HomeLatest Newsಜ. 31 ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ: ಜಯಮಾಲಾ, ಭಾ.ಮಾ. ಹರೀಶ್ ಸ್ಪರ್ಧೆ

ಜ. 31 ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ: ಜಯಮಾಲಾ, ಭಾ.ಮಾ. ಹರೀಶ್ ಸ್ಪರ್ಧೆ

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ಜನವರಿ 31 ರಂದು ನಡೆಯಲಿದೆ. 2026- 27 ನೇ ಸಾಲಿಗೆ ಚುನಾವಣೆ ನಿಗದಿಯಾಗಿದ್ದು, ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಮತ್ತು ಕಾರ್ಯಕಾರಿ ಸಮಿತಿಗೆ ಹಲವರು ಸ್ಪರ್ಧಿಸಿದ್ದಾರೆ.

ಹಿರಿಯ ನಟಿ ಜಯಮಾಲಾ ಸ್ಪರ್ಧಿಸಿರುವುದು ವಿಶೇಷವಾಗಿದೆ. ಅವರ ವಿರುದ್ಧ ಭಾ.ಮಾ. ಹರೀಶ್ ಸ್ಪರ್ಧೆಯಲ್ಲಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಶಾಸಕ ಮುನಿರತ್ನ, ನಟಿ ಜಯಮಾಲಾ, ನಿರ್ಮಾಪಕರಾದ ಭಾ.ಮಾ ಹರೀಶ್, ಚಿಂಗಾರಿ ಮಹಾದೇವ್ ನಾಮಪತ್ರ ಸಲ್ಲಿಸಿದ್ದರು. ಇವರಲ್ಲಿ ಮುನಿರತ್ನ ಮತ್ತು ಚಿಂಗಾರಿ ಮಹಾದೇವ್ ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕರು, ವಿತರಕರು, ಪ್ರದರ್ಶಕ ವಲಯದಿಂದ ಒಬ್ಬೊಬ್ಬರು ಆಯ್ಕೆಯಾಗುವ ಅವಕಾಶವಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಸುಂದರರಾಜ್, ಕಮಲ, ಅನುತೇಜ, ಪ್ರಿಯಾ ಹಾಸನ್, ಕೆ. ಮಂಜು, ಡಾ. ಸುನಿಲ್ ಕುಮಾರ್ ಆರ್.ಎಂ., ಕಿಶೋರ್ ಕುಮಾರ್ ಎಂ.ಎನ್., ಬೆನಕ ರಮೇಶ್ ಆಕಾಂಕ್ಷಿಗಳಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

3 ವಲಯಗಳಿಂದ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆ ನಡೆಯಲಿದ್ದು, ಆರ್. ಸುಂದರರಾಜ್, ಕೆ.ಸಿ. ಅಶೋಕ್, ಜಿ ವೆಂಕಟೇಶ್, ರಮೇಶ್ ಬಾಬು, ಟಿ.ಪಿ. ಸಿದ್ದರಾಜು, ಎ. ಗಣೇಶ್, ಕೆ.ಎಂ. ವೀರೇಶ್, ಟೇಸಿ ವೆಂಕಟೇಶ್ ಸ್ಪರ್ಧೆಯಲ್ಲಿದ್ದಾರೆ.

ಖಜಾಂಚಿ ಸ್ಥಾನಕ್ಕೆ ಜಯಸಿಂಹ ಮುಸುರಿ, ಪಾರ್ಥಸಾರಥಿ, ಎನ್. ನರಸಿಂಹ ಹಾಗೂ ಮೋಹನ್ ಕುಮಾರ್ ಸ್ಪರ್ಧಿಸುತ್ತಿದ್ದಾರೆ.

ಕಾರ್ಯಕಾರಿ ಸಮಿತಿಗೆ ನಿರ್ಮಾಪಕರ ವಲಯದಿಂದ 16 ಮಂದಿಗೆ ಅವಕಾಶವಿದ್ದು, 39 ಮಂದಿ ಸ್ಪರ್ಧಿಸಿದ್ದಾರೆ. ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 13 ಸ್ಥಾನಗಳು ವಿತರಕರ ವಲಯಕ್ಕೆ ಮೀಸಲಾಗಿದ್ದು, 35 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಪ್ರದರ್ಶಕರ ವಲಯದಿಂದ 15 ಸ್ಥಾನಗಳು ಮೀಸಲಾಗಿದ್ದು, 8 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 12 ಮಂದಿ ಸ್ಪರ್ಧಿಗಳಿಗೆ ಚುನಾವಣೆ ನಡೆಯಲಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular