ಅನಿಲ್ ರಾವಿಪುಡಿ ಟಾಲಿವುಡ್ನ ಸೂಪರ್ ಹಿಟ್ ಚಿತ್ರಗಳ ಡೈರೆಕ್ಟರ್. ಆಕ್ಷನ್ ಹಾಸ್ಯ ಸೇರಿದ ಚಿತ್ರಗಳನ್ನು ಡೈರೆಕ್ಷನ್ ಮಾಡುವಲ್ಲಿ ಅನಿಲ್ ಯಶಸ್ವಿಯಾಗಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ನಟನೆಯ, ಅವರ ನಿರ್ದೇಶನದ ‘ಮನ ಶಂಕರವರಪ್ರಸಾದ್ಗಾರು’ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದೆ.
‘ಮನ ಶಂಕರವರಪ್ರಸಾದ್ಗಾರು’ ಸಿನಿಮಾ ಸೂಪರ್ ಹಿಟ್ ಆಗಿದೆ. ಚಿರಂಜೀವಿ ಹಾಗೂ ನಯನತಾರ ನಟಿಸಿರುವ ಫ್ಯಾಮಿಲಿ ಕಾಮಿಡಿ ಎಂಟರ್ಟೈನರ್ ಸಿನಿಮಾ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿತ್ತು.
ಈ ಚಿತ್ರ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ನಟ ಚಿರಂಜೀವಿ ಫುಲ್ ಖುಷಿಯಲ್ಲಿದ್ದಾರೆ. ಆದ್ದರಿಂದ ಅವರು ಈ ಸಂಭ್ರಮದಲ್ಲೇ ನಿರ್ದೇಶಕ ಅನಿಲ್ ರಾವಿಪುಡಿಗೆ ದುಬಾರಿ ಉಡುಗೊರೆ ಕೊಟ್ಟಿದ್ದಾರೆ. ಇದರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದುಬಾರಿ ಕಾರಿ ಗಿಫ್ಟ್: ಚಿರಂಜೀವಿ ನಿರ್ದೇಶಕ ಅನಿಲ್ ರಾವಿಪುಡಿಗೆ ರೇಂಜ್ ರೋವರ್ ಕಾರು ಗಿಫ್ಟ್ ನೀಡಿದ್ದಾರೆ. ಇದೊಂದು ಅಚ್ಚರಿಯ ಗಿಫ್ಟ್ ಆಗಿದೆ. ಇಂತಹ ಉಡುಗೊರೆಯನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ನಿರ್ದೇಶಕರು ಹೇಳಿದ್ದಾರೆ.
ಚಿರಂಜೀವಿ ಅತ್ತ ರಾಜಕೀಯ, ಇತ್ತ ಸಿನಿಮಾ ಎಂದು ಬ್ಯುಸಿ ಇದ್ದರು. ಒಂದು ಸೂಪರ್ ಹಿಟ್ ಸಿನಿಮಾ ಕೊಡಬೇಕು ಎಂದು ಕಾಯುತ್ತಿದ್ದರು. ಅನಿಲ್ ರಾವಿಪುಡಿ ನಿರ್ದೇಶನದ ‘ಮನ ಶಂಕರವರಪ್ರಸಾದ್ಗಾರು’ ಚಿತ್ರ ಈ ಕೊರತೆಯನ್ನು ನೀಗಿಸಿದೆ.
‘ಮನ ಶಂಕರವರಪ್ರಸಾದ್ಗಾರು’ ಚಿತ್ರದ ನಿರ್ಮಾಪಕರು ಸಾಹು ಗರಪತಿ ಜೊತೆಗೆ ಚಿರಂಜೀವಿ ಪುತ್ರಿ ಸುಶ್ಮಿತಾ ಕೊನಿಡೇಲ ಸಹ ನಿರ್ಮಾಪಕಿ. ಚಿತ್ರ ಸೂಪರ್ ಹಿಟ್ ಆದ ಕಾರಣ ಭರ್ಜರಿ ಲಾಭ ಬಂದಿದೆ. ಆದ್ದರಿಂದ ನಿರ್ದೇಶಕರಿಗೆ ದುಬಾರಿ ಗಿಫ್ಟ್ ನೀಡಲಾಗಿದೆ.
ಹೈದರಾಬಾದ್ನಲ್ಲಿ ಭಾನುವಾರ ಚಿತ್ರದ ಸಕ್ಸಸ್ ಮೀಟ್ ಮಾಡಲಾಗಿದೆ. ಆದರೆ ಅದಕ್ಕೂ ಮುನ್ನ ನಿರ್ದೇಶಕ ಅನಿಲ್ ರಾವಿಪುಡಿ ಅವರನ್ನು ಮನೆಗೆ ಕರೆದು ಚಿರಂಜೀವಿದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ಚಿರಂಜೀವಿ ನೀಡಿದ ಗಿಫ್ಟ್ ರೇಂಜ್ ರೋವರ್ ಸ್ಪೋರ್ಟ್ಸ್ ಕಾರು. ಕಾರನ್ನು ಗಿಫ್ಟ್ ನೀಡುವ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮಾಹಿತಿಗಳ ಪ್ರಕಾರ ಕಾರಿನ ದರ 1.45 ಕೋಟಿ ರೂ. ಇಂದ ಆರಂಭ.
‘ಮನ ಶಂಕರವರಪ್ರಸಾದ್ಗಾರು’ ಚಿತ್ರಕ್ಕೆ ಅನಿಲ್ ದುಬಾರಿ ಸಂಭಾವನೆಯನ್ನು ಪಡೆದಿದ್ದರು. ಈಗ ದುಬಾರಿ ಕಾರು ಉಡುಗೊರೆಯಾಗಿ ಸಿಕ್ಕಿದೆ. ಅದರಲ್ಲೂ ಚಿರಂಜೀವಿ ಕಾರು ಗಿಫ್ಟ್ ಕೊಟ್ಟಿದ್ದಕ್ಕೆ ಅನಿಲ್ ಸಂತಸಗೊಂಡಿದ್ದಾರೆ.
ಅನಿಲ್ ನಿರ್ದೇಶನದ 9 ಸಿನಿಮಾಗಳು ಹಿಟ್ ಲಿಸ್ಟ್ನಲ್ಲಿವೆ. ‘ಮನ ಶಂಕರವರಪ್ರಸಾದ್ಗಾರು’ ಚಿತ್ರದಲ್ಲಿ ವಿಕ್ಟರಿ ವೆಂಕಟೇಶ್ ಸಹ ಅತಿಥಿ ಪಾತ್ರದಲ್ಲಿ ಪಾತ್ರದಲ್ಲಿ ನಟಿಸಿದ್ದಾರೆ. ವಿಕ್ಟರಿ ವೆಂಕಟೇಶ್ ನಟನೆಯ ‘ಸಂಕ್ರಾಂತಿಗೆ ವಸ್ತ’ ಚಿತ್ರ 2025ರ ಸಂಕ್ರಾಂತಿಗೆ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು, ಈ ಚಿತ್ರವನ್ನು ಅನಿಲ್ ರವಿಪುಡಿ ನಿರ್ದೇಶನ ಮಾಡಿದ್ದರು.
ಕೆಲವು ದಿನಗಳ ಹಿಂದೆ ಚಿರಂಜೀವಿ ಸಹೋದರ ಮತ್ತು ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ತಮ್ಮ ಸಿನಿಮಾ ‘ಓಜಿ’ಯನ್ನು ನಿರ್ದೇಶಿಸಿದ್ದ ಸುಜೀತ್ಗೆ ಒಂದು ಐಷಾರಾಮಿ ಕಾರು ಉಡುಗೊರೆಯಾಗಿ ನೀಡಿದ್ದರು. ಈಗ ಚಿರಂಜೀವಿ ಸಹ ಇದೇ ಹಾದಿಯಲ್ಲಿ ಸಾಗಿದ್ದಾರೆ.

