HomeLatest Newsಲಾಲ್ ಬಾಗ್ ನಲ್ಲಿ 'ಫ್ಲವರ್ ಶೋ'ಗೆ ನಾಳೆ CM ಸಿದ್ದರಾಮಯ್ಯ ಚಾಲನೆ , ಈ ಬಾರಿಯ...

ಲಾಲ್ ಬಾಗ್ ನಲ್ಲಿ ‘ಫ್ಲವರ್ ಶೋ’ಗೆ ನಾಳೆ CM ಸಿದ್ದರಾಮಯ್ಯ ಚಾಲನೆ , ಈ ಬಾರಿಯ ವೈಶಿಷ್ಟ್ಯತೆ ಏನು.?

ಬೆಂಗಳೂರು : ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಬದುಕು–ಬರಹ ವಿಷಯ ಆಧಾರಿತ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನವು ಲಾಲ್ ಬಾಗ್’ನಲ್ಲಿ ನಾಳೆಯಿಂದ ಜನವರಿ 26ರವರೆಗೆ ನಡೆಯಲಿದೆ.

ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿರುವ 219ನೇ ಫಲಪುಷ್ಪ ಪ್ರದರ್ಶನಕ್ಕೆ ವೇದಿಕೆ ಸಜ್ಜುಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ (ಜನವರಿ 14) ಸಂಜೆ 4ಕ್ಕೆ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.

ಈ ಬಾರಿಯ ವೈಶಿಷ್ಟ್ಯತೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತೇಜಸ್ವಿ ಅವರ ಜೀವನ, ಸಾಧನೆ, ಪ್ರಕೃತಿ ಜೊತೆಗಿನ ಒಡನಾಟವನ್ನು ಪುಷ್ಪಗಳಲ್ಲಿ ಅನಾವರಣಗೊಳಿಸಲಾಗುತ್ತಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ 10 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆ ಇದೆ.

ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ದಟ್ಟ ಕಾಡಿನ ಮಡಿಲಿನಲ್ಲಿರುವ 1,800 ಚದರ ಅಡಿಯಲ್ಲಿ ಬೃಹತ್ ಬೆಟ್ಟ, ಜಲಪಾತದ ಮಾದರಿ ನಿರ್ಮಿಸಲಾಗುತ್ತಿದೆ. ಇದರ ಮುಂಭಾಗದಲ್ಲಿಯೇ ತೇಜಸ್ವಿಯವರ ನಿರುತ್ತರ ಮನೆಯ ಪುಷ್ಪ ಮಾದರಿ, ಅದರ ಮುಂದೆ ನಾಲ್ಕು ಅಡಿ ಎತ್ತರದ ತೇಜಸ್ವಿ–ರಾಜೇಶ್ವರಿ ಅವರ ಪ್ರತಿಮೆಗಳು, ಸ್ಕೂಟರ್ ಮತ್ತು ಕರ್ವಾಲೊ ಕಾದಂಬರಿಯ ಪಾತ್ರವಾದ ಕಿವಿ ನಾಯಿ, ಕರಿಯಪ್ಪ, ಮಂದಣ್ಣ, ತೇಜಸ್ವಿ ಅವರ ಆಸಕ್ತಿಯನ್ನು ನೆನಪಿಸುವ ಹಾರುವ ಓತಿ, ಮಿಡತೆ, ಜೇನುಹುಳು ಸೇರಿದಂತೆ ವಿವಿಧ ಪ್ರಾಣಿ ಪಕ್ಷಿಗಳು ಇರಲಿವೆ.

ಕುವೆಂಪು–ಹೇಮಾವತಿ, ಶಿವರಾಮ ಕಾರಂತ, ರಾಮಮನೋಹರ ಲೋಹಿಯಾ ಮತ್ತು ರಾಜೇಶ್ವರಿ ತೇಜಸ್ವಿಯರ ಪ್ರತಿಮೆಗಳು ರಾರಾಜಿಸಲಿವೆ. ಗಾಜಿನ ಮನೆಯ ಬಲಬದಿಯಲ್ಲಿ ತೇಜಸ್ವಿಯವರ ವ್ಯಂಗ್ಯಚಿತ್ರ, ಪ್ರತಿಮೆಗಳು ಹಾಗೂ ಅವರ ಪುಸ್ತಕದ ಪಾತ್ರಗಳು ಇರಲಿವೆ. ಎಡಬದಿಯಲ್ಲಿ ಮಂತ್ರ ಮಾಂಗಲ್ಯ ಪರಿಕಲ್ಪನೆಯ ವರ್ಟಿಕಲ್ ಗಾರ್ಡನ್ ನಿರ್ಮಿಸಲಾಗುತ್ತಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular