HomeLatest News'ಮಕರ ಸಂಕ್ರಾಂತಿ' ಹಬ್ಬದ ಪ್ರಯುಕ್ತ ನಾಳೆಯಿಂದ ‘ರಂಗ ಸಂಕ್ರಾಂತಿ' ನಾಟಕೋತ್ಸವ

‘ಮಕರ ಸಂಕ್ರಾಂತಿ’ ಹಬ್ಬದ ಪ್ರಯುಕ್ತ ನಾಳೆಯಿಂದ ‘ರಂಗ ಸಂಕ್ರಾಂತಿ’ ನಾಟಕೋತ್ಸವ

ಶಿವಮೊಗ್ಗ : ಶಿವಮೊಗ್ಗವು ರಂಗಬೆಳಕು (ರಿ), ಶಿವಮೊಗ್ಗ ಹಾಗೂ ಕಡೆಕೊಪ್ಪಲ ಪ್ರತಿಷ್ಠಾನ (ರಿ), ಶಿವಮೊಗ್ಗ ಇವರ ಸಹಯೋಗದಲ್ಲಿ ದಿನಾಂಕ:14-01-2026 ರಿಂದ 19-01-2026 ರವರೆಗೆ ‘ರಂಗ ಸಂಕ್ರಾಂತಿ’ ನಾಟಕೋತ್ಸವ -2026 ಕಾರ್ಯಕ್ರಮವನ್ನು ಆಯೋಜಿಸಿದೆ.

ಆರು ದಿನಗಳು ನಡೆಯಲಿರುವ ಈ ನಾಟಕೋತ್ಸವದಲ್ಲಿ ಜ.14 ರಂದು ಹುಲಗಪ್ಪ ಕಟ್ಟಿಮನಿ ನಿರ್ದೇಶನದ ಕಾಲಚಕ್ರ, ಜ.15 ರಂದು ಶಕೀಲ್ ಅಹ್ಮದ್ ನಿರ್ದೇಶನದ ಕೊಡಲ್ಲ ಅಂದ್ರೆ ಕೊಡಲ್ಲ, ಜ. 16 ರಂದು ಪ್ರಕಾಶ ಗರುಡ ನಿರ್ದೇಶನದ ಕಂದಗಲ್ಲ ಭಾರತ, ಜ. 17 ರಂದು ಜಿ.ಪರಶುರಾಮ್ ಸೂರನಕದ್ದೆ ನಿರ್ದೇಶನದ ಅತ್ತೆಗೊಂದು ಕಾಲ ಸೊಸೆಗೊಂದು ಕಾಲ, ಜ. 18 ರಂದು ಮಹಾತ್ಮರ ಬರುವಿಗಾಗಿ ಹಾಗೂ ಜ. 19 ರಂದು ಬಿ.ಆರ್. ವೆಂಕಟರಮಣ ಐತಾಳ ನಿರ್ದೇಶನದ ಗುಲಾಮನ ಸ್ವಾತಂತ್ರö್ಯ ಯಾತ್ರೆ ಎಂಬ ನಾಟಕಗಳು ಪ್ರತಿ ದಿನ ಸಂಜೆ 6.30ಕ್ಕೆ ಸುವರ್ಣ ಸಂಸ್ಕೃತಿ ಭವನ, ಅಶೋಕ ನಗರ, ಶಿವಮೊಗ್ಗದಲ್ಲಿ ಪ್ರದರ್ಶನಗೊಳ್ಳಲಿವೆ.

ಟಿಕೆಟ್ ದರ ಒಂದು ನಾಟಕಕ್ಕೆ ರೂ.30/-. ಕಲಾಭಿಮಾನಿ ಈ ನಾಟಕೋತ್ಸವಕ್ಕೆ ಆಗಮಿಸಿ ಯಶಸ್ವಿಗೊಳಿಸುವಂತೆ ರಂಗಾಯಣದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular