HomeLatest NewsBREAKING : ಉಡುಪಿಯ 'ಮಲ್ಪೆ ಬೀಚ್' ನಲ್ಲಿ  ‘ಟೂರಿಸ್ಟ್ ಬೋಟ್’ ಮುಳುಗಿ ಇಬ್ಬರು ಪ್ರವಾಸಿಗರು ಸಾವು...

BREAKING : ಉಡುಪಿಯ ‘ಮಲ್ಪೆ ಬೀಚ್’ ನಲ್ಲಿ  ‘ಟೂರಿಸ್ಟ್ ಬೋಟ್’ ಮುಳುಗಿ ಇಬ್ಬರು ಪ್ರವಾಸಿಗರು ಸಾವು : ಹಲವರು ಅಸ್ವಸ್ಥ.!

ಉಡುಪಿ : ಉಡುಪಿಯಲ್ಲಿ ಘೋರ ದುರಂತ ಸಂಭವಿಸಿದ್ದು, ಅರಬ್ಬಿ ಸಮುದ್ರದಲ್ಲಿ ‘ಟೂರಿಸ್ಟ್ ಬೋಟ್’ ಮುಳುಗಿ ಇಬ್ಬರು ಪ್ರವಾಸಿಗರು ಮೃತಪಟ್ಟಿದ್ದಾರೆ .ಬೋಟ್ ನಲ್ಲಿದ್ದ ಶಂಕರಪ್ಪ (22) ಸಿಂಧು (23) ಮೃತಪಟ್ಟಿದ್ದಾರೆ. ಧರ್ಮರಾ‍ಜ್ ಹಾಗೂ ದಿಶಾ ಎಂಬುವವರ ಸ್ಥಿತಿ ಗಂಭೀರವಾಗಿದೆ.

ಉಡುಪಿ ತಾಲೂಕಿನ ಕೋಡಿಬೆಂಗ್ರೆ ಸಮೀಪ ಈ ಘಟನೆ ನಡೆದಿದೆ. ಅರಬ್ಬಿ ಸಮುದ್ರದಲ್ಲಿ ಬೋಟ್ ಪಲ್ಟಿಯಾಗಿದೆ. ಪರಿಣಾಮ ಇಬ್ಬರು ಮೃತಪಟ್ಟಿದ್ದು, ಹಲವರು ಅಸ್ವಸ್ಥಗೊಂಡಿದ್ದಾರೆ.

ಟೂರಿಸ್ಟ್ ಬೋಟ್ ನಲ್ಲಿ 15 ಮಂದಿ ಪ್ರವಾಸಿಗರು ಇದ್ದರು ಎನ್ನಲಾಗಿದೆ. ಸಮುದ್ರದಲ್ಲಿ ಅಲೆಯ ಹೊಡೆತಕ್ಕೆ ಏಕಾಏಕಿ ಬೋಟ್ ಮಗುಚಿದೆ. ಪರಿಣಾಮ ಹಲವು ಸಮುದ್ರಕ್ಕೆ ಬಿದ್ದಿದ್ದಾರೆ. ಲೈಫ್ ಜಾಕೆಟ್ ಧರಿಸದೇ ಇದ್ದಿದ್ದರಿಂದ ಹಲವರು ನೀರಿನಲ್ಲಿ ಮುಳುಗಿದ್ದಾರೆ. ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವರು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ. ಪ್ರವಾಸಿಗರು ಮೈಸೂರಿನ ಸರಸ್ವತಿ ಪುರಂನವರು ಎಂದು ತಿಳಿದು ಬಂದಿದೆ. ಅವರು ಕಂಪನಿಯೊಂದರಲ್ಲಿ ಕಾಲ್ ಸೆಂಟರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. 28 ಮಂದಿ 2 ತಂಡಗಳಾಗಿ ತಲಾ 14 ಮಂದಿ ಬೋಟ್ ನಲ್ಲಿ ವಿಹಾರಕ್ಕೆ ತೆರಳಿದ್ದರು. ಬೋಟ್ ನಲ್ಲಿದ್ದ ಯಾರೂ ಕೂಡ ಲೈಫ್ ಜಾಕೆಟ್ ಧರಿಸಿರಲಿಲ್ಲ ಎಂದು ತಿಳಿದು ಬಂದಿದೆ. ಅಸ್ವಸ್ಥಗೊಂಡವರನ್ನು ಕೋಟಾದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular