ಬೆಂಗಳೂರು : ಮಹಿಳೆಯನ್ನು ಕೊಚ್ಚಿ ಕೊಂದಿದ್ದ ಆರೋಪಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ಕೊಳೂರಿನಲ್ಲಿ 69 ವರ್ಷದ ವೀರಭದ್ರಯ್ಯ ಎಂಬಾತ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಕಳೆದ ಶನಿವಾರ ಈತ ದಾಕ್ಷಾಯಿಣಮ್ಮನನ್ನು ಕೊಚ್ಚಿ ಕೊಂದಿದ್ದನು. ನಂತರ ಈತ ಪರಾರಿಯಾಗಿದ್ದನು.
ಆದರೆ ಈತ ಅಕ್ಕನ ತೋಟದಲ್ಲಿ ನೇಣು ಬಿಗಿದುಕೊಂಡು ಸೂಸೈಡ್ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಹಣಕಾಸಿನ ವಿಚಾರಕ್ಕೆ ಜಗಳ ನಡೆದು ದಾಕ್ಷಾಯಿಣಮ್ಮನನ್ನು ಈತ ಕೊಚ್ಚಿ ಕೊಂದಿದ್ದನು ಎನ್ನಲಾಗಿತ್ತು. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

