಧ್ಯವೇ? ಇಲ್ಲಿದೆ ಅಸಲಿ ಲೆಕ್ಕಾಚಾರ

ಭಾರತೀಯರಿಗೆ ದುಬೈ ಎಂದರೆ ಮೊದಲು ನೆನಪಾಗುವುದೇ ಅಪರಂಜಿ ಚಿನ್ನ ಅಲ್ಲಿನ ಚಿನ್ನದ ಅಪ್ರತಿಮ ಶುದ್ಧತೆ ಮತ್ತು ಕಡಿಮೆ ಬೆಲೆಗೆ ಮನಸೋಲದವರೇ ಇಲ್ಲ. ಇದೇ ಕಾರಣಕ್ಕೆ ದುಬೈಗೆ ಪ್ರವಾಸ ಹೋದವರು ಒಂದಷ್ಟು ಚಿನ್ನ ಖರೀದಿಸದೆ ವಾಪಸ್ ಬರುವುದಿಲ್ಲ. ಆದರೆ ಕೈಯಲ್ಲಿ ಚಿನ್ನದ ಬಿಲ್ ಇದೆ ಎಂದಾಕ್ಷಣ ಅದನ್ನು ಭಾರತಕ್ಕೆ ಸುಲಭವಾಗಿ ತರಬಹುದು ಎಂದುಕೊಂಡರೆ ಅದು ತಪ್ಪು. ಭಾರತೀಯ ಕಸ್ಟಮ್ಸ್ ಕಾಯ್ದೆಯ (Indian Customs Act) ನಿಯಮಗಳು ಅತ್ಯಂತ ಕಟ್ಟುನಿಟ್ಟಾಗಿದ್ದು ನೀವು ತರುವ ಪ್ರತಿಯೊಂದು ಗ್ರಾಂ ಚಿನ್ನಕ್ಕೂ ಅಧಿಕೃತ ಲೆಕ್ಕ ಕೊಡಬೇಕಾಗುತ್ತದೆ.

ದೇಶದಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದರೂ ಹಳದಿ ಲೋಹದ ಮೇಲಿನ ನಮ್ಮವರ ವ್ಯಾಮೋಹ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಈ ಹೊತ್ತಿನಲ್ಲಿ ದುಬೈನಿಂದ ಚಿನ್ನ ತಂದರೆ ಲಕ್ಷಾಂತರ ರೂಪಾಯಿ ಉಳಿಸಬಹುದು ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಆದರೆ ಈ ಮಾತಿನಲ್ಲಿ ಅಡಗಿರುವ ಅಸಲಿ ಸತ್ಯವೇನು? ಕಸ್ಟಮ್ಸ್ ನಿಯಮಗಳ ಬಗ್ಗೆ ಸರಿಯಾದ ಜ್ಞಾನವಿಲ್ಲದೆ ಚಿನ್ನ ತರಲು ಮುಂದಾದರೆ ನಿಮ್ಮ ಲಾಭವೆಲ್ಲವೂ ದಂಡದ ರೂಪದಲ್ಲಿ ಕರಗಿ ಹೋಗಬಹುದು ಅಥವಾ ನಿಮ್ಮ ಚಿನ್ನ ವಿಮಾನ ನಿಲ್ದಾಣದಲ್ಲಿ ಜಪ್ತಿ (Confiscation) ಆಗಬಹುದು

ಚಿನ್ನ ಮತ್ತು ಬೆಳ್ಳಿ ಆದರೆ ಇವೆರಡರಲ್ಲಿ ಯಾವುದು ಉತ್ತಮ ಎಂಬ ಗೊಂದಲಕ್ಕೆ ಈಗ ಹೊಸದೊಂದು ‘ಸ್ಮಾರ್ಟ್’ ಪರಿಹಾರ ದೊರಕಿದೆ. ಅದೇ ಚಿನ್ನ ಮತ್ತು ಬೆಳ್ಳಿ ಫಂಡ್ ಆಫ್ ಫಂಡ್ಸ್ (FoF). ಕಡಿಮೆ ಅಪಾಯದೊಂದಿಗೆ ಮೌಲ್ಯವೃದ್ಧಿ ನಿರೀಕ್ಷಿಸುವ ಹೂಡಿಕೆದಾರರಿಗೆ ಈ ಆಯ್ಕೆಯು ಗಮನ ಸೆಳೆಯುತ್ತಿದೆಹಾಗಾದರೆ, ಕಾನೂನುಬದ್ಧವಾಗಿ ಒಂದು ಕೆಜಿ ಚಿನ್ನವನ್ನು ತಂದರೆ ನಿಜವಾಗಿಯೂ ಎಷ್ಟು ಉಳಿತಾಯವಾಗುತ್ತದೆ? ಏರ್‌ಪೋರ್ಟ್‌ನಲ್ಲಿ ನೀವು ಪಾಲಿಸಲೇಬೇಕಾದ ಕಟ್ಟುನಿಟ್ಟಿನ ನಿಯಮಗಳೇನು? ಈ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಏನಿದು ಚಿನ್ನ ಮತ್ತು ಬೆಳ್ಳಿ FoF?

ನೀವು ಭೌತಿಕವಾಗಿ ಚಿನ್ನದ ಬಿಸ್ಕೆಟ್ ಅಥವಾ ಬೆಳ್ಳಿ ಕಡ್ಡಿಗಳನ್ನು ಖರೀದಿಸಿ ಮನೆಯಲ್ಲಿ ಇಟ್ಟುಕೊಳ್ಳುವ ಬದಲು ಮ್ಯೂಚುವಲ್ ಫಂಡ್ ಮೂಲಕ ಇವುಗಳ ಮೇಲೆ ಹೂಡಿಕೆ ಮಾಡುವುದು. ಈ ಫಂಡ್‌ಗಳು ನಿಮ್ಮ ಹಣವನ್ನು 50:50 ಅನುಪಾತದಲ್ಲಿ ಚಿನ್ನ ಮತ್ತು ಬೆಳ್ಳಿಯ ETFಗಳಲ್ಲಿ ಹಂಚಿಕೆ ಮಾಡುತ್ತವೆ. ಅಂದರೆ ಒಂದೇ ಹೂಡಿಕೆಯಲ್ಲಿ ನಿಮಗೆ ಎರಡೂ ಲೋಹಗಳ ಲಾಭ ಸಿಗುತ್ತದೆ

1.ಬೆಲೆಗಳ ನಡುವೆ ಅಜಗಜಾಂತರ ವ್ಯತ್ಯಾಸ
ದುಬೈನಲ್ಲಿ ತೆರಿಗೆ ಮತ್ತು ಮೇಕಿಂಗ್ ಚಾರ್ಜ್‌ಗಳು ಕಡಿಮೆ ಇರುವ ಕಾರಣ ಚಿನ್ನ ಅಗ್ಗವಾಗಿದೆ.

    ಭಾರತದಲ್ಲಿ: 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಸುಮಾರು ₹1,62,710.

    ದುಬೈನಲ್ಲಿ: ಅಷ್ಟೇ ಪ್ರಮಾಣದ ಚಿನ್ನದ ಬೆಲೆ ಸುಮಾರು ₹1,50,000. ಅಂದರೆ ಪ್ರತಿ 10 ಗ್ರಾಂಗೆ ನೀವು ನೇರವಾಗಿ ₹12,710 ಉಳಿಸಬಹುದು.

    2.ಒಂದು ಕೆಜಿ ಚಿನ್ನದ ಮೇಲೆ ಉಳಿತಾಯ ಎಷ್ಟು? (ಲೆಕ್ಕಾಚಾರ ನೋಡಿ)

      ನೀವು ದುಬೈನಿಂದ 1 ಕೆಜಿ ಚಿನ್ನ ತರಬೇಕೆಂದು ಅಂದುಕೊಂಡರೆ, ಅದರ ಬೆಲೆ ಸುಮಾರು ₹1,50,00,000 (1.50 ಕೋಟಿ) ಆಗುತ್ತದೆ. ಭಾರತಕ್ಕೆ ತರುವಾಗ ಸುಮಾರು 10% ಕಸ್ಟಮ್ಸ್ ಡ್ಯೂಟಿ ಪಾವತಿಸಿದರೆ ಅದು ₹1.65 ಕೋಟಿ ಆಗುತ್ತದೆ.

      ಅದೇ ನೀವು ಭಾರತದಲ್ಲಿ 1 ಕೆಜಿ ಚಿನ್ನ ಖರೀದಿಸಿದರೆ, GST ಸೇರಿ ಸುಮಾರು ₹1.67 ಕೋಟಿಗಿಂತ ಹೆಚ್ಚು ಖರ್ಚಾಗುತ್ತದೆ. ಅಂತಿಮವಾಗಿ, ಎಲ್ಲ ತೆರಿಗೆ ಪಾವತಿಸಿದ ನಂತರವೂ ದುಬೈನಿಂದ ಚಿನ್ನ ತಂದರೆ ನಿಮಗೆ ಸುಮಾರು ₹2,50,000 (ಎರಡೂವರೆ ಲಕ್ಷ) ಉಳಿತಾಯವಾಗುವ ಸಾಧ್ಯತೆ ಇದೆ!

      3.ಯಾರಿಗೆ ಈ ಆಫರ್ ಅನ್ವಯ? (ಕಸ್ಟಮ್ಸ್ ರೂಲ್ಸ್)
      ಯಾರು ಬೇಕಾದರೂ ಹೋಗಿ ಒಂದು ಕೆಜಿ ಚಿನ್ನ ತರಲು ಸಾಧ್ಯವಿಲ್ಲ. ಇದಕ್ಕೆ ಕೆಲವು ಕಠಿಣ ನಿಯಮಗಳಿವೆ:

      ಕನಿಷ್ಠ 6 ತಿಂಗಳು: ವಿದೇಶದಲ್ಲಿ ಕನಿಷ್ಠ ಆರು ತಿಂಗಳು ವಾಸವಿದ್ದ ಭಾರತೀಯರು ಮಾತ್ರ ಈ ರಿಯಾಯಿತಿ ದರದಲ್ಲಿ ಚಿನ್ನ ತರಲು ಅರ್ಹರು.

      ರೆಡ್ ಚಾನೆಲ್: ಏರ್‌ಪೋರ್ಟ್‌ನಲ್ಲಿ ನೀವು ಕಡ್ಡಾಯವಾಗಿ ರೆಡ್ ಚಾನೆಲ್ ಮೂಲಕ ಹೋಗಿ ನಿಮ್ಮ ಬಳಿ ಇರುವ ಚಿನ್ನವನ್ನು ಘೋಷಿಸಬೇಕು. ಬಚ್ಚಿಟ್ಟು ತರಲು ಪ್ರಯತ್ನಿಸಿದರೆ ದಂಡದ ಜೊತೆ ಜೈಲು ಶಿಕ್ಷೆಯೂ ಆಗಬಹುದು!

      4.ಫ್ರೀಯಾಗಿ ಎಷ್ಟು ತರಬಹುದು? (Duty-Free Limit)ಆಭರಣಗಳ ರೂಪದಲ್ಲಿ ಚಿನ್ನ ತರುವವರಿಗೆ ಸಣ್ಣ ರಿಯಾಯಿತಿ ಇದೆ:

      ಮಹಿಳೆಯರಿಗೆ: 40 ಗ್ರಾಂ ವರೆಗೆ (ಗರಿಷ್ಠ ₹1 ಲಕ್ಷ ಮೌಲ್ಯ).

      ಪುರುಷರಿಗೆ: 20 ಗ್ರಾಂ ವರೆಗೆ (ಗರಿಷ್ಠ ₹50,000 ಮೌಲ್ಯ). ಈ ಸೌಲಭ್ಯ ಕೇವಲ ಆಭರಣಗಳಿಗೆ ಮಾತ್ರ, ಚಿನ್ನದ ಬಿಸ್ಕೆಟ್ ಅಥವಾ ಕಾಯಿನ್‌ಗಳಿಗಲ್ಲ.

      5.ವ್ಯಾಟ್ ರಿಫಂಡ್’ ಎಂಬ ಬೋನಸ್ ಲಾಭ
      ದುಬೈನಲ್ಲಿ ನೀವು ಖರೀದಿಸುವಾಗ ನೀಡುವ 5% ವ್ಯಾಟ್ (VAT) ಹಣವನ್ನು ವಿಮಾನ ನಿಲ್ದಾಣದಲ್ಲಿ ವಾಪಸ್ ಪಡೆಯಬಹುದು. ಪ್ರವಾಸಿಗರಿಗೆ ಇದೊಂದು ದೊಡ್ಡ ಲಾಭ. ಚಿನ್ನ ಖರೀದಿಸುವಾಗ ‘ಟ್ಯಾಕ್ಸ್ ಫ್ರೀ’ ಟ್ಯಾಗ್ ಕೇಳಿ ಪಡೆಯಲು ಮರೆಯಬೇಡಿ.

      For Latest News Updates, Join Our Whatsapp Community🚩
      Abinandan
      Abinandan
      ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
      RELATED ARTICLES

      Most Popular