ಭಾರತ ಚುನಾವಣಾ ಆಯೋಗ, ಮುಖ್ಯ ಚುನಾವಣಾಧಿಕಾರಿಗಳು ನೀಡಿದ ನಿರ್ದೇಶನಗಳಂತೆ, ಜನವರಿ 25, 2026 ರಂದು ಜಿಲ್ಲಾ ಮಟ್ಟದ ಮತ್ತು ಮತಗಟ್ಟೆ ಪ್ರದೇಶಗಳ ಮಟ್ಟದಲ್ಲಿ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಥೀಮ್ My India, My Vote ಎಂಬ ಲೋಗೊದಲ್ಲಿ Citizen at the Heart of Indian Democracy ಎಂಬ tagline ದೊಂದಿಗೆ ಆಚರಣೆ ಮಾಡಲು ನಿರ್ದೇಶಿಸಿರುತ್ತಾರೆ.
ಶೈಕ್ಷಣಿಕ ಸಂಸ್ಥೆಗಳಲ್ಲಿ ಜನವರಿ 25, 2026 ರಂದು ಮತದಾರರ ಪ್ರತಿಜ್ಞಾ ವಿಧಿಯನ್ನು ತೆಗೆದುಕೊಳ್ಳುವಂತೆ ಕ್ರಮವಹಿಸಲು ಹಾಗೂ ಇಲಾಖೆಗಳ ಹಂತದಲ್ಲಿ ಅಧಿಕಾರಿ, ಸಿಬ್ಬಂದಿಗಳು ಜನವರಿ 23, 2026 ರ ಬೆಳಗ್ಗೆ 11 ಗಂಟೆಗೆ ಅಥವಾ ಕಛೇರಿ ವೇಳೆಯ ಸೂಕ್ತ ಸಮಯದಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ ಮತ್ತು ಒಡಂಬಡಿಕೆ ಮಾಡಿಕೊಂಡು ಮತದಾರರ ಪ್ರತಿಜ್ಞಾ ವಿಧಿ ಭೋದಿಸುವ, ಸ್ವೀಕರಿಸುವ ಮೂಲಕ ರಾಷ್ಟ್ರೀಯ ಮತದಾರರ ದಿನ-2026 ರ ಕಾರ್ಯಕ್ರಮವನ್ನು ಆಚರಿಸಲು ಎಲ್ಲಾ ಭಾಗೀದಾರರಿಗೂ ಸೂಚಿಸುವಂತೆ ಮತ್ತು ಈ ಬಗ್ಗೆ ವಾಟ್ಸಾಪ್ ಗ್ರೂಪ್‍ಗಳಲ್ಲಿ ಹಂಚಿಕೊಳ್ಳಲು ನಿರ್ದೇಶನ ನೀಡಿರುತ್ತಾರೆ.
ಎಲ್ಲ ಇಲಾಖೆಗಳು, ತಮ್ಮ ಮತ್ತು ಅಧೀನ ಕಛೇರಿಗಳಲ್ಲಿ ಜನವರಿ 23, 2026 ರ ಬೆಳಗ್ಗೆ 11 ಗಂಟೆಗೆ ಅಥವಾ ಕಛೇರಿ ವೇಳೆಯ ಸೂಕ್ತ ಸಮಯದಲ್ಲಿ ಮತದಾರರ ಪ್ರತಿಜ್ಞಾ ವಿಧಿ ಭೋದಿಸುವ, ಸ್ವೀಕರಿಸುವ ಮೂಲಕ ರಾಷ್ಟ್ರೀಯ ಮತದಾರರ ದಿನ-2026ರ ಕಾರ್ಯಕ್ರಮವನ್ನು ಕಡ್ಡಾಯವಾಗಿ ಆಚರಿಸಿ, ಛಾಯಾಚಿತ್ರಗಳೊಂದಿಗೆ ಜಿಲ್ಲಾಧಿಕಾರಿಗಳ ಕಛೇರಿಗೆ ವರದಿ ಸಲ್ಲಿಸುವುದು.
ಅಲ್ಲದೇ, 16ನೇ ರಾಷ್ಟ್ರೀಯ ಮತದಾರರ ದಿನಾಚರಣೆ-2026ರ ನನ್ನ ಭಾರತ ನನ್ನ ಮತ (ಭಾರತೀಯ ಪ್ರಜಾಪ್ರಭುತ್ವದ ಹೃದಯದಲ್ಲಿ ಭಾರತೀಯ ನಾಗರಿಕ) My India, My Vote (Citizen at the Heart of Indian) ಎಂಬ ವಿಶೇಷ ಧೈಯವಾಕ್ಯವನ್ನು ಎಲ್ಲ ಇಲಾಖೆಗಳ ಅಧಿಕೃತ ಪತ್ರ ವ್ಯವಹಾರಗಳಲ್ಲಿ, ಬಳಕೆ ಮಾಡುವುದು ಹಾಗೂ ಈ ಬಗ್ಗೆ ತಮ್ಮ ಅಧಿಕೃತ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ಹಮ್ಮಿಕೊಳ್ಳಬೇಕೆಂದು ಧಾರವಾಡ ಪ್ರಭಾರ ಜಿಲ್ಲಾಧಿಕಾರಿಗಳು ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

