ಬೆಂಗಳೂರು: ಬೆಂಗಳೂರಿನ ಮಾರತ್ತಹಳ್ಳಿಯ ಯಮಲೂರಿನಲ್ಲಿ ಉದ್ಯಮಿ ಮನೆಯಲ್ಲಿ 18 ಕೋಟಿ ರೂಪಾಯಿ ಮೌಲ್ಯದ ಚಿನ್ನ, ವಜ್ರ, ಬೆಳ್ಳಿ, ನಗದು ದೋಚಿ ಕೆಲಸಗಾರರು ಪರಾರಿಯಾಗಿದ್ದಾರೆ.
ಬಿಲ್ಡರ್ ಶಿವಕುಮಾರ್ ಎಂಬುವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ದಿನೇಶ್, ಕಮಲಾ ದಂಪತಿ ಕಳ್ಳತನ ಮಾಡಿದ್ದಾರೆ/ 11.5 ಕೆಜಿ ಚಿನ್ನ, ವಜ್ರ, 5 ಕೆಜಿ ಬೆಳ್ಳಿ, 11.5 ಲಕ್ಷ ನಗದು ಕಳವು ಮಾಡಲಾಗಿದೆ. 20 ದಿನದ ಹಿಂದೆಯಷ್ಟೇ ದಂಪತಿ ಕೆಲಸಕ್ಕೆ ಸೇರಿಕೊಂಡಿದ್ದರು.
ಜನವರಿ 25ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳವು ಮಾಡಿದ್ದಾರೆ. ನೆಲಮಹಡಿ, ಮೊದಲ ಮಹಡಿಯ ಬೆಡ್ರೂಮ್ ಲಾಕ್ ಮುರಿದು ಕೃತ್ಯ ಎಸಗಿದ್ದಾರೆ. 18 ಕೋಟಿ ರೂ. ಮೌಲ್ಯದ 11.5 ಕೆಜಿ ಚಿನ್ನ, ವಜ್ರ, ಐದು ಕೆಜಿ ಬೆಳ್ಳಿ, 11.5 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದಾರೆ. ಹೊರಗೆ ಹೋಗಿದ್ದ ಮನೆಯವರು ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಮಾರತ್ತಹಳ್ಳಿ ಠಾಣೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೃತ್ಯವೆಸಗಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

