HomeKarnatakaನೆಲಸಮವಾಗಲಿದೆ ಬೆಂಗಳೂರು ನಗರದ ಈ ಫ್ಲೈ ಓವರ್

ನೆಲಸಮವಾಗಲಿದೆ ಬೆಂಗಳೂರು ನಗರದ ಈ ಫ್ಲೈ ಓವರ್

ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಫ್ಲೈ ಓವರ್ ನಿರ್ಮಾಣ ಮಾಡಲಾಗುತ್ತದೆ. ಆದರೆ ಈಗ ನಗರದಲ್ಲಿ ನಿರ್ಮಾಣಗೊಂಡಿರುವ ಫ್ಲೈ ಓವರ್ ಒಂದನ್ನು ನೆಲಸಮಗೊಳಿಸಲು ಟೆಂಡರ್ ಕರೆಯಲಾಗಿದೆ. ಇತ್ತೀಚಿಗೆ ನಗರದಲ್ಲಿ ನೆಲಸಮವಾಗುತ್ತಿರುವ 2ನೇ ಫ್ಲೈ ಓವರ್ ಇದಾಗಿದೆ.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಬೆಂಗಳೂರು ನಗರದ ನಮ್ಮ ಮೆಟ್ರೋ-3ನೇ ಹಂತದ ಯೋಜನೆಗೆ ಈಗಾಗಲೇ ಒಪ್ಪಿಗೆ ನೀಡಿವೆ. 44.65 ಕಿ.ಮೀ. ಉದ್ದದ ಯೋಜನೆಗೆ ಕಿತ್ತಳೆ ಮಾರ್ಗ ಎಂದು ನಾಮಕರಣ ಮಾಡಲಾಗಿದೆ. ಸುಮಾರು 4,187.41 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ.

2031ರಲ್ಲಿ ವಾಣಿಜ್ಯ ಸಂಚಾರ ಆರಂಭವಾಗಲಿದೆ ಎಂದು ಅಂದಾಜಿಸಿರುವ ಈ ಯೋಜನೆಗಾಗಿ ಫ್ಲೈ ಓವರ್ ಒಂದನ್ನು ನೆಲಸಮ ಮಾಡಬೇಕಿದೆ. ನಮ್ಮ ಮೆಟ್ರೋ ಹಳದಿ ಮಾರ್ಗದ ಯೋಜನೆಗಾಗಿ ಜಯದೇವ ಫ್ಲೈ ಓವರ್ ಒಡೆದು ಹಾಕಲಾಗಿತ್ತು. ಈಗ ಈ ಫ್ಲೈ ಓವರ್ ನೆಲಸಮ ಮಾಡಲು ಬಿಎಂಆರ್‌ಸಿಎಲ್ ಟೆಂಡರ್ ಕರೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಾವ ಫ್ಲೈ ಓವರ್?: ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ-3ನೇ ಹಂತದ ಯೋಜನೆಗಾಗಿ ಡಾಲರ್ಸ್‌ ಕಾಲೋನಿಯಲ್ಲಿರುವ ಫ್ಲೈ ಓವರ್ ಒಡೆದು ಹಾಕಲಿದೆ. ಇದಕ್ಕಾಗಿ ಟೆಂಡರ್ ಕರೆದಿದ್ದು, ಫ್ಲೈ ಓವರ್ ಒಡೆದು, ಸಿವಿಲ್ ಕಾಮಗಾರಿ ಮುಗಿದ ಬಳಿಕ ನಮ್ಮ ಮೆಟ್ರೋ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ.

ಈ ಫ್ಲೈ ಓವರ್ ಜೆಪಿ ನಗರ ಮತ್ತು ಸುತ್ತಮುತ್ತಲಿನ ಹಲವು ಪ್ರದೇಶಗಳಿಗೆ ಪ್ರಮುಖ ಸಂಪರ್ಕ ಕೊಂಡಿಯಾದೆ. ಡಾಲರ್ಸ್‌ ಕಾಲೋನಿ ಜಂಕ್ಷನ್‌ ಫ್ಲೈ ಓವರ್ ಒಡೆಯುವುದಕ್ಕೆ ಸ್ಥಳೀಯರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಆದರೆ ನಮ್ಮ ಮೆಟ್ರೋ ಯೋಜನೆ ವಿನ್ಯಾಸ ಬದಲಾವಣೆ ಮಾಡಲಾಗದ ಕಾರಣ ಫ್ಲೈ ಓವರ್ ಒಡೆಯುವುದು ಅನಿವಾರ್ಯವಾಗಿದೆ.

ಈ ಫ್ಲೈ ಓವರ್‌ ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. 2018ರಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಇದನ್ನು ಉದ್ಘಾಟಿಸಿದ್ದರು. ಬನ್ನೇರುಘಟ್ಟ ರಸ್ತೆ, ಮೈಸೂರು ರಸ್ತೆ ಹಾಗೂ ಜಯನಗರ ಸುತ್ತಮುತ್ತಲಿನ ಪ್ರದೇಶಗಳ ಸಂಚಾರಕ್ಕೆ ಫ್ಲೈ ಓವರ್ ಅನುಕೂಲವಾಗಿತ್ತು.

ಈಗ 1 ಕಿ.ಮೀ. ಫ್ಲೈ ಓವರ್ ಒಡೆಯುವ ಕಾರ್ಯ, ಬಳಿಕ ನಮ್ಮ ಮೆಟ್ರೋ ಕಾಮಗಾರಿಯ ಕಾರಣಕ್ಕೆ ಈ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಉಂಟಾಗಲಿದೆ. ಇದರಿಂದಾಗಿ ಪ್ರತಿದಿನ ಸಂಚಾರ ನಡೆಸುವ ಜನರಿಗೆ ಕಿರಿಕಿರಿ ತಪ್ಪಿದ್ದಲ್ಲ.

ನಮ್ಮ ಮೆಟ್ರೋ ಹಂತ-3 ಯೋಜನೆಯಡಿ ಡಬಲ್‌ ಡೆಕ್ಕರ್‌ ಫ್ಲೈ ಓವರ್ ನಿರ್ಮಾಣ ಮಾಡಲಾಗುತ್ತದೆ. ಆದ್ದರಿಂದ ಈಗಿರುವ ಫ್ಲೈ ಓವರ್ ಒಡೆದು ಮೆಟ್ರೋ ಮತ್ತು ವಾಹನ ಸಂಚಾರ ನಡೆಸುವ ಮಾದರಿಯ ಫ್ಲೈ ಓವರ್ ನಿರ್ಮಾಣ ಮಾಡಲಾಗುತ್ತದೆ.

ಡಾಲರ್ಸ್ ಕಾಲೋನಿ ನಿವಾಸಿಗಳು ಮೆಟ್ರೋ ಯೋಜನೆ ಸ್ವಾಗತಿಸಿದ್ದಾರೆ. ಆದರೆ ಫ್ಲೈ ಓವರ್ ಒಡೆಯುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು, ಸಂಚಾರ ಸಮಸ್ಯೆಗೆ ಪರಿಹಾರ ಏನು? ಎಂದು ಬಿಎಂಆರ್‌ಸಿಎಲ್ ಅನ್ನು ಪ್ರಶ್ನೆ ಮಾಡಿದ್ದಾರೆ.

ಮೆಟ್ರೋ ಯೋಜನೆ ವಿವರ

  • ನಮ್ಮ ಮೆಟ್ರೋ ಹಂತ-3 ಯೋಜನೆ. 44.65 ಕಿ.ಮೀ. ಉದ್ದ, ಎರಡು ಕಾರಿಡಾರ್
  • ಜೆ.ಪಿ.ನಗರ 4ನೇ ಹಂತ-ಕೆಂಪಾಪುರ ವಯಾ ಔಟರ್ ರಿಂಗ್ ರೋಡ್. 32.1 ಕಿ.ಮೀ.
  • ಹೊಸಹಳ್ಳಿ-ಕಡಬಗೆರೆ ವಯಾ ಮಾಗಡಿ ರೋಡ್. 12.5 ಕಿ.ಮೀ.
  • 3 ಹಂತದಲ್ಲಿ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣ
  • ಮೊದಲ ಹಂತ ಜೆ.ಪಿ.ನಗರ-ಕಾಮಾಕ್ಯ ಜಂಕ್ಷನ್
  • 2ನೇ ಹಂತ ಕಾಮಾಕ್ಯ-ನಾಗರಭಾವಿ ಸರ್ಕಲ್
  • 3ನೇ ಹಂತ ನಾಗರಭಾವಿ-ಸುಂಕದಕಟ್ಟೆ
  • 2024ರಲ್ಲಿ ಕೇಂದ್ರ ಸರ್ಕಾರ ನಮ್ಮ ಮೆಟ್ರೋ ಹಂತ-3ಕ್ಕೆ ಒಪ್ಪಿಗೆ ನೀಡಿದೆ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular